ಪಾವಗಡ:
ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿದ್ದಾಪುರ ಪಂಚಾಯತಿ ವ್ಯಾಪ್ತಿಯ ಚಿಕ್ಕಜಾಲಾಡು ಗ್ರಾಮದಲ್ಲಿ ಹಲವಾರು ತಿಂಗಳಿನಿಂದ ಚರಂಡಿ ನೀರು ಹೋಗಲು ಜಾಗವಿಲ್ಲದೆ ಮನೆಯ ಮುಂದಿನ ರಸ್ತೆಯಲ್ಲಿಯೇ ನಿಂತಿದೆ. ಇದರಿಂದ ಗ್ರಾಮದಲ್ಲಿ ವಾಸಿಸುವ ಜನರು ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಇನ್ನು ಈ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಟ್ಟಲು ಗ್ರಾಮ ಠಾಣಾ ವ್ಯಾಪ್ತಿಯ ಜಾಗಗಳಲ್ಲಿ ಅನುಕೂಲ ಕಲ್ಪಿಸಿದ್ದಾರೆ. ಇದರಿಂದ ಚರಂಡಿ ನಿರ್ಮಾಣ , ರಸ್ತೆ ನಿರ್ಮಾಣಕ್ಕೆ ಬಹಳ ತೊಂದರೆ ಆಗುತ್ತಿದೆಯಂತೆ. ಇನ್ನು ನಿಂತ ಕೊಳಚೆ ನೀರಿನ ಕಾಟ ತಾಳಲಾಗದೆ ಈಗಾಗಲೇ ಎರಡು ಕುಟುಂಬಗಳು ಖಾಲಿ ಮಾಡಿದ್ದಾರಂತೆ. ಇನ್ನುಳಿದಿ ದೋರು ನಾವು ಇಲ್ಲಿ ಇರೋದಕ್ಕಿಂತ ಮನೆ ಖಾಲಿ ಮಾಡಿ ಎಲ್ಲಾದ್ರೂ ದೂರ ಹೋಗೋದು ವಾಸಿ ಅಂತಿದ್ದಾರೆ.
ಚರಂಡಿ ನಿರ್ಮಾಣಕ್ಕೆಂದು ಸ್ಥಳವನ್ನು ಗುರುತಿಸಿದ್ದ ಗ್ರಾಮ ಪಂಚಾಯ್ತಿ ಚರಂಡಿ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ಪಕ್ಕದ ಜಾಗದವರ ಖ್ಯಾತೆಯಿಂದಾಗಿ ಅದು ಅರ್ಧಕ್ಕೆ ನಿಂತು ಹೋಗಿದಿಯಂತೆ. ಈ ಕಾರಣಕ್ಕೆ ಚರಂಡಿ ನೀರು ಹೊರ ಹೋಗಲು ಆಗದೆ ನಿಂತಲ್ಲೇ ನಿಂತಿದೆಯಂತೆ. ಈ ಸಮಸ್ಯೆಗೆ ಗ್ರಾಮಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅಂತ ಗ್ರಾಮಸ್ಥರು ಕಿಡಿಕಾರಿದರು.
ಇನ್ನು ಮನೆಯ ಮುಂದೆ ಈಜುಕೊಳದ ರೀತಿಯಲ್ಲಿ ನೀರು ನಿಂತುಕೊಳ್ಳುತ್ತಿರುವುದರಿಂದ ಅಕ್ಕಪಕ್ಕದ ಮನೆಯವರು ಹಲವು ಮಾರಕ ರೋಗಗಳಿಗೆ ತುತ್ತಾಗಿ ಆಸ್ಪತ್ರೆ ಸೇರುವಂತಾಗಿದೆ. ಇತ್ತ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮಾತ್ರ ಯಾವು ದಕ್ಕೂ ತಲೆಕೆಡಿಸಿಕೊಳ್ದೆ ಹಾಯಾಗಿದ್ದಾರೆ. ಆದ್ರೆ ದುರ್ವಾಸನೆಯಲ್ಲಿಯೇ ಜೀವನ ಸಾಗಿಸುತ್ತಿರುವವರ ಗೋಳಿಗೆ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕಾಗಿದೆ. ಇಲ್ಲವಾದಲ್ಲಿ ಗ್ರಾಮಸ್ಥರು ಮಲೇರಿಯಾ, ಡೆಂಗ್ಯೂ ಅಂತ ರೋಗಗಳಿತೆ ಸಾವನ್ನಪ್ಪುವುದು ಗ್ಯಾರಂಟಿ. ಇನ್ನಾದ್ರೂ ಸಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಬೇಕಿದೆ.