ತಿಪಟೂರು : ಉಗ್ರರ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಮುಸ್ಲಿಂ ಬಾಂಧವರು

ತಿಪಟೂರು:

ಕಾಶ್ಮೀರಾದ ಪಹಲ್ಗಾಮ್‌ ಪ್ರದೇಶದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ನಡೆದ ಉಗ್ರರ ನರಮೇಧದ ಕೃತ್ಯಕ್ಕೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದೆ. ದೇಶದ ಹಲವೆಡೆ ಉಗ್ರರ ಕೃತ್ಯ ಖಂಡಿಸಿ ಪ್ರತಿಭಟನೆ ನಡೆಸಿ, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಇತ್ತ ತಿಪಟೂರಿನ ಮದೀನ ಮಸೀದಿಯಲ್ಲಿ ನೂರಾರು ಮಂದಿ ಮುಸ್ಲಿಂ ಬಾಂಧವರು ಉಗ್ರರ ಕೃತ್ಯ ಖಂಡಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ನೂರಾರು ಮಂದಿ ಮುಸ್ಲಿಂ ಬಾಂಧವರು ಭಾಗಿಯಾಗಿದ್ದು ವಿಶೇಷವಾಗಿತ್ತು, ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ವೇಳೆ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಪುರಸಭೆ ಮುಖಂಡ ಮಹಮದ್‌ ದಸ್ತಗಿರ್‌ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ಕೃತ್ಯವನ್ನು ಸಮಸ್ತ ಮುಸ್ಲಿಂ ಭಾಂದವರು ಖಂಡಿಸುತ್ತೇವೆ. ನಮ್ಮ ತಾಯ್ನಾಡಿಗೆ, ಕೇಡುಮಾಡುವ ಉಗ್ರಗಾಮಿ ಕೃತ್ಯ ಸಹಿಸೋದಿಲ್ಲ.  ಹಿಂದು ಮುಸ್ಲಿಂ, ಕ್ರಿಶ್ಚಿಯನ್ ಸಹ ಸೇರಿದಂತೆ ಎಲ್ಲರೂ ಒಗ್ಗಟಿನಿಂದ ಇರಬೇಕು.  ಭಯೋತ್ಪಾದನೆಗೆ ಹಾಗೂ ಧರ್ಮ ವಿರೋಧ ಮನುಷ್ಯತ್ವ ವಿರೋಧಿಗಳ ವಿರುದ್ಧ ಮೋದಿಯವರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Author:

...
Sushmitha N

Copy Editor

prajashakthi tv

share
No Reviews