ಗ್ರೀನ್ ಚಟ್ನಿ ಸ್ಯಾಂಡ್‌ವಿಚ್ ರೆಸಿಪಿ
*ಬೇಕಾಗುವ ಸಾಮಗ್ರಿಗಳು:
ಕೊತ್ತಂಬರಿ ಸೊಪ್ಪು – 1 ಕಪ್
ತಾಜಾ ತೆಂಗಿನಕಾಯಿ ತುರಿ – ಕಾಲು ಕಪ್
ಹಸಿರು ಮೆಣಸಿನಕಾಯಿ – 2-3
ಸಕ್ಕರೆ – 1 ಟೀಸ್ಪೂನ್
ನೀರು – 2-3 ಟೀಸ್ಪೂನ್
ನಿಂಬೆ ರಸ – ಕಾಲು ಟೀಸ್ಪೂನ್
*ಮಾಡುವ ವಿಧಾನ:
ಒಂದು ಮಿಕ್ಸರ್ ಜಾರ್‌ಗೆ ಕೊತ್ತಂಬರಿ ಸೊಪ್ಪು, ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಸಕ್ಕರೆ, ನಿಂಬೆ ರಸ ಮತ್ತು ಉಪ್ಪು ಸೇರಿಸಿ ನಯವಾದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ನಡುವೆ 2-3 ಟೀಸ್ಪೂನ್ ನೀರು ಸೇರಿಸಿ ಮಿಶ್ರಣ ಮಾಡಿ. ಹೆಚ್ಚು ನೀರು ಸೇರಿಸಬೇಡಿ. ಏಕೆಂದರೆ ಚಟ್ನಿ ದಪ್ಪವಿದ್ದಷ್ಟು ಉತ್ತಮ. ನಂತರ ಬ್ರೆಡ್ ಸ್ಲೈಸ್‌ಗಳನ್ನು ತೆಗೆದುಕೊಂಡು ಅದರ ಒಂದು ಬದಿಗೆ ಸ್ವಲ್ಪ ಬೆಣ್ಣೆಯನ್ನು ಹರಡಿ. ಅದರ ಮೇಲೆ ಒಂದು ಟೀಸ್ಪೂನ್‌ನಷ್ಟು ಗ್ರೀನ್ ಚಟ್ನಿ ಹಾಕಿಕೊಂಡು ಹರಡಿ. ಎಲ್ಲಾ ಬ್ರೆಡ್‌ಗೂ ಇದೇ ರೀತಿ ಮಾಡಿ, 2-3 ಪದರಗಳಲ್ಲಿ ಜೋಡಿಸಿ. ನಿಮ್ಮ ಆಯ್ಕೆಯಂತೆ ತ್ರಿಕೋನ ಅಥವಾ ಚೌಕಾಕಾರವಾಗಿ ಕತ್ತರಿಸಿ. ಇದೀಗ ಗ್ರೀನ್ ಚಟ್ನಿ ಸ್ಯಾಂಡ್‌ವಿಚ್ ತಯಾರಾಗಿದ್ದು, ಚಹಾ, ಕಾಫಿ ಅಥವಾ ಜ್ಯೂಸ್ ಜೊತೆ ಸವಿಯಿರಿ.