IPL 2025 : 10 ವರ್ಷಗಳ ಇತಿಹಾಸವನ್ನು ಬದಲಿಸುತ್ತಾ ಆರ್‌ಸಿಬಿ

CRICKET : ಒಂದು ವಾರದ ನಂತರ ಮೇ 17 ರಿಂದ ಐಪಿಲ್‌ ಪುನಃ ಆರಂಭವಾಗಿದ್ದು, ಆರ್‌ಸಿಬಿಯು ಕೆಕೆಆರ್‌ ತಂಡವನ್ಈನು ಎದುರಿಸಲಿದೆ. ಇನ್ನು ನಾಳೆಯ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಪ್ಲೇಆಫ್‌ನಲ್ಲಿ ತನ್ನ ಸ್ಥಾನವನ್ನು ದೃಢಮಾಡಿಕೊಳ್ಳುತ್ತದೆ,

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್‌ ವಿರುದ್ದ ಆರ್‌ಸಿಬಿ ತಂಡದ ಪ್ರದರ್ಶನ ಉತ್ತಮವಾಗಿಲ್ಲ. ಅಲ್ಲದೇ 2015 ರಿಂದಲೂ ಆರ್‌ಸಿಬಿ ಯು ತನ್ನ ತವರು ನೆಲದಲ್ಲಿ ಕೆಕೆಆರ್‌ ಒಂದು ಬಾರಿಯೂ ಅದನ್ನು ಸೋಲಿಸಲು ಸಾಧ್ಯವಾಗಿಲ್ಲ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ 12 ಪಂದ್ಯಗಳು ನಡೆದಿದ್ದವೆ. ಆದರೆ ಬೆಂಗಳೂರು ಕೇವಲ 4 ಪಂದ್ಯಗಳಲ್ಲಿ ಗೆದಿದ್ದು, ಕೋಲ್ಕಾತವು 8 ಪಂದ್ಯಗಳನ್ನು ಗೆದಿದ್ದೆ. ಕೆಕೆಆರ್‌ ವಿರುದ್ದ 15 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿರುವ ಆರ್‌ಸಿಬಿ, 20 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ.

ಆದರೆ ಈಗ ಹಳೆಯ ದಾಖಲೆಗಳನ್ನು ಮುರಿಯ ಬೇಕಿದೆ. ಅಲ್ಲದೇ ಈ ಬಾರಿ  ಆರ್‌ಸಿಬಿಯ ಅನೇಕ ದಾಖಲೆಗಳನ್ನು ರಜತ್‌ ಪಾಟಿದಾರ್‌ ನಾಯಕ 17 ವರ್ಷಗಳ ನಂತರ ಚೆಪಾಕ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು 10 ವರ್ಷಗಳ ನಂತರ ಮುಂಬೈ ಇಂಡಿಯನ್ಸ್‌ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ.

ಆದರೆ ಈ ಬಾರಿ ಐಪಿಲ್‌ನಲ್ಲಿ ಆರ್ಸಿಬಿ ತಂಡವು ಅದ್ಬುತ ಪ್ರದರ್ಶನ ನೀಡಿದೆ. ಹಾಗೂ ಆರ್‌ಸಿಬಿಯು ಇಂದುವರೆಗೂ 11 ಪಂದ್ಯಗಳಲ್ಲಿ ಆಡಿದ್ದು, 8 ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿ 16 ಅಂಕಗಳನ್ನು ಪಡೆದುಕೊಂಡಿದೆ. ಮೇ 17 ರಂದು ನಡೆಯುವ ಕೆಕೆಆರ್‌ತಂಡವನ್ನು ಸೋಲಿಸಿದರೆ, ಪ್ಲೇಆಫ್‌ ಸ್ಥಾನ ದೃಢವಾಗುತ್ತದೆ.ಆದರೆ ಈ ಹಳೆಯ ದಾಖಲೆಯನ್ನು ಮುರಿಯುವುದು ಆರ್‌ಸಿಬಿಗೆ ದೊಡ್ಡ ಸವಾಲಾಗಿದೆ. ಈ ಪಂದ್ಯದ ಫಲಿತಾಂಶವು ಎರಡೂ ತಂಡಗಳ ಭವಿಷ್ಯವನ್ನು ನಿರ್ಧರಿಸುತ್ತದೆ.

Author:

...
Keerthana J

Copy Editor

prajashakthi tv

share
No Reviews