HEALTH TIPS : ಬೇಗನೆ ತೂಕ ಕಡಿಮೆ ಮಾಡಿಕೊಳ್ಳಬೇಕೆ..? ಹಾಗಾದ್ರೆ ಈ ಟಿಪ್ಸ್‌ ಫಾಲೋ ಮಾಡಿ

ದೇಹದ ತೂಕ ಹೆಚ್ಚಾದಂತೆಲ್ಲ ಬೇರೆ ಬೇರೆ ಕಾಯಿಲೆಗಳು ಆವರಿಸಿಕೊಳ್ಳುತ್ತವೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ಆರೋಗ್ಯ ಹಾಳಾಗುತ್ತದೆ. ಆದರೆ ತೂಕ ಕಡಿಮೆ ಮಾಡಿಕೊಳ್ಳಲು ಹಲವಾರು ವಿಧಾನಗಳಿವೆ. ಅದರಲ್ಲಿ ಸರಿಯಾದ ಆಹಾರದ ಪದ್ಧತಿ ಕೂಡ ಒಂದು.

ವ್ಯಾಯಮ ಮಾಡುವ ಸಂದರ್ಭದಲ್ಲಿ ಏನು ತಿನ್ನಬೇಕು, ಊಟ ತಿಂಡಿ ಸಮಯದಲ್ಲಿ ಯಾವ ಆಹಾರ ತಿಂದರೆ ಒಳ್ಳೆಯದು ಇವೆಲ್ಲದರ ಬಗ್ಗೆ ಮಾಹಿತಿ ಹೊಂದಿರಬೇಕು. ತೂಕ ಕಡಿಮೆ ಮಾಡುವ ಭರದಲ್ಲಿ ನಮ್ಮ ದೇಹವನ್ನು ನಾವು ನಿತ್ರಾಣ ಸ್ಥಿತಿಗೆ ಎಂದಿಗೂ ತೆಗೆದುಕೊಂಡು ಹೋಗ ಬಾರದು. ಅಂತಹದೇ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.

*ಮೊಸರು:

ಮೊಸರು ಸೇವನೆಯಿಂದ ತೂಕ ಸಾಕಷ್ಟು ಕಡಿಮೆಯಾಗುತ್ತದೆ. ಊಟಕ್ಕೆ ಮುಂಚೆ ಅಥವಾ ಊಟ ಆದ ನಂತರದಲ್ಲಿ ಮೊಸರು ತಿನ್ನಬಹುದು. ಮೊಸರಿನಲ್ಲಿ ಇರುವ ಕ್ಯಾಲ್ಸಿಯಂ, ದೇಹದಲ್ಲಿ ಕೊಬ್ಬಿನ ಜೀವಕೋಶಗಳು cortisol ಹಾರ್ಮೋನಿನ ಪ್ರಮಾಣವನ್ನು ಹೆಚ್ಚಾಗಿ ಬಿಡುಗಡೆ ಮಾಡದಂತೆ ನೋಡಿಕೊಳ್ಳುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮ ಪಡಿ ಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಉತ್ತಮ ಪ್ರಮಾಣದಲ್ಲಿ ಪ್ರೋಟಿನ್ ಮತ್ತು ವಿಟಮಿನ್ ಅಂಶಗಳು ಸಹ ಸಿಗುತ್ತವೆ.

*ಬ್ರೌನ್ ಬ್ರೆಡ್:

ಇದರಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೋರಿ ಸೇರದಂತೆ ನೋಡಿಕೊಳ್ಳುತ್ತದೆ ಮತ್ತು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಉತ್ತಮವಾಗಿ ನಿರ್ವಹಿಸುವುದು ಮಾತ್ರವಲ್ಲದೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕಾರ್ಬೋಹೈಡ್ರೇಟ್ ಅಂಶಗಳು ನಮ್ಮ ದೇಹಕ್ಕೆ ಶಕ್ತಿ ಕೊಡುತ್ತದೆ ಮತ್ತು ಇದರಿಂದ ಬೊಜ್ಜು ಸಹ ಹೆಚ್ಚಾಗುತ್ತದೆ.​

ತರಕಾರಿ ಸಲಾಡ್:

ಪೌಷ್ಟಿಕ ತಜ್ಞರು ಹೇಳುವಂತೆ ತರಕಾರಿ ಸೇವನೆ ಮಾಡು ವುದರಿಂದ ದೇಹಕ್ಕೆ ಕಡಿಮೆ ಕ್ಯಾಲೋರಿಗಳು ಮತ್ತು ಉತ್ತಮ ನಾರಿನ ಅಂಶ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಪ್ರಮಾಣ ಸಿಗುತ್ತದೆ. ಜೊತೆಗೆ ವಿಟಮಿನ್ ಸಿ, ವಿಟಮಿನ್ ಕೆ, ಕ್ಯಾರೋಟಿನ್ ಎಲ್ಲವೂ ಸಿಗುತ್ತದೆ. ಇವೆಲ್ಲದರ ಕಾರಣದಿಂದ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ ಮತ್ತು ಮುಂಬರುವ ದಿನಗಳಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಕೂಡ ಕಡಿಮೆ ಇರುತ್ತದೆ. ಸಾಧ್ಯವಾದಷ್ಟು ಕಡಿಮೆ ಕಾರ್ಬೋಹೈಡ್ರೇಟ್ ಪ್ರಮಾಣ ಹೊಂದಿರುವ ಆಹಾರಗಳನ್ನು ಸೇವಿಸಿ.

 

Author:

...
Sub Editor

ManyaSoft Admin

share
No Reviews