IPL 2025 : ಐಪಿಎಲ್ ಅಂಗಳದಲ್ಲಿ ಶುರುವಾಯ್ತು ಪ್ಲೇ ಆಫ್ ಚರ್ಚೆ...!

IPL 2025 :

ಈ ಬಾರಿಯ ಐಪಿಎಲ್‌ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ತಿದೆ. ಈಗಾಗಲೇ ಸೀಸನ್‌ 18 ರ ಫಸ್ಟ್‌ ಹಾಫ್‌ ಮುಗಿದಿದ್ದು, ಐಪಿಎಲ್‌ ಅಂಗಳದಲ್ಲಿ ಪ್ಲೇ ಆಫ್‌ ಲೆಕ್ಕಾಚಾರ ಜೋರಾಗೇ ನಡೀತಿದೆ. ಯಾವ ತಂಡ ಪ್ಲೇ ಆಫ್‌ ಗೆ ಎಂಟ್ರಿ ಕೊಡುತ್ತೆ, ಯಾವ ತಂಡ ಔಟ್‌ ಆಗುತ್ತೆ ಎಂಬ ಚರ್ಚೆಗಳು ಕ್ರಿಕೆಟ್‌ ಅಭಿಮಾನಿಗಳಲ್ಲಿ ಶುರುವಾಗಿದೆ.

ಕಳೆದ ಬಾರಿ ಮೂರನೇ ಸ್ಥಾನ ಪಡೆದಿದ್ದ ರಾಜಸ್ಥಾನ ರಾಯಲ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಈ ಬಾರಿ ಪ್ಲೇ ಆಫ್ ರೇಸ್‌ ನಿಂದ ಹೊರಬಿದ್ದಿದೆ. ಕಳೆದ ಸೀಸನ್‌ ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ ಗುಜರಾತ್‌ ಟೈಟಾನ್ಸ್‌ ತಂಡ ಈ ಬಾರಿ ಅದ್ಬುತ ಪ್ರದರ್ಶನ ನೀಡ್ತಿದೆ. ಆಡಿರುವ 8 ಪಂದ್ಯಗಳಲ್ಲಿ 6 ಮ್ಯಾಚ್‌ ಗೆದ್ದಿದ್ದು, ಉಳಿದ 6 ಪಂದ್ಯಗಳಲ್ಲಿ 4 ಪಂದ್ಯ ಗೆದ್ದರೆ ಸಲೀಸಾಗಿ ಪ್ಲೇ ಆಫ್‌ ತಲುಪುತ್ತೆ. ಇನ್ನುಳಿದಂತೆ ಡೆಲ್ಲಿ ಕ್ಯಾಪಿಟಲ್ಸ್‌ ಆಡಿರೋ 8 ಪಂದ್ಯದಲ್ಲಿ 6 ಪಂದ್ಯ ಗೆದ್ದಿದ್ದು, ಪ್ಲೇ ಆಫ್​ಗೆ ಎಂಟ್ರಿ ಕೊಡೋಕೆ ತುದಿಗಾಲಲ್ಲಿ ನಿಂತಿದೆ.

ಇನ್ನು ಭರ್ಜರಿ ಪರ್ಫಾಮೆನ್ಸ್‌ ನೀಡ್ತಿರೋ ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್​​, ಪಂಜಾಬ್ ಕಿಂಗ್ಸ್‌, ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಪ್ಲೇ ಆಫ್‌ ಗೆ ಎಂಟ್ರಿ ಕೊಡೋಕೆ ತಯಾರಾಗಿ ನಿಂತಿವೆ. ಇನ್ನು ಈ ಸೀಸನ್​ನಲ್ಲಿ ಹೀನಾಯ ಪರ್ಫಾಮೆನ್ಸ್ ನೀಡಿರೋ ರಾಜಸ್ಥಾನ್​ ರಾಯಲ್ಸ್​, ಚೆನ್ನೈ ಸೂಪರ್​ ಕಿಂಗ್ಸ್​ ಕಥೆ ಬಹುತೇಕ ಮುಗಿದಿದೆ. ಹಾಲಿ ಚಾಂಪಿಯನ್​ ಕೊಲ್ಕತ್ತಾ ನೈಟ್​ ರೈಡರ್ಸ್​, ಸನ್​ರೈಸರ್ಸ್​​ ಹೈದ್ರಾಬಾದ್​ ಪಾಲಿಗೆ ಇನ್ನೂ ಪ್ಲೇ ಆಫ್​ ಡೋರ್​ ಮುಚ್ಚಿಲ್ಲ. ಮುಂದಿನ ಎಲ್ಲಾ ಪಂದ್ಯಗಳನ್ನೂ ಗೆದ್ದಲ್ಲಿ ಈ ತಂಡಗಳಿಗೆ ಪ್ಲೇ ಆಫ್‌ ಗೆ ಹೋಗೋ ಚಾನ್ಸ್​​ ಇದೆ.

ಒಟ್ಟಿನಲ್ಲಿ IPL 2025ರ ಪ್ಲೇಆಫ್ ರೇಸ್ ಜೋರಾಗಿದ್ದು, ಯಾವ ತಂಡಗಳು ಟಾಪ್ 4ರಲ್ಲಿ ಬರುತ್ತವೆ ಎಂಬುದು ಸಾಕಷ್ಟು ಕುತೂಹಲ ಕೆರಳಿಸಿದೆ. ಐಪಿಎಲ್‌ ನಿಯಮದಂತೆ 16 ಅಂಕಗಳಿಸೋ ತಂಡಗಳು ಪ್ಲೇ ಆಫ್‌ ಪ್ರವೇಶಿಸಲಿವೆ. ಅಲ್ದೇ 14 ಅಂಕಗಳಿಸಿದ್ರೂ ನೆಟ್‌ ರನ್‌ ರೇಟ್‌ ಆಧಾರದಲ್ಲಿ ಅಗ್ರ ಸ್ಥಾನ ಪಡೆಯೋ ಸಾಧ್ಯತೆ ಇದೆ.

 

Author:

...
Sushmitha N

Copy Editor

prajashakthi tv

share
No Reviews