Virat Kohli : ಗುಜರಾತ್ ವಿರುದ್ಧ ಅಬ್ಬರಿಸೋಕೆ ಕಿಂಗ್ ಕೊಹ್ಲಿ ರೆಡಿ

ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ
ಕ್ರಿಕೆಟ್‌

Virat Kohli:

ವಿರಾಟ್‌ ಕೊಹ್ಲಿ ಕ್ರಿಕೆಟ್‌ ಜಗತ್ತನ್ನೇ ಆಳುತ್ತಿರೋ ರಿಯಲ್‌ ಕಿಂಗ್‌. ಈತ ಶತಕಗಳ ಸರದಾರ. ದಾಖಲೆಗಳ ಒಡೆಯ. ಈತ ಚೆಂಡುದಾಂಡಿನಾಟದ ರನ್‌ ಮಷಿನ್‌ ಕೂಡ ಹೌದು. ಟೀಂ ಇಂಡಿಯಾದ ಚೇಸಿಂಗ್‌ ಮಾಸ್ಟರ್‌ ಕೂಡ ಹೌದು. ದಶಕಗಳಿಂದ ವಿಶ್ವ ಕ್ರಿಕೆಟ್‌ ಅನ್ನೋ ಸಾಮ್ರಾಜ್ಯವನ್ನೇ ಆಳುತ್ತಿರೋ ಕಿಂಗ್‌ ಕೊಹ್ಲಿ, ಐಪಿಎಲ್‌ನಲ್ಲಿಯೂ ಸಾಲು ಸಾಲು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಯಾರೂ ಅಳಿಸಲಾಗದ ದಾಖಲೆಗಳನ್ನು ಕೂಡ ಮಾಡಿದ್ದಾರೆ. ಇಡೀ ಐಪಿಎಲ್‌ ಇತಿಹಾಸದಲ್ಲಿಯೇ ಅತೀ ಹೆಚ್ಚು ರನ್‌ ಗಳಿಸಿರೋ ಆಟಗಾರ ಅನ್ನೋ ದಾಖಲೆ ಒಂದು ಕಡೆಯಾದರೆ, ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್‌ ಗಳಿಸಿದ ದಾಖಲೆ ಇನ್ನೊಂದು ಕಡೆ. ಮತ್ತೊಂದು ಕಡೆ ಅತೀ ಹೆಚ್ಚು ಶತಕಗಳನ್ನು ಬಾರಿಸಿರೋ ದಾಖಲೆ ಕೂಡ ರನ್‌ ಮಷಿನ್‌ ಹೆಸರಿನಲ್ಲಿದೆ. ಇದೀಗ ಇವತ್ತಿನ ಪಂದ್ಯದ ಮೂಲಕ ಮತ್ತೊಂದು ದಾಖಲೆಯನ್ನು ಬರೆಯಲು ಹೊರಟಿದ್ದಾರೆ ವಿರಾಟ್‌ ಕೊಹ್ಲಿ.

ಕಳೆದ ಮೂರ್ನಾಲ್ಕು ಆವೃತ್ತಿಗಳಿಂದಲೂ ಭರ್ಜರಿ ಪ್ರದರ್ಶನವನ್ನೇ ನೀಡುತ್ತಾ ಬರ್ತಿರುವ ವಿರಾಟ್‌ ಕೊಹ್ಲಿ ಕೂಡ, ಈ ಬಾರಿಯ ಐಪಿಎಲ್‌ನಲ್ಲಿಯೂ ಭರ್ಜರಿ ಪ್ರದರ್ಶನವನ್ನೇ ನೀಡ್ತಿದ್ದಾರೆ. ಇದೀಗ ತವರಿನಲ್ಲಿ ನಡೆಯುವ ಪಂದ್ಯದಲ್ಲಿಯೂ ಅಬ್ಬರಿಸೋದಕ್ಕೆ ಕೊಹ್ಲಿ ಸಜ್ಜಾಗಿದ್ದಾರೆ. ಜೊತೆಗೆ ಟಿ-೨೦ ಕ್ರಿಕೆಟ್‌ನಲ್ಲಿ ಮಹತ್ವದ ಸಾಧನೆ ಮಾಡಲು ರೆಡಿಯಾಗಿದ್ದಾರೆ.

ವಿರಾಟ್‌ ಕೊಹ್ಲಿ ಈಗಾಗಲೇ ಟಿ20 ಕ್ರಿಕೆಟ್‌ ಇತಿಹಾಸದಲ್ಲಿ 401 ಪಂದ್ಯಗಳನ್ನು ಆಡಿದ್ದು, ಈ ವೇಳೆ 12976 ರನ್‌ ಸಿಡಿಸಿದ್ದಾರೆ. ಇವರಿಗೆ 13 ಸಾವಿರ ರನ್‌ಗಳ ಮಾರ್ಕ್‌ ಮುಟ್ಟಲು ಇನ್ನು ಕೇವಲ 24 ರನ್‌ಗಳ ಅವಶ್ಯಕತೆ ಇದೆ. ಈ ಸಾಧನೆಯನ್ನು ಮಾಡಿದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ ದಾಖಲಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿರೋದು ಕೇವಲ ನಾಲ್ಕು ಆಟಗಾರರು ಮಾತ್ರ. ಕೊಹ್ಲಿ ಈವರೆಗೆ 125 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 4188 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ 254 ಪಂದ್ಯಗಳಿಂದ 8094 ರನ್ ಗಳಿಸಿದ್ದಾರೆ. ಒಂದು ವೇಳೆ ಇವತ್ತಿನ ಪಂದ್ಯದಲ್ಲಿ ೨೪ ರನ್‌ ಗಳಿಸಿದ್ರೆ ಕೊಹ್ಲಿ ಟಿ-೨೦ ಕ್ರಿಕೆಟ್‌ನಲ್ಲಿ ೧೩ ಸಾವಿರ ರನ್‌ ಗಡಿ ತಲುಪಲಿದ್ದಾರೆ. ಕೊಹ್ಲಿ ಈ ದಾಖಲೆಯನ್ನು ಬರೀತಾರಾ ಕಾದುನೋಡಬೇಕಿದೆ.

Author:

...
Editor

ManyaSoft Admin

share
No Reviews