MADHUGIRI: ಮಧುಗಿರಿಯಲ್ಲಿ 40 ಕೋಟಿ ವೆಚ್ಚದ ಕಾಮಗಾರಿಗಳಿಗೆ ರಾಜೇಂದ್ರ ರಾಜಣ್ಣ ಚಾಲನೆ

ಮಧುಗಿರಿ: 

ಮಧುಗಿರಿ ಪಟ್ಟಣದಲ್ಲಿ ಅಮೃತಯೋಜನೆಯಡಿ ಸುಮಾರು 40 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ರಾಜೇಂದ್ರ ರಾಜಣ್ಞ ಒಂದು ವರ್ಷದಲ್ಲಿ ಮಧುಗಿರಿ ಪಟ್ಟಣವನ್ನು ಅಭಿವೃದ್ಧಿ ಮಾಡಿ ಮಧುಗಿರಿಯನ್ನು ರಾಜ್ಯಕ್ಕೆ ಮಾದರಿಯನ್ನಾಗಿ ಮಾಡಲಾಗುವುದು, ಇದಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರ ಅಗತ್ಯ ಎಂದು ಹೇಳಿದರು.

ಇನ್ನು ಮಧುಗಿರಿ ಪಟ್ಟಣದ ಅಭಿವೃದ್ಧಿ ರಾಜ್ಯಕ್ಕೆ ಮಾಧರಿ ಕ್ಷೇತ್ರವನ್ನಾಗಿ ಮಾಡಲು ಸಚಿವ ರಾಜಣ್ಣ  ಪಣತೊಟ್ಟು  ಅನುದಾನ  ತರುತಿದ್ದಾರೆ. ಅಮೃತ ಯೋಜನೆಯಿಂದ ಕಾಮಗಾರಿಗಳು ವಿಳಂಬವಾಗಿದ್ದವು.  ಈ ಯೋಜನೆಯ  ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡ ನಂತರ ಹಂತ ಹಂತವಾಗಿ ಸಿಸಿ ರಸ್ತೆ ಮತ್ತು ಡಾಂಬರ್ ರಸ್ತೆ ಅಭಿವೃದ್ಧಿಪಡಿಸಲಾಗುವುದು ಎಂದರು. ಅಲ್ದೇ ಸಾರ್ವಜನಿಕರಿಗೆ ತೊಂದ್ರೆ ಆಗದಂತೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.

ಇನ್ನು ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ್, ಉಪಾಧ್ಯಕ್ಷ ಸುಜಾತ್ ಶಂಕರ್ ನಾರಯಣ್, ಉಪ  ವಿಭಾಗಧಿಕಾರಿ ಗೋಟೂರು ಶಿವಪ್ಪ, ಪುರಸಭೆ ಸದಸ್ಯರಾದ ಅಲೀಂ, ಮಂಜುನಾಥ್ ಆಚಾರ್ ಸೇರಿ ಹಲವರು ಉಪಸ್ಥಿತರಿದ್ದರು.

Author:

...
Keerthana J

Copy Editor

prajashakthi tv

share
No Reviews