ತುಮಕೂರು : ಹೋದ್ಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿ ಎಂಬಂತೆ ಮತ್ತೆ ಕೊರೊನಾ ಕಂಟಕ ಶುರುವಾಗಿದೆ. ರಾಜ್ಯಕ್ಕೆ ಮತ್ತೆ ಕೊರೊನಾ ಕಾಟ ಶುರುವಾಗಿದ್ದು ಜನರಲ್ಲಿ ಆತಂಕ ಶುರುವಾಗಿದೆ. ಮತ್ತೆ ಲಾಕ್ಡೌನ್ ಆಗುತ್ತಾ. ವಾಕ್ಸಿನ್ ತಗೋಬೇಕಾ. ಬೆಡ್ ಸಿಗಲ್ವಾ ಎಂಬೆಲ್ಲಾ ಆತಂಕ ಶುರುವಾಗಿದೆ. ಹೌದು ರಾಜ್ಯದಲ್ಲಿ ಮತ್ತೆ ಕೊರೊನಾ ರಣಕೇಕೆ ಹಾಕ್ತಿದ್ದು ಕೊರೊನಾ ವೈರಸ್ಗೆ ಇಬ್ಬರು ಬಲಿಯಾಗಿದ್ದರೆ, 38 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.
ರಾಜ್ಯದಲ್ಲಿ ನಿನ್ನೆ ಒಂದೇ ದಿನ ಐವರಿಗೆ ಕೊರೊನಾ ಸೋಂಕು ತಗುಲಿದ್ದು, ರಾಜ್ಯದಲ್ಲಿ ಒಟ್ಟು 40 ಕೊರೊನಾ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ 32 ಬೆಂಗಳೂರು ಒಂದರಲ್ಲೇ ಕೊರೊನಾ ಕೇಸ್ ಆಕ್ಟಿವ್ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಅಲ್ದೇ ಕೊರೊನಾ ಮಾರಿಗೆ ರಾಜ್ಯದಲ್ಲಿ ಈವರೆಗೂ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.
ಇನ್ನು ಕೊರೊನಾ ಆತಂಕದ ನಡುವೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕೊರೊನಾ ಹೆಚ್ಚಳದ ಬಗ್ಗೆ ಜನರು ಗಾಬರಿ ಆಗೋದು ಬೇಡ. ಉಸಿರಾಟದ ಸಮಸ್ಯೆ ಇರುವವರು ಟೆಸ್ಟ್ ಮಾಡಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಜನರು ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ. ಇತ್ತ ಮೇ 29 ರಿಂದ ಶಾಲಾ- ಕಾಲೇಜು ಶುರುವಾಗ್ತಾ ಇದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯಪಡ್ತಾ ಇದ್ದಾರೆ. ಆದರೆ ಮಕ್ಕಳಿಗೆ ಮಾಸ್ಕ್ ಹಾಕಿಸಿ ಶಾಲೆಗೆ ಕಳುಹಿಸಿ, ಯಾವುದೇ ಭಯ ಬೇಡ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಅದೇನೆ ಇರಲಿ ಕೊರೊನಾ ಮಾರಿಯ ಭೀತಿಯಿಂದ ಹೊರಬಂದ ಜನರಿಗೆ ಮತ್ತೆ ಕೊರೊನಾ ಶಾಕ್ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಕೊರೊನಾ ಕೇಸ್ಗಳು ಹೆಚ್ಚಾಗುತ್ತಾ..? ಕೊರೊನಾ ಆತಂಕವನ್ನು ಹೇಗೆ ಸರ್ಕಾರ ದೂರು ಮಾಡುತ್ತೆ ಅನ್ನೋದನ್ನ ಕಾದುನೋಡಬೇಕಿದೆ