ಕಲಬುರಗಿ : ಅನೈತಿಕ ಸಂಬಂಧದ ಶಂಕೆ | ಪತ್ನಿ ಮತ್ತು ಪ್ರಿಯಕರನ ಬರ್ಬರ ಹತ್ಯೆ

ಕಲಬುರಗಿ :

ವ್ಯಕ್ತಿಯೋರ್ವ ಅನೈತಿಕ ಸಂಬಂಧಧ ಶಂಕೆಯಲ್ಲಿ ಅತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾದ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಸೃಷ್ಠಿ ಹಾಗೂ 23 ವರ್ಷದ ಖಾಜಪ್ಪ ಎಂಬುವರು ಕೊಲೆಯಾದವರಾಗಿದ್ದಾರೆ.

ಶ್ರೀಮಂತ ಎಂಬುವನು ಈ ಕೃತ್ಯವನ್ನು ಎಸಗಿದ್ದಾನೆ. ಎರಡು ವರ್ಷಗಳು ಹಿಂದೆ ಸೃಷ್ಠಿ ಮತ್ತು ಆರೋಪಿ ಶ್ರೀಮಂತ ಎಂಬುವರಿಗೆ ವಿವಾಹವಾಗಿದ್ದು, ನಿನ್ನೆ ಆರೋಪಿ ಊರಿಗೆ ಹೋಗಿ ಮನೆಗೆ ಬಂದಾಗ ಸೃಷ್ಠಿ ಮತ್ತು ಖಾಜಪ್ಪ ಜೊತೆಗಿರುವುದನ್ನು ಕಂಡು ಇಬ್ಬರು ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸ್ಥಳದಲ್ಲೇ ಉಸಿರು ನಿಲ್ಲಿಸಿ ಕೊಲೆ ಗೈದಿದ್ದಾನೆ. ನಂತರ ಆರೋಪಿಯು ತಾನೇ ಪೊಲೀಸ್‌ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ.

ಸದ್ಯ ಈ ಸಂಬಂಧ ಮಾದನ ಹಿಪ್ಪರಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews