ಶಿರಾ : ಗಬ್ಬೇದ್ದು ನಾರುತ್ತಿವೆ ಶಿರಾ ನಗರದ ಚರಂಡಿಗಳು

ಶಿರಾ ನಗರದ 24 ನೇ ವಾರ್ಡ್‌ ನಲ್ಲಿ ಕಸದ ರಾಶಿ ಬಿದ್ದಿರುವುದು.
ಶಿರಾ ನಗರದ 24 ನೇ ವಾರ್ಡ್‌ ನಲ್ಲಿ ಕಸದ ರಾಶಿ ಬಿದ್ದಿರುವುದು.
ತುಮಕೂರು

ಶಿರಾ:

ಶಿರಾ ನಗರ ಅದೆಷ್ಟು ಬೆಳೆದರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ. ಅದರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ. ಹೌದು ಶಿರಾ ನಗರದ ಬಹುತೇಕ ಏರಿಯಾಗಳಲ್ಲಿರೋ ಚರಂಡಿಗಳು ಕಸದಿಂದ ತುಂಬಿ ಹೋಗಿದ್ದು, ಚರಂಡಿಗಳು ಗಬ್ಬೇದ್ದು ನಾರುತ್ತಿವೆ. ಕಸ ಎತ್ತದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಚರಂಡಿಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಅಕ್ಕ ಪಕ್ಕದ ನಿವಾಸಿಗಳು ರೋಗಕ್ಕೆ ತುತ್ತಾಗುವ ಭೀತಿಯಲ್ಲಿ ಸ್ಥಳೀಯರಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮೇಲಾಧಿಕಾರಿಗಳ ತಾರತಮ್ಯ ಧೋರಣೆಯೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ದೂರು ದಾಖಲಿಸುತ್ತಿದ್ದಾರೆ.

ಅಧಿಕಾರಿಗಳು ತಮ್ಮ ಇಷ್ಟ ಬಂದ ವಾರ್ಡ್‌ಗಳಿಗೆ, ಯಾವ ಸದಸ್ಯರು ಪ್ರಭಾವಶಾಲಿಗಳಾಗಿರುತ್ತಾರೋ ಅಂತಹ ವಾರ್ಡ್‌ಗಳಿಗೆ ಮಾತ್ರ ಸಿಬ್ಬಂದಿಯನ್ನು ಕಳುಹಿಸಿಕೊಡುವ ಮೂಲಕ ಅಣತಿಗೆ ತಕ್ಕಂತೆ ಕೆಲಸ ಮಾಡ್ತಾರೆ. ಕೆಲವೇ ವಾರ್ಡ್‌ಗಳನ್ನು ಬಿಟ್ಟರೆ, ಇತರೆ ವಾರ್ಡ್‌ಗಳಲ್ಲಿ  ಸ್ವಚ್ಛತೆ ಮರೀಚಿಕೆಯಾಗಿದೆ ಅಂತಾ ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ.

ನಗರದ 24ನೇ ವಾರ್ಡ್ ಗಳಲ್ಲಿ ಸ್ವಚ್ಛತಾ  ಸಮಸ್ಯೆ ಅಧಿಕವಾಗಿದ್ದು, ಇದರಿಂದಾಗಿ ಅವರು ನಿಗದಿತ ಅವಧಿಯೊಳಗೆ ನಗರದ ಸ್ವಚ್ಛತೆ ಮಾಡಲಾಗುತ್ತಿಲ್ಲ ಎನ್ನಲಾಗಿದೆ. ಸ್ವಚ್ಛತಾ ಸಿಬ್ಬಂದಿಗಳು  ವಾರ್ಡ್‌ಗೆ 1–2 ತಿಂಗಳಿಗೆ ಒಮ್ಮೆ ಭೇಟಿ ನೀಡಿ,  ಚರಂಡಿಗಳ ಮೇಲೆ ಬೆಳೆದಿರುವ ಗಿಡಗಂಟಿ ಕಡಿದು, ಚರಂಡಿ ಸ್ವಚ್ಛ ಮಾಡಿ ಹೋಗುತ್ತಾರೆ. ಆದರೆ ಚರಂಡಿಗಳಲ್ಲಿ ಬಿದ್ದಿರುವ ಕಸ, ಪ್ಲಾಸ್ಟಿಕ್‌ನನ್ನು ಮಾತ್ರ ಎತ್ತದೇ ಹೋಗ್ತಾರೆ ಇದರಿಂದ ಸಮಸ್ಯೆ ಹೆಚ್ಚಾಗಿದೆ ಎಂದು ನಿವಾಸಿಗಳು ಆರೋಪ ಮಾಡ್ತಿದ್ದಾರೆ.

ಇನ್ನಾದರೂ ಪುರಸಭೆ ಅಧಿಕಾರಿಗಳು ಎಚ್ಚೆತ್ತು ನಗರದ ಎಲ್ಲಾ ವಾರ್ಡ್‌ಗಳಲ್ಲಿನ ಚರಂಡಿ ಸಮಸ್ಯೆಗಳಿಗೆ ಮುಕ್ತಿ ಕೊಡಿಸ್ತಾರಾ ಎಂದು ಕಾದುನೋಡಬೇಕಿದೆ.

Author:

...
Editor

ManyaSoft Admin

Ads in Post
share
No Reviews