Newdelhi : ಭಾರತ–ಜಪಾನ್ ನಡುವೆ ಬಲಿಷ್ಠ ಸಂಬಂಧದತ್ತ ಹೊಸ ಹೆಜ್ಜೆ

NEWDELHI : ಭಾರತದ ವೇಗದ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಸಹಕಾರದ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಪ್ರಧಾನಿ ಮೋದಿಯವರು ಜಪಾನ್‌ನ ಹಣಕಾಸು ಸಚಿವಾಲಯದ ಉನ್ನತಾಧಿಕಾರಿ ಮಸಾಟೋ ಕಾಂಡಾ ಅವರೊಂದಿಗೆ ಅಮೂಲ್ಯ ಮಾತುಕತೆ ನಡೆಸಿದ್ದಾರೆ.

ಈ ಭೇಟಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡು, "ಮಿಸ್ಟರ್ ಮಸಾಟೋ ಕಾಂಡಾ ಅವರೊಂದಿಗೆ ಈ ಭೇಟಿಯು ಅದ್ಭುತ ಭೇಟಿಯಾಗಿತು. ವಿಭಿನ್ನ ವಿಷಯಗಳ ಬಗ್ಗೆ ನಾವಿಬ್ಬರೂ ಮಾತಾಡಿದ್ದೇವೆ. ಕಳೆದ ದಶಕದಲ್ಲಿ ಭಾರತ ನಡೆಸಿದ ವೇಗದ ಪರಿವರ್ತನೆ ಕೋಟ್ಯಾಂತರ ಜನರಿಗೆ ಶಕ್ತಿಯುತವಾದ ಅವಕಾಶಗಳನ್ನು ನೀಡಿದ್ದು, ಈ ಪ್ರಗತಿಯ ಪಯಣಕ್ಕೆ ಇನ್ನಷ್ಟು ವೇಗ ನೀಡಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

ಹೌದು ಭಾರತದ ಮಹತ್ವಾಕಾಂಕ್ಷೆಯ ವಿಕಸಿತ ಭಾರತ 2047 ದೃಷ್ಟಿಕೋನಕ್ಕೆ ಆಸಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಸಂಪೂರ್ಣ ಬೆಂಬಲ ನೀಡಲಿದ್ದು, ಮುಂದಿನ ಐದು ವರ್ಷಗಳಲ್ಲಿ $10 ಬಿಲಿಯನ್ (ಅಂದಾಜು ₹83,000 ಕೋಟಿ) ಹೂಡಿಕೆಯನ್ನು ಭಾರತದಲ್ಲಿ ಪೌರಾಡಳಿತ ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಾಗಿಸಲು ಜಪಾನ್ ನಿರ್ಧರಿಸಿದೆ.‌

ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮಸಾಟೋ ಕಾಂಡಾ, ಈ ವಿಚಾರವನ್ನು ನೇರವಾಗಿ ತಿಳಿಸಿದ್ದು, ಯೋಜನೆಯ ಅಡಿಯಲ್ಲಿ ನಗರ ಮಟ್ಟದ ಮೂಲಸೌಕರ್ಯ ಅಭಿವೃದ್ಧಿ, ಮೆಟ್ರೋ ಜಾಲದ ವಿಸ್ತರಣೆ, ಹೊಸ ಪ್ರಾದೇಶಿಕ ವೇಗದ ಸಾರಿಗೆ ವ್ಯವಸ್ಥೆ (RRTS) ಮಾರ್ಗಗಳ ನಿರ್ಮಾಣ, ನಗರ ಸೇವೆಗಳ ಆಧುನೀಕರಣ ಮುಂತಾದ ವಲಯಗಳಲ್ಲಿ ಹೂಡಿಕೆ ಆಗಲಿದೆ ಎಂದು ತಿಳಿಸಿದರು. ಭಾರತದ 1.4 ಬಿಲಿಯನ್ ಜನರ ಒಳಗೊಂಡಂತೆ ಸಮಾನ, ಸುಸ್ಥಿರ ಮತ್ತು ಪ್ರತ್ಯಾಹಾತ್ಮಕ ಬೆಳವಣಿಗೆಯ ಹಾದಿಯಲ್ಲಿ ದೇಶ ಸಾಗಲು, ADB ತನ್ನ ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

 

 

Author:

...
Sushmitha N

Copy Editor

prajashakthi tv

share
No Reviews