ಹೆಬ್ಬೂರು : ತುಕ್ಕು ಹಿಡಿಯುತ್ತಿದ್ದ ಗಾಡಿಗಳಿಗೆ ಮರುಜೀವ | ಇದು ಪ್ರಜಾಶಕ್ತಿ ಟಿವಿ ಬಿಗ್ ಇಂಪ್ಯಾಕ್ಟ್

ಹೆಬ್ಬೂರು :

ತುಮಕೂರು ಜಿಲ್ಲೆ ಹೆಬ್ಬೂರು ಪೊಲೀಸ್‌ ಠಾಣಾ ವ್ಯಾಪ್ತಿಗೆ ಸೇರುವ ಪ್ರದೇಶಗಳಲ್ಲಿ ನಾನಾ ಪ್ರಕರಣಗಳಲ್ಲಿ ಬೈಕ್‌, ಕಾರು ಹಾಗೂ ಟ್ರ್ಯಾಕ್ಟರ್‌ಗಳನ್ನು ಸೀಜ್‌ ಮಾಡಲಾಗಿದೆ. ಆದರೆ ಸೀಜ್‌ ಆದ ಗಾಡಿಗಳು ಸುಮಾರು ವರ್ಷಗಳಿಂದ ಅಲ್ಲಿಯೇ ಬಿದ್ದಿದ್ದು ಗೆದ್ದಲು ಹಿಡಿಯುತ್ತಿವೆ ಎಂದು ನಿಮ್ಮ ಪ್ರಜಾಶಕ್ತಿ ಮಾಧ್ಯಮ ವರದಿ ಮಾಡಿತ್ತು. ವರದಿ ಬಿತ್ತರಿಸಿದ ಬೆನ್ನಲ್ಲೆ ವಾಹನಗಳನ್ನು ಹರಾಜು ಹಾಕಲು ಪೊಲೀಸರು ಮುಂದಾಗಿದ್ದಾರೆ.

ವರದಿಗೆ ಎಚ್ಚೆತ್ತ ಹೆಬ್ಬೂರು ಪೊಲೀಸ್‌ ಠಾಣೆ ಪೊಲೀಸರು ತುಕ್ಕು ಹಿಡಿದು, ಗೆದ್ದಲು ಹಿಡಿಯುತ್ತಿದ್ದ ಬೈಕ್ ಗಳನ್ನು ಹರಾಜಿಗಿಟ್ಟಿದ್ದಾರೆ. ಹರಾಜು ಪ್ರಕ್ರಿಯೆ ಕರೆಯಲಾಗಿತ್ತು. ಹೀಗಾಗಿ ಹಲವರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಅದರಂತೆ ಇಂದು ಹರಾಜು ಪ್ರಕ್ರಿಯೆಯನ್ನು ಪೊಲೀಸ್‌ ಠಾಣೆಯ ಎದುರೇ ನಡೆಸಲಾಯಿತು.

ಹಲವು ದಿನಗಳಿಂದ ಪೊಲೀಸ್‌ ಠಾಣೆಯ ಮುಂಭಾಗದಲ್ಲಿ ತುಕ್ಕು ಹಿಡಿದು ಹಾಳಾಗುತ್ತಿದ್ದ ವಾಹನಗಳ ಕುರಿತಾಗಿ ವರದಿ ಮಾಡಿದ್ದ ನಿಮ್ಮ ಪ್ರಜಾಶಕ್ತಿ ಟಿವಿಗೆ ಎಚ್ಚೆತ್ತ ಪೊಲೀಸ್‌ ಅಧಿಕಾರಿಗಳು ಹರಾಜು ಪ್ರಕ್ರಿಯೆಗೆ ಮುಂದಾಗಿದ್ದಾರೆ. ಇದು ನಿಮ್ಮ ಪ್ರಜಾಶಕ್ತಿ‌ ಮಾಧ್ಯಮದ ಫಲಶೃತಿಯಾಗಿದೆ.

Author:

...
Sushmitha N

Copy Editor

prajashakthi tv

share
No Reviews