Recipe : ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನುವ ವಿಚಾರ ನಮಗೆಲ್ಲರಿಗೂ ತಿಳಿದೇ ಇದೆ. ಬಾಳೆಹಣ್ಣಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇದ್ದು, ಇದು ನಮ್ಮ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬಾಳೆಹಣ್ಣನ್ನು ಬಳಸಿಕೊಂಡು ಹಲವಾರು ವಿಧದ ತಿಂಡಿ ತಿನಿಸುಗಳನ್ನು ತಯಾರಿಸುವರು. ಇದರಲ್ಲಿ ಅತೀ ಹೆಚ್ಚು ಜನಪ್ರಿಯವಾಗಿರುವುದು ಎಂದರೆ ಅದು ಬಾಳೆಹಣ್ಣಿನ ಚಿಪ್ಸ್, ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರಿಗೂ ಬಾಳೆಹಣ್ಣಿನ ಈ ಚಿಪ್ಸ್ ತುಂಬಾ ಇಷ್ಟವಾಗುವುದು.
ಮನೆಯಲ್ಲೇ ಬಾಳೆಕಾಯಿ ಚಿಪ್ಸ್ ಮಾಡಲು ಬೇಕಾಗುವ ಪದಾರ್ಥಗಳೆಂದರೆ :
- ಬಾಳೆಕಾಯಿ – 3
- ಉಪ್ಪು – ರುಚಿಗೆ ತಕ್ಕಷ್ಟು
- ಕಾರದ ಪಡಿ ಅಥವಾ ಕಾಳು ಮೆಣಸಿನ ಪುಡಿ – 1/2 ಟೀ ಸ್ಪೂನ್
- ತೆಂಗಿನ ಎಣ್ಣೆ ಅಥವಾ ಅಡುಗೆ ಎಣ್ಣೆ – ಹುರಿಯಲು ಬೇಕಾದಷ್ಟು
ಬಾಳೆಕಾಯಿ ಚಿಪ್ಸ್ ತಯಾರಿಸುವ ವಿಧಾನ: ಬಾಳೆಕಾಯಿಗಳನ್ನು ತೊಳೆದು, ಸಿಪ್ಪೆ ತೆಗೆದು, ಚಾಕುವಿನಿಂದ ಚಿಕ್ಕದಾಗಿ ಹಚ್ಚಿ ತೊಳೆದು, ನಂತರ ನೀರಿನಲ್ಲಿ ಹಾಕಿ 5 ನಿಮಿಷ ಇಡಿ (ಇದು ಕಪ್ಪಾಗದಂತೆ ತಡೆಯುತ್ತದೆ), ನಂತರ ಒಣಗಿಸಿ. ನಂತರ ಎಣ್ಣೆ ಬಿಸಿ ಮಾಡಿ, ಎಣ್ಣೆ ಚೆನ್ನಾಗಿ ಬಿಸಿಯಾದ ಬಳಿಕ, ಬಾಳೆಕಾಯಿ ತುಂಡುಗಳನ್ನು ಎಣ್ಣೆಗೆ ಹಾಕಿ, ಮಧ್ಯಮ ಉರಿಯಲ್ಲಿ ಹುರಿಯಿರಿ. ಬಿಳಿ ಬಣ್ಣದಿಂದ ಚಿನ್ನದ ಬಣ್ಣಕ್ಕೆ ಬದಲಾಗುವವರೆಗೂ ಹುರಿಯಿರಿ. ನಂತರ ಇದಕ್ಕೆ ಉಪ್ಪು ಮತ್ತು ಮೆಣಸಿನಕಾಯಿ ಹಾಕಿ ಮಿಶ್ರಣ ಮಾಡಬೇಕು. ಚಿಪ್ಸ್‌ಗಳು ಹುರಿದ ನಂತರ, ಉರಿಯಿಂದ ತೆಗೆದು, ಎಣ್ಣೆ ಹೋಗಲೆ ಟಿಷ್ಯು ಪೇಪರ್ ಮೇಲೆ ಇಡಿ. ಚಿಪ್ಸ್ ತಣ್ಣಗಾದ ನಂತರ ಹಾರ್ಮೆಟಿಕ್ ಅಥವಾ ಏರ್ ಟೈಟ್ ಡಬ್ಬಿಯಲ್ಲಿ ಇಡಬಹುದು. ಕೆಲ ದಿನಗಳು ಕ್ರ್ಯಾಂಚಿ ಆಗೇ ಇರುತ್ತದೆ. ಹೆಚ್ಚು ಬಿಸಿ ಎಣ್ಣೆಯಲ್ಲಿ ಹುರಿದರೆ ಚಿಪ್ಸ್ ಹೊಳೆಯುತ್ತೆ. ಕಾಳು ಮೆಣಸು ಅಥವಾ ಜೀರಿಗೆ ಪುಡಿ ಸೇರಿಸಿದರೆ ಹೆಚ್ಚು ರುಚಿ ಬರುತ್ತದೆ.