CHANNAI: ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ ರವಿಚಂದರ್ ಮತ್ತು ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಸಿಇಒ ಕಾವ್ಯಾ ಮಾರನ್ ನಡುವೆ ಪ್ರೇಮಸಂಬಂಧವಿದೆ ಎಂಬ ಗಾಸಿಪ್ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇವರಿಬ್ಬರೂ ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಮಾಹಿತಿ ಹಲವು ವೆಬ್‌ಸೈಟ್‌ಗಳು ಹಾಗೂ ಪೋಸ್ಟ್‌ಗಳ ಮೂಲಕ ವೈರಲ್ ಆಗುತ್ತಿದೆ. ಅಲ್ಲದೇ, ಇತ್ತೀಚೆಗೆ ಮದುವೆಯ ಯೋಜನೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಆದರೆ ಇಲ್ಲಿತನಕ ಅನಿರುದ್ ಆಗಲಿ ಕಾವ್ಯಾ ಮಾರನ್ ಆಗಲಿ ಇಬ್ಬರೂ ಈ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
ಈ ವದಂತಿಗೆ ಉತ್ತೇಜನ ನೀಡಿರುವುದು, ರೆಡ್ಡಿಟ್‌ನಲ್ಲಿ ವೈರಲ್ ಆದ ಪೋಸ್ಟ್. ಈ ಪೋಸ್ಟ್‌ನಲ್ಲಿ ಇಬ್ಬರ ವೈಯಕ್ತಿಕ ಕ್ಷಣಗಳ ಕುರಿತು ಮಾಹಿತಿ ರಿವೀಲ್ ಆಗಿದೆ. ಇದು ಅಭಿಮಾನಿಗಳ ಗಮನ ಸೆಳೆದಿದ್ದು, ಟ್ವಿಟರ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಚರ್ಚೆಗೆ ಗ್ರಾಸವಾಗಿದೆ.