ಭಾರತ : ನಮ್ಮ ದೇಶದ ಫೈಟರ್ ಜೆಟ್ ಕಸರತ್ತು ಹೇಗಿದೆ ಗೊತ್ತಾ?

ಭಾರತ :

ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಈಗ ಭಾರತ ಎಲ್ಲೆಡೆ ಅಲರ್ಟ್‌ ಆಗಿದೆ. ಇನ್ನು ಪಾಕಿಸ್ತಾನ ಯಾವಾಗ ಬೇಕಾದರೂ ಯುದ್ದ ಸಾರಬಹುದು. ಈ ಕಾರಣಕ್ಕೆ ಭಾರತದ ಫೈಟರ್‌ ಜೆಟ್‌ಗಳು ಉತ್ತರ ಪ್ರದೇಶದ ಶಹಜಹಾನ್‌ಪುರನ ಗಂಗಾ ಎಕ್ಸ್‌ಪ್ರೆಸ್‌ ವೇನಲ್ಲಿ ತಾಕತ್ತು ಪ್ರದರ್ಶಿಸುತ್ತಿವೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಮುನ್ಸೂಚನೆ ಸಿಕ್ಕಿದೆ. ಈ ಹಿನ್ನಲೆ ಪ್ರಧಾನಿ ಮೋದಿಯವರು ಮೂರು ಪಡೆಗಳ ಮುಖ್ಯಸ್ಥರಿಗೆ ಮುಕ್ತ ಅವಕಾಶ ನೀಡಿದ್ದಾರೆ. ಈ ಕಾರಣಕ್ಕೆ ಹಗಲು- ರಾತ್ರಿ ಟೇಕಾಫ್​​ ಮತ್ತು ಲ್ಯಾಂಡಿಂಗ್​ ಆಗುವ ದೇಶದಲ್ಲಿನ ಏಕೈಕ ಹೆದ್ದಾರಿಯಾದ ಗಂಗಾ ಎಕ್ಸ್​​ ಪ್ರೆಸ್​​ ವೇಯಲ್ಲಿ ವಾಯುಪಡೆಯ ಯುದ್ಧ ವಿಮಾನಗಳು ತಮ್ಮ ತಾಕತ್ತು ಪ್ರದರ್ಶಿಸುತ್ತಿವೆ. ಫೈಟರ್​ ಜೆಟ್​​ ಗಳು ರಾತ್ರಿ ವೇಳೆ ಇಲ್ಲಿಂದ ಹಾರುವ ಮತ್ತು ಲ್ಯಾಂಡಿಂಗ್​ ಆಗುವ ಕಸರತ್ತು ನಡೆಸುತ್ತಿವೆ.

ಸಂಜೆ 7 ರಿಂದ ರಾತ್ರಿ 10 ಗಂಟೆಯ ನಡುವೆ ನಡೆದ ಯುದ್ಧಾಭ್ಯಾಸದಲ್ಲಿ 3.5 ಕಿಲೋಮೀಟರ್ ಇರುವ ಈ ವಾಯುನೆಲೆಯಲ್ಲಿ ರಫೇಲ್, ಸುಖೋಯ್, ಜಾಗ್ವಾರ್ ಮತ್ತು ಮಿರಾಜ್ -2000, ಎಂ-32 ಯುದ್ಧ ವಿಮಾನಗಳು ಟಚ್-ಅಂಡ್-ಗೋ ಕಸರತ್ತು ನಡೆಸುತ್ತಿವೆ. ವಾಯುಪಡೆಯ ಯುದ್ಧ ವಿಮಾನಗಳು 24 ಗಂಟೆಯಲ್ಲಿ ಯಾವಾಗ ಬೇಕಾದರೂ ಯುದ್ದಕ್ಕೆ ಸಿದ್ದವಿರಬೇಕಾಗಿದೆ.

Author:

...
Sushmitha N

Copy Editor

prajashakthi tv

share
No Reviews