ಪಾವಗಡ:
ಪಾವಗಡ ತಾಲೂಕಿನ ಕ್ವಾಡಗುಡ್ಡ ವ್ಯಾಪ್ತಿಯಲ್ಲಿ ಟಿಸಿಗಳ ಕಳ್ಳರ ಹಾವಳಿ ಹೆಚ್ಚಾಗಿತ್ತು. ಇದ್ರಿಂದ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿತ್ತು. ಇನ್ನು ಟಿಸಿ ಕಳ್ಳರಿಗೆ ಬೆಸ್ಕಾಂ ಇಲಾಖೆಯೇ ಶ್ರೀ ರಕ್ಷೆಯಾಗಿದ್ದರು. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಬಿತ್ತರ ಮಾಡಲಾಗಿತ್ತು. ವರದಿ ಬಳಿಕ ಎಚ್ಚೆತ್ತ ಬೆಸ್ಕಾಂ ಇಲಾಖೆ ಕ್ರಮ ಕೈಗೊಂಡಿದ್ದು ಮೊದಲ ಹಂತದ ಭಾಗವಾಗಿ ಗುತ್ತಿಗೆದಾರರ ಮೇಲೆ ಕ್ರಮ ಜರುಗಿಸಲಾಗಿದೆ. ಆದ್ರೆ ಅಧಿಕಾರಿಗಳ ಮೇಲೆ ಮಾತ್ರ ಇನ್ನು ಕ್ರಮ ಕೈಗೊಳ್ಳದಿರೋದ್ರಿಂದ ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ.
ಇನ್ನು ಪಾವಗಡ ತಾಲೂಕಿನ ಕ್ವಾಡಗುಡ್ಡ ವ್ಯಾಪ್ತಿಯ ಟಿಸಿಗಳ ಕಳುವು ದೊಡ್ಡ ಒಂದು ದಂದೆಯಾಗಿ ಮಾರ್ಪಟ್ಟಿತ್ತು. ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ರಾಮಾಂಜಿನಪ್ಪ ಮೂಲಕ ಟಿಸಿ ಕಳ್ಳತನ ದಂಧೆ ಬಯಲಾಗಿತ್ತು. ಆದ್ರೆ ಟಿಸಿ ಕಳ್ಳತ ಪ್ರಕರಣ ಹೊರ ಬರುತ್ತಿದ್ದರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಟಿಸಿ ಕಳ್ಳತನ ಆಗುತ್ತಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ರು ಕೂಡ ಏನು ಗೊತ್ತಿಲ್ಲದ ರೀತಿಯಲ್ಲಿ ನಡೆದುಕೊಳ್ಳುತ್ತಿರೋದು ಅನುಮಾನಕ್ಕೆ ದಾರಿ ಮಾಡಿಕೊಡ್ತಾ ಇದೆ.