ಕೊರಟಗೆರೆ: ಏಕಾಏಕಿ ಜನರ ಮೇಲೆ ಹೆಜ್ಜೆನು ದಾಳಿ

ಕೊರಟಗೆರೆ: 

ಏಕಾಏಕಿ ಹೆಜ್ಜೆನು ದಾಳಿ ಮಾಡಿದ್ದು ಕೊರಟಗೆರೆ ಪಟ್ಟಣದ ಜನತೆ ಬೆಚ್ಚಿಬಿದ್ದಿದ್ದಾರೆ. ಹೌದು ಕೊರಟಗೆರೆ ಪಟ್ಟಣದ ಊರ್ಡಿಗೆರೆ ಸರ್ಕಲ್‌ ಬಳಿ ಹೆಜ್ಜೇನು ದಾಳಿ ಮಾಡಿದ್ದು, ಅಲ್ಲೇ ಪಕ್ಕದಲ್ಲಿದ್ದ ಡಿಗ್ರಿ ಕಾಲೇಜಿನ ಮೂವರು ವಿದ್ಯಾರ್ಥಿಗಳು, ಇಬ್ಬರು ಉಪನ್ಯಾಸಕರು ಸೇರಿ ಸಾರ್ವಜನಿಕರ ಮೇಲೆ ಹೆಜ್ಜೆನು ಅಟ್ಯಾಕ್‌ ಆಗಿದೆ, ಹೆಜ್ಜೆನು ದಾಳಿಯಿಂದ ಗಾಯಗೊಂಡಿದ್ದವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರಟಗೆರೆ ಪಟ್ಟಣದ ಊರ್ಡಿಗೆರೆ ಸರ್ಕಲ್‌ ಬಳಿ ಡಿಗ್ರಿ ಕಾಲೇಜು ಇದೆ, ರಸ್ತೆ  ಬದಿಯಲ್ಲಿದ್ದ ಮರಗಳಲ್ಲಿ ಜೇನು ಹುಳಗಳು ಜೇನು ಕಟ್ಟಿವೆ. ಏಕಾಏಕಿ ಹೆಜ್ಜೇನುಗಳು ದಾರಿಯಲ್ಲಿ ಹೋಗುವವರ ಮೇಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಮೇಲೆ ದಾಳಿ ಮಾಡಿವೆ. ಹೆಜ್ಜೇನು ದಾಳಿ ಮಾಡ್ತಿದ್ದಂತೆ ಅಲ್ಲಿದ್ದ ಜನರು ಗಾಡಿಗಳನ್ನು ಅಲ್ಲಿಯೇ ಬಿಟ್ಟು ಹೆಜ್ಜೇನು ದಾಳಿಯಿಂದ ರಕ್ಷಣೆ ಮಾಡಿಕೊಳ್ಳಲು ದಿಕ್ಕಾಪಾಲಾಗಿ ಜನರು ಓಡಿದ್ದಾರೆ. ಇನ್ನು ಹೆಜ್ಜೆನು ದಾಳಿಯಿಂದ ಸುಮಾರು 30 ರಿಂದ 35 ಮಂದಿಗೆ ಗಾಯಗಳಾಗಿದ್ದು ಕೂಡಲೇ ಗಾಯಾಳುಗಳನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.

ಹೆಜ್ಜೆನು ದಾಳಿ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ರಸ್ತೆ ಬದಿಯಲ್ಲಿರೋ ಮರಗಳಲ್ಲಿ ಹೆಜ್ಜೇನು ಕಟ್ಟಿದ್ದು ದಾರಿಯಲ್ಲಿ ಹೋಗುವವರ ಮೇಲೆ ಅಟ್ಯಾಕ್‌ ಮಾಡ್ತಿದೆ. ಹೀಗಾಗಿ ಮರಗಳಲ್ಲಿ ಇರುವ ಹೆಜ್ಜೇನುಗಳನ್ನು ತೆರವು ಮಾಡುವಂತೆ ಸ್ಥಳೀಯರು ಆಗ್ರಹ ಮಾಡುತ್ತಿದ್ದಾರೆ.

Author:

...
Sub Editor

ManyaSoft Admin

share
No Reviews