ಚಿಕ್ಕಬಳ್ಳಾಪುರ : ವಿವಾದಿತ ಅಂಬೇಡ್ಕರ್‌ ಪುತ್ಥಳಿ ತೆರವು | ಸುಧಾಕರ್‌ ವಿರುದ್ಧ ದಲಿತರ ಆಕ್ರೋಶ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸರ್ಕಾರಿ ಬಾಲಕರ ಶಾಲೆಯಲ್ಲಿ ನಿರ್ಮಿಸಿದ್ದ ವಿವಾದಿತ ಅಂಬೇಡ್ಕರ್‌ ಅವರ  ಪುತ್ಥಳಿಯನ್ನು ರಾತ್ರೋರಾತ್ರಿ ಅಧಿಕಾರಿಗಳು ತೆರವುಗೊಳಿಸಿದ್ದರು. ತೆರವುಗೊಳಿಸಿದ್ದ ವಿಚಾರವಾಗಿ ನಿನ್ನೆ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆ ಪ್ರತಿಭಟನೆ ಇಂದು ಕೂಡ ಮುಂದುವರೆದಿತ್ತು. ಪ್ರತಿಭಟನೆ ನಡೆಸಿದ್ದ ದಲಿತರ ಮುಖಂಡರ ಮನೆಗೆ ನುಗ್ಗಿದ ಪೊಲೀಸರು ಅವರನ್ನು ಬಂಧಿಸಿದ್ದರು. ಇದನ್ನು ಖಂಡಿಸಿ ದಲಿತರು ಬೀದಿಗಿಳಿದು ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದ್ದಾರೆ.

ಚಿಂತಾಮಣಿ ತಾಲೂಕಿನಲ್ಲಿ ಹಲವು ತಿಂಗಳ ಹಿಂದೆ ಬಾಲಕರ ಶಾಲೆಯಲ್ಲಿ ಅಂಬೇಡ್ಕರ್‌ ಅವರ ಪುತ್ಥಳಿಯನ್ನು ನಿರ್ಮಾಣ ಮಾಡಲಾಗಿತ್ತು. ಪುತ್ಥಳಿ ವಿಚಾರಕ್ಕೆ ಸಂಬಂಧಿಸಿಂತೆ ವಿವಾದ ಕೂಡ ಸೃಷ್ಟಿಯಾಗಿತ್ತು. ನಿನ್ನೆ ರಾತ್ರೋರಾತ್ರಿ ಅಧಿಕಾರಿಗಳು ಪೊಲೀಸರ ಬಿಗಿಬಂದೋ ಬಸ್ತ್‌ನೊಂದಿಗೆ ಪುತ್ಥಳಿಯನ್ನು ತೆರವುಗೊಳಿಸಿದರು. ಪುತ್ಥಳಿ ತೆರವನ್ನು ಖಂಡಿಸಿ ದಲಿತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ದಲಿತಪರ ಸಂಘಟನೆಯಿಂದ ಚಿಂತಾಮಣಿ ಬಂದ್‌ ಕೂಡ ನಡೆಸಲಾಯ್ತು. ಇದರ ನಡುವೆ ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಪ್ರತಿಭಟನೆಯಲ್ಲಿ ಡಾ.ಎಂ.ಸಿ.ಸುಧಾಕರ್‌ ವಿರುದ್ಧ ದಿಕ್ಕಾರಗಳ ಘೋಷಣೆಗಳೇ ಮೊಳಗಿದ್ದವು.

ಪ್ರತಿಭಟನೆಯ ನಡುವೆ ಪೊಲೀಸರು ಮತ್ತು ದಲಿತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಅದಾದ ಬಳಿಕ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದರು. ಲಾಠಿ ಚಾರ್ಜ್‌ ನಡೆಸುವುದರ ಜೊತೆಗೆ ದಲಿತ ಮುಖಂಡರ ಮನೆಗಳಿಗೆ ನುಗ್ಗಿ ಅವರನ್ನು ಬಂಧಿಸುವ ಕೆಲಸ ಮಾಡಿದ್ದರು. ಇದನ್ನು ಖಂಡಿಸಿ ನಮಗೆ ನ್ಯಾಯಬೇಕು ಎಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ದಲಿತ ಕಾಲೋನಿಗೆ ನುಗ್ಗಿ ನಾಲ್ಕು ಜನ ಮುಖಂಡರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ವಿನೋಭಾ ಕಾಲೋನಿ ಸರ್ಕಲ್ ನಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದ್ರು. ಅಧಿಕಾರಿಗಳು ಮತ್ತು ಎಂ.ಸಿ.ಸುಧಾಕರ್‌ ವಿರುದ್ಧ ಕಿಡಿಕಾರಿದ್ರು. ಇತ್ತ ಎಂ.ಸಿ.ಸುಧಾಕರ್ ವಿರುದ್ದ ಏಕವಚನದಲ್ಲೇ ದಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಬಂಧಿತರನ್ನು ಬಿಡುಗಡೆ ಮಾಡದಿದ್ದಲ್ಲಿ ಪ್ರತಿಭಟನೆ ಬಿಡಲ್ಲಾ ಎಂದು ಪಟ್ಟುಹಿಡಿದು ಕೂತರು.‌

 

Author:

...
Keerthana J

Copy Editor

prajashakthi tv

share
No Reviews