Beauty Tips:
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ಬೇಸಿಗೆಯಲ್ಲಿ ಮೇಕಪ್ ಮಾಡಲು ಹೆಣ್ಮಕ್ಕಳಿಗೆ ತುಂಬಾನೇ ಕಿರಿಕಿರಿ ಅನಿಸುವುದು. ಬೇಸಿಗೆಯಲ್ಲಿ ವಾಟರ್ ಫ್ರೂಫ್ ಮೇಕಪ್ ಮಾಡಿದರೆ ನೋಡಿದರೆ ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಬೆವರಿನಲ್ಲಿ ಮೇಕಪ್ ಸ್ಪ್ರೆಡ್ ಕೂಡ ಆಗುವುದಿಲ್ಲ. ಮೇಕಪ್ ಸ್ಪ್ರೆಡ್ ಆಗುವುದನ್ನು ತಡೆಗಟ್ಟುವುದು ಹೇಗೆಂದರೆ ..?
ಮುಖಕ್ಕೆ ಒಳ್ಳೆಯ ಪ್ರೈಮರ್ ಹಚ್ಚಿ. ಸಿಲಿಕೋನ್ ಬೇಸ್ಡ್ ಪ್ರೈಮರ್ ಬಳಸಿದರೆ ಒಳ್ಳೆಯದು. ಇದು ಮೇಕಪ್ ತುಂಬಾ ಹೊತ್ತು ಉಳಿಯುವಂತೆ ಕೂಡ ಮಾಡುವುದು.
ವಾಟರ್‌ಫ್ರೂಫ್ ಪ್ರಾಡೆಕ್ಟ್ ಬಳಸಿ ಬೇಸಿಗೆಯಲ್ಲಿ ನಿಮ್ಮ ಮೇಕಪ್ ಪ್ರಾಡೆಕ್ಟ್‌ಗಳಲ್ಲಿಯೂ ಬದಲಾವಣೆ ತರಬೇಕಾಗುತ್ತದೆ. ಬೇಸಿಗೆಯಲ್ಲಿ ನೀವು ವಾಟರ್ ಫ್ರೂಫ್ ಮೇಕಪ್ ಸಾಧನಗಳನ್ನು ಬಳಸಿವುದರಿಂದ ಇದು ಮುಖಕ್ಕೆ ನೀರು ಬಿದ್ದಾಗ, ಮುಖ ಬೆವರಿದಾಗ ಮೇಕಪ್ ಹರಡಿ ಸೌಂದರ್ಯ ಹಾಳಾಗುವುದನ್ನು ತಡೆಗಟ್ಟುತ್ತದೆ. ಅಲ್ದೇ ಈ ವಾಟರ್ ಫ್ರೂಫ್ ಕ್ರೀಮ್‌ಗಳಲ್ಲಿರುವ ಮಾಯಿಶ್ಚರೈಸರ್ ಮುಖಕ್ಕೆ ಫ್ರೆಷ್ ಫೀಲ್ ಕೊಡುತ್ತದೆ.
ಯಾವ ಮೇಕಪ್ ಹೇಗೆ ಬಳಸಬೇಕೆಂಬುವುದು ಕೂಡ ಮುಖ್ಯವಾಗುತ್ತದೆ. ಲೈಟ್ ಫೌಂಡೇಷನ್ ಅನ್ನು ಬೇಸ್ ಆಗಿ ಬಳಸಬೇಕು. ನಂತರ ಫೌಂಡೇಷನ್ ಪೌಡರ್ ಹಚ್ಚಬೇಕು, ಈ ರೀತಿ ಮಾಡುವುದರಿಂದ ಮುಖ ಫ್ರೆಷ್ ಆಗಿ ಕಾಣಿಸುತ್ತದೆ.
ತುಟಿಗೆ ಸ್ಟೈನ್ ಫ್ರೂಫ್ ಲಿಪ್ ಕಲರ್ ಬಳಸೋದು ಮುಖ್ಯ, ತುಟಿಯಲ್ಲಿ ಸ್ಪ್ರೆಡ್ ಆಗುವ ಲಿಪ್‌ಸ್ಟಿಕ್ ಬಳಸಬೇಡಿ, ಸ್ಮಡ್ಜ್ ಫ್ರೂಫ್ ಲಿಪ್‌ಸ್ಟಿಕ್ ಸಿಗುತ್ತೆ ಅದನ್ನು ಬಳಸಿ, ಇದರಿಂದ ಲಿಪ್‌ಸ್ಟಿಕ್ ಹರಡಲ್ಲ ಅಲ್ಲದೆ ಹಾಕಿದ ಸ್ವಲ್ಪ ಹೊತ್ತಿನಲ್ಲಿ ಲಿಪ್‌ಸ್ಟಿಕ್ ಮಾಯವಾಗಲ್ಲ.
ಕಣ್ಣಿನ ಮೇಕಪ್ ವಾಟರ್‌ಫ್ರೂಫ್ ಐ ಮೇಕಪ್ ಬಳಸಿ. ವಾಟರ್‌ಫ್ರೂಫ್ ಮಸ್ಕರಾ, ವಾಟರ್ ಫ್ರೂಫ್ ಐ ಲೈನರ್ ಬಳಸಿ, ಇವುಗಳು ಕಣ್ಣಿನ ಅಂದ ಹೆಚ್ಚಿಸುವುದು, ಅಲ್ಲದೆ ಕಾಡಿಗೆ ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ. ಅಲ್ದೇ ಪರ್ಸ್‌ನಲ್ಲಿ ಬ್ಲೋಟಿಂಗ್ ಪೇಪರ್ಸ್ ಇರಲಿ ಈ ಪೇಪರ್ ಮುಖದಲ್ಲಿರುವ ಜಿಡ್ಡಿನಂಶ, ಬೆವರು ಇವುಗಳನ್ನು ತೆಗೆಯಲು ಸಹಕಾರಿ.ಇನ್ನು ಮುಖದ ಮೇಕಪ್ ಕೂಡ ಹಾಳು ಮಾಡುವುದಿಲ್ಲ, ಮುಖ ಫ್ರೆಷ್ ಆಗಿ ಕಾಣುವುದು.
ಸೆಟ್ಟಿಂಗ್ ಸ್ಪ್ರೇ ಬಳಸೋದರಿಂದ ಮೇಕಪ್ ಹಾಳಾಗಲ್ಲ, ಹೌದು ಮೇಕಪ್ ಸಂಪೂರ್ಣವಾದ ಮೇಲೆ ಸೆಟ್ಟಿಂಗ್ ಸ್ಪ್ರೇ ಬಳಸಿ, ಇದು ಮೇಕಪ್ ತುಂಬಾ ಹೊತ್ತು ಹಾಗೇ ಇರುವಂತೆ ಮಾಡುತ್ತದೆ, ಅಲ್ದೇ ಮುಖದಲ್ಲಿ ಆಯಾಸ ಕಾಣಲ್ಲ, ಫ್ರೆಷ್ ಆಗಿ ಕಾಣುವಂತೆ ಮಾಡುತ್ತದೆ.