ಮಧುಗಿರಿ : ಗ್ರಾಮೀಣಾ ಭಾಗದಲ್ಲಿ ಆರ್ಥಿಕ ಚಟುವಟಿಕೆ ನಡೆದಾಗ ಮಾತ್ರ ದೇಶದ ಜಿಡಿಪಿ ಏರಿಕೆಯಾಗಲು ಸಾಧ್ಯ ಅಂತ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಮಧುಗಿರಿಯಲ್ಲಿ ತಿಳಿಸಿದ್ರು.
ಮಧುಗಿರಿ ತಾಲೂಕಿನ ಎಂಪಿಎಂಸಿ ಮಾರುಕಟ್ಟೆ ಅವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಅವರು, ದೇಶದ ಆರ್ಥಿಕ ಶಕ್ತಿ ಹೆಚ್ಚಾಗಬೇಕಾದರೆ ಹಳ್ಳಿಗಾಡಿನಲ್ಲಿ ಉತ್ಪಾದನೆ ಹೆಚ್ಚಾಗಬೇಕು, ಇದಕ್ಕೆ ಹೈನುಗಾರಿಕೆ, ಕೃಷಿ ಅರ್ಥಿಕ ಚಟುವಟಿಕೆ ನಡೆಯಬೇಕು. ಹಳ್ಳಿಗಾಡಿನ ಜನ ಅರ್ಥಿಕವಾಗಿ ಶಕ್ತಿವಂತರಾದಾಗ ಮಾತ್ರ ನೆಮ್ಮದಿಯ ಬದುಕು ಮತ್ತು ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತದೆ ಎಂದರು.
ಉಪ ಕೃಷಿ ನಿರ್ದೇಶಕ ಚಂದ್ರ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಅಗತ್ಯ ಬಿತ್ತನೆ ಬೀಜವನ್ನು ದಾಸ್ತಾನು ಮಾಡಲಾಗಿದೆ. ಒಟ್ಟು ಕೃಷಿ ಇಲಾಖೆಯಲ್ಲಿ 685 ಲಕ್ಷ ವೆಚ್ಚ ಸವಲತ್ತುಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಗೊಟೂರು ಶಿವಪ್ಪ, ಡಿವೈಎಸ್ಪಿ ಮಂಜುನಾಥ್, ತಹಶೀಲ್ದಾರ್ ಶಿರಿನ್ ತಾಜ್, ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಯಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಯಣ ರೆಡ್ಡಿ, ಮತ್ತಿತ್ತರರು ಹಾಜರಿದ್ದರು.