ಸಿನಿಮಾ : ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ತಮ್ಮ ಮಾದಕ ಲುಕ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಉಂಟುಮಾಡಿದ್ದಾರೆ. ರಶ್ಮಿಕಾ, ಮಂದಣ್ಣ ಇತ್ತೀಚೆಗೆ ಬ್ಲ್ಯಾಕ್ ಡ್ರೆಸ್‌ನಲ್ಲಿರುವ ಮಾದಕ ಫೋಟೋಶೂಟ್ ಮಾಡಿಸಿದ್ದು, ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಬ್ಲ್ಯಾಕ್ ಡ್ರೆಸ್‌ನಲ್ಲಿ ಶ್ರೀವಲ್ಲಿ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಅವರ ಈ ಲುಕ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ.
ಈ ನವ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ರಶ್ಮಿಕಾ ಪೋಸ್ಟ್‌ಗೆ "ಹಾಟ್", "ಬ್ಯೂಟಿ" ಎಂಬಂತಹ ಕಾಮೆಂಟ್‌ಗಳ ಮಹಾಪೂರವೇ ಹರಿದು ಬಂದಿದೆ. ಅವರ ಈ ಡ್ರೆಸ್ ಮತ್ತು ಸ್ಟೈಲಿಂಗ್‌ಗೆ ಭರ್ಜರಿ ಪ್ರಶಂಸೆ ವ್ಯಕ್ತವಾಗಿದ್ದು, ನಟಿಯು ತಮ್ಮ ಡಿಸೈನರ್ ಮತ್ತು ಮೇಕಪ್ ತಂಡದವರಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ. ಈ ಲುಕ್‌ನಲ್ಲಿ ರಶ್ಮಿಕಾ ಅವಾರ್ಡ್ ಫಂಕ್ಷನ್‌ಗೆ ಹಾಜರಾಗಿದ್ದರೂ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೈಕ್ಸ್‌ಗಳನ್ನು ಗಿಟ್ಟಿಸಿವೆ.
‘ಕಿರಿಕ್ ಪಾರ್ಟಿ’ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ, ಇದೀಗ ದಕ್ಷಿಣ ಭಾರತದ ಹಾಗೂ ಬಾಲಿವುಡ್‌ನ ಪ್ರಮುಖ ನಟಿಯಾಗಿ ಬಣ್ಣಹಚ್ಚುತ್ತಿದ್ದಾರೆ. ‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ ಜೊತೆ ಮತ್ತೊಮ್ಮೆ ಸ್ಪಾರ್ಕ್ ಮಾಡುವ ನಿರೀಕ್ಷೆಯಿದೆ.