ಚಿಂತಾಮಣಿ :
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸದ್ದಿಲ್ಲದೇ ಖತರ್ನಾಕ್ ಕಳ್ಳರ ಗ್ಯಾಂಗ್‌ವೊಂದು ಆಕ್ಟಿವ್ ಆಗಿದ್ದು, ಬೀಗ ಹಾಕಿದ ಮನೆಗಳೇ ಈ ಗ್ಯಾಂಗ್‌ನ ಟಾರ್ಗೆಟ್ ಆಗಿದೆ. ಬೀಗ ಹಾಕಿದ ಮನೆಗಳ ಬಾಗಿಲು, ಕಿಟಕಿ ಹೊಡೆದು ಒಳನುಗ್ಗಿ ಮನೆಯಲ್ಲಿ ಸಿಕ್ಕ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ದೋಚಿ ಎಸ್ಕೇಪ್ ಆಗ್ತಾ ಇದ್ದು, ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಗುಂಡಪ್ಪ ಬಡಾವಣೆಯಲ್ಲಿ ಖದೀಮರ ಗ್ಯಾಂಗ್ ಕೈಚಳಕ ತೋರಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ದುಡ್ಡನ್ನು ಎಗರಿಸಿ ಪರಾರಿಯಾಗಿದ್ದಾರೆ. ಗುಂಡಪ್ಪ ಬಡಾವಣೆಯ ನಾಗೇಂದ್ರ ಅವರ ಕುಟುಂಬ ಯುಗಾದಿ ಹಬ್ಬಕ್ಕೆ ನೆಂಟರ ಮನೆಗೆ ಊರಿಗೆ ಹೋಗಿದ್ದಾರೆ, ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಖತರ್ನಾಕ್ ಕಳ್ಳರು ಸ್ಕೇಚ್ ಹಾಕಿ ಮನೆಯ ಕಿಟಕಿ, ಬಾಗಿಲನ್ನು ಮುರಿದು ಒಳಹೋಗಿದ್ದಾರೆ. ಬೀರುನಲ್ಲಿದ್ದ ಸುಮಾರು 150 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, ಸುಮಾರು 3 ಲಕ್ಷ ಹಣವನ್ನು ಎಗರಿಸಿ ಎಸ್ಕೇಪ್ ಆಗಿದ್ದಾರೆ.
ಇನ್ನು ನಾಗೇಂದ್ರ ಅವರ ಕುಟುಂಬ ಮನೆಗೆ ವಾಪಸ್ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಚಿನ್ನಾಭರಣ, ಹಣವನ್ನು ಕಳೆದುಕೊಂಡ ನಾಗೇಂದ್ರ ಕುಟುಂಬ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಚಿಂತಾಮಣಿ ನಗರ ಪೊಲೀಸರು, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಖದೀಮರಿಗಾಗಿ ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಖತರ್ನಾಕ್ ಕಳ್ಳರ ಕೈಚಳಕ್ಕೆ ಚಿಕ್ಕಬಳ್ಳಾಪುರ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಜೊತೆಗೆ ಮನೆ ಬಿಟ್ಟು ಒಂದು ದಿನ ಬೇರೆ ಊರಿಗೆ ಹೋಗಲು ಹೆದರುತ್ತಿದ್ದಾರೆ.