ನವದೆಹಲಿ :
ಕಳೆದ ಎರಡು ಮೂರು ದಿನಗಳಿಂದ ಭಾರತ ಮತ್ತು ಪಾಕ್ ನಡುವೆ ಯುದ್ಧ ನಡೆಯುತ್ತಿದ್ದು, ಸದ್ಯ ಈ ಯುದ್ಧಕ್ಕೆ ಕದನ ವಿರಾಮ ಘೋಷಣೆಯಾಗಿದೆ. ಹೌದು ಭಾರತ ಹಾಗೂ ಪಾಕಿಸ್ತಾನದ ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದು, ಈ ಬಗ್ಗೆ ವಿದೇಶಾಂಗ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಇಂದು ಸಂಜೆ 5 ಗಂಟೆಯಿಂದಲೇ ಎರಡು ದೇಶಗಳ ನಡುವಿನ ಯುದ್ಧಕ್ಕೆ ಕದನ ವಿರಾಮ ಘೋಷಣೆ ಜಾರಿಗೆ ಬರಲಿದೆ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಸುದ್ದಿಗೋಷ್ಠಿ ನಡೆಸುವ ಮೂಲಕ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮೇ 12 ರಂದು ಎರಡು ದೇಶಗಳ ನಡುವೆ ಮಾತುಕತೆಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ದಾಳಿ ಮೇಲೆ ದಾಳಿ ನಡೆಯುತ್ತಿದ್ದು, ಎರಡು ದೇಶಗಳ ನಡುವೆ ಯುದ್ಧದ ಕಾರ್ಮೋಡ ಏರ್ಪಟ್ಟಿತ್ತು. ಎರಡು ದೇಶಗಳ ನಡುವೆ ಶಾಂತಿಯ ಮಾತುಕತೆಗೆ ಕೆಲವು ದೇಶಗಳು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದವು. ಅದರಲ್ಲಿ ಅಮೇರಿಕ ಕೂಡ ಒಂದಾಗಿತ್ತು. ಭಾರತದ ಜೊತೆ ಉತ್ತಮ ಸಂಬಂಧ ಹೊಂದಿರೋ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು. ಭಾರತ, ಪಾಕಿಸ್ತಾನ ಎರಡು ದೇಶಗಳ ನಡುವೆ ಮಾತುಕತೆ ನಡೆಸಿರೋ ಟ್ರಂಪ್, ಯುದ್ಧಕ್ಕೆ ಪೂರ್ಣ ಮತ್ತು ತಕ್ಷಣ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಡೋನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಬಳಿಕ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ವಿಕ್ರಮ್ ಸುದ್ದಿಗೋಷ್ಠಿ ನಡೆಸುವ ಮೂಲಕ ಕದನ ವಿರಾಮದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಪಾಕ್ ಮೇಲೆ ಭಾರತ ನಡೆಸಿದ ದಾಳಿಯಿಂದಾಗಿ ಪಾಕ್ ತತ್ತರಿಸಿ ಹೋಗಿತ್ತು. ಉಗ್ರರ ಅಡಗು ತಾಣಗಳನ್ನೇ ಗುರಿಯಾಗಿಸಿಕೊಂಡು ಭಾರತ ಯುದ್ದ ನಡೆಸಿತ್ತು. ಪಾಕ್ ಯಾವಾಗ ತನ್ನ ಸೈನವನ್ನು ಬಿಟ್ಟು ಗಡಿ ಪ್ರದೇಶದ ಅಮಾಯಕರ ಮೇಲೆ ದಾಳಿ ನಡೆಯಲು ಯತ್ನಿಸಿತ್ತು. ಇದರಿಂದ ಸಿಟ್ಟಿಗೆದ್ದ ಭಾರತ ನೇರವಾಗಿಯೇ ಪಾಕಿಸ್ತಾನದ ಮೇಲೆ ಯುದ್ಧಕ್ಕೆ ತೊಡೆತಟ್ಟಿ ನಿಂತಿತ್ತು. ಪಾಕ್ ನಡೆಸುತ್ತಿದ್ದ ದಾಳಿಗೆ ಪ್ರತ್ಯುತ್ತರ ನೀಡುತ್ತ ಬಂದಿತ್ತು. ಜೊತೆಯಲ್ಲಿ ಪಾಕ್ ನ ಡ್ರೋನ್‌ಗಳು, ಮಿಸೈಲ್‌ಗಳು ಉಡಾಯಿಸಿದ್ದಲ್ಲದೆ. ಉಗ್ರ ಮಸೂಜ್ ಅಜಾದ್ ತಂಗುದಾಣದ ಮೇಲೆಯೇ ದಾಳಿ ನಡೆಸಿತ್ತು. ಭಾರತದ ದಾಳಿಗೆ ಪಾಕ್ ಅಕ್ಷರಶಃ ತತ್ತರಿಸಿ ಹೋಗಿದ್ದು, ಕದನ ವಿರಾಮಕ್ಕಾಗಿ ಅಮೇರಿಕಾದ ಮೊರೆ ಕೂಡ ಹೋಗಿದ್ದು ಟ್ರಂಪ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮವಾಗಿದ್ದು ಎರಡು ದೇಶಗಳ ನಾಗರೀಕರ ನಡುವೆ ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.