ಕ್ರಿಕೆಟ್ :
ಭಾರತ ಮತ್ತು ಪಾಕ್ ನಡುವಿನ ಪ್ರತೀಕಾರ ಸಮರ ಜೋರಾಗ್ತಿದೆ. ಭದ್ರತಾ ಕಾರಣಗಳಿಂದ ಈ ಬಾರಿಯ ಐಪಿಎಲ್ ಟೂರ್ನಿಯನ್ನ ಬಿಸಿಸಿಐ 1 ವಾರಗಳ ಕಾಲ ಸ್ಥಗಿತಗೊಳಿಸಿದೆ. ನಿನ್ನೆ ನಡೆದ ಸಭೆಯಲ್ಲಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.
ನಿಗದಿಯಾಗಿದ್ದ ಎಲ್ಲಾ ಪಂದ್ಯಗಳ 1 ವಾರಗಳ ಕಾಲ ಅಮಾನತುಗೊಳಿಸಿದೆ. ಪರಿಸ್ಥಿತಿ ನೋಡಿಕೊಂಡು ಪರಿಷ್ಕೃತ ವೇಳಾಪಟ್ಟಿಯನ್ನ ಶೀಘ್ರದಲ್ಲೇ ಪ್ರಕಟಿಸೋದಾಗಿ ಬಿಸಿಸಿಐ ಹೇಳಿದೆ. ಇನ್ನೂ ನಾಲ್ಕು ಪ್ಲೇ ಆಫ್ಸ್ ಪಂದ್ಯಗಳೂ ಸೇರಿ 16 ಪಂದ್ಯಗಳು ಬಾಕಿ ಇವೆ. ಸದ್ಯ ಬಿಸಿಸಿಐ ಆಟಗಾರ ರು ಮತ್ತು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿದೆ. ಆಟಗಾರರನ್ನು ಮನೆಗಳಿಗೆ ಸುರಕ್ಷಿತವಾಗಿ ಕಳುಹಿಸುವ ವ್ಯವಸ್ಥೆಗಳ ಬಗ್ಗೆ ಗಮನಹರಿಸಿದೆ. ಉದ್ವಿಗ್ನತೆ ಶಮನವಾದ ಬಳಿಕ ಹೊಸ ದಿನಾಂಕಗಳನ್ನ ಪ್ರಕಟಿಸಲಿದೆ ಎಂದು ಬಿಸಿಸಿಐ, ಐಪಿಎಲ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿವೆ.