CHIKKABALLAPURA: ಕಲ್ಲು ಕ್ವಾರೆ ನಿರ್ಮಾಣ ವಿರೋಧಿಸಿದ್ದಕ್ಕೆ ರೈತನ ಮೇಲೆ ಫೈರಿಂಗ್‌

ಚಿಕ್ಕಬಳ್ಳಾಪುರ:

ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ಬಳಿ ಉದ್ಯಮಿ ಸಕಲೇಶ್‌ ಅಕ್ರಮವಾಗಿ ಕಲ್ಲು ಕ್ವಾರೆ ನಿರ್ಮಾಣ ಮಾಡಲು ಮುಂದಾಗಿದ್ದ. ಇದನ್ನು ರೈತನೋರ್ವ ಪ್ರಶ್ನೆ ಮಾಡಿದ್ದಕ್ಕೆ ಕೆರಳಿದ ಸಕಲೇಶ್‌ ಎಂಬ ಉದ್ಯಮಿ ರೈತನ ಮೇಲೆ ಏಕಾಏಕಿ ಜಗಳ ತೆಗೆದು ಫೈರಿಂಗ್‌ ನಡೆಸಿದ್ದಾನೆ.  ಕಾಲಿಗೆ ಗುಂಡು ಬಿದ್ದಿದ್ದು ನರಳಾಡ್ತಿರೋ ರೈತ. ಉದ್ಯಮಿಯ ಅಟ್ಟಹಾಸ ಕಂಡು ಗ್ರಾಮಸ್ಥರು ಕೂಗಾಡಲಾರಂಭಿಸಿದ್ರು. ಕೆಲವು ನಿಮಿಷ ಸ್ಥಳದಲ್ಲಿ ಆತಂಕದ ಕಾರ್ಮೋಡವೇ ಆವರಿಸಿತ್ತು. ಮಂಚೇನಹಳ್ಳಿ ಗ್ರಾಮದ ಹೊರವಲಯದಲ್ಲಿ ಉದ್ಯಮಿ ಸಕಲೇಶ್‌ ಎಂಬಾತ ಕಲ್ಲುಕ್ವಾರೆ ನಿರ್ಮಾಣ ಮಾಡಲು ಮುಂದಾಗಿದ್ದ. ಕಲ್ಲು ಕ್ವಾರೆ ನಿರ್ಮಾಣದ ವಿಚಾರಕ್ಕೆ ಆಗ್ಗಾಗೆ ಗ್ರಾಮಸ್ಥರು ಹಾಗೂ ಉದ್ಯಮಿ ಸಕಲೇಶ್‌ ನಡುವೆ ಗಲಾಟೆ ನಡೆಯುತ್ತಲೇ ಇತ್ತು. ಜಗಳದ ನಡುವೆಯೂ ಇಂದು ಉದ್ಯಮಿ ಸಕಲೇಶ್‌ ಏಕಾಏಕಿ ಜೆಸಿಬಿ ಕರೆತಂದು ಕಲ್ಲು ಕ್ವಾರೆ ನಿರ್ಮಾಣದ ಜಾಗಕ್ಕೆ ರಸ್ತೆ ಮಾಡಲು ಮುಂದಾಗಿದ್ದ..ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಕ್ಕಪಕ್ಕದ ಜಮೀನಿನ ರೈತರು ರಸ್ತೆ ನಿರ್ಮಾಣದಿಂದ ನಮ್ಮ ಜಮೀನಿಗೆ ತೊಂದ್ರೆ ಆಗುತ್ತೆ ಅಂತಾ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ರೈತ ರವಿಕುಮಾರ್‌ ಮೇಲೆ ಓಪನ್‌ ಪ್ಲೇಸ್‌ ನಲ್ಲೇ ಫೈರಿಂಗ್‌ ಮಾಡಿ ಅಟ್ಟಹಾಸ ಮೆರೆದಿದ್ದಾನೆ. 

ಇನ್ನು ಗಾಯಾಳು ರವಿಕುಮಾರ್‌ ಜಮೀನಿನ ಬಳಿ ರಸ್ತೆ ಮಾಡಲಾಗ್ತಿತ್ತು ,,ಜಮೀನು ಪೋಡಿ ಆಗಿಲ್ಲ ಅಧಿಕಾರಿಗಳು ಬಂದು ಪರಿಶೀಲನೆ ಮಾಡೋವೆರೆಗೂ ರಸ್ತೆ ಕೆಲಸ ಮಾಡುವಂತಿಲ್ಲ ಎಂದು ಅಧಿಕಾರಿಗಳು ತಾಕೀತು ಮಾಡಿದ್ರು. ಅಲ್ದೇ ಕಲ್ಲು ಕ್ವಾರೆ ನಿರ್ಮಾಣ ಜಾಗದ ಪಕ್ಕದಲ್ಲೇ ಮುನೇಶ್ವರ ಹಾಗು ತಿಮ್ಮರಾಯಸ್ವಾಮಿ ದೇವಸ್ಥಾನ ಇದೆ. ಕ್ವಾರೆ ನಿರ್ಮಾಣ ಆದ್ರೆ ಊರಿನ ಪರಿಸರ, ಬೆಟ್ಟಗುಟ್ಟ  ನಾಶ ಆಗುತ್ತೆ ಹಾಗಾಗಿ ಕ್ವಾರಿ ನಿರ್ಮಾಣ ಬೇಡ ಎಂದು ಇಲ್ಲಿನ ರೈತರು ಪಟ್ಟು ಹಿಡಿದಿದ್ದಾರೆ , ಇದೇ ವಿಚಾರ ಗಲಾಟೆ ನಡೆದಿದ್ದ ವೇಳೆ ಪೊಲೀಸರ ಸಮ್ಮುಖದಲ್ಲಿ ರಾಜೀಸಂಧಾನ ಕೂಡ ನಡೆದಿತ್ತು. ಇದ್ರಿಂದ ಕೋಪಗೊಂಡ ಉದ್ಯಮಿ ಸಕಲೇಶ್‌ ಇಂದು ರಸ್ತೆ ನಿರ್ಮಾಣ ಮಾಡಲು ಬಂದಿದ್ದು, ತನ್ನ ಕೆಲಸಕ್ಕೆ ಅಡ್ಡ ಬಂದ ರೈತ ರವಿಕುಮಾರ್‌ಗೆ ಗದರುತ್ತಾ.. ನನಗೆ ರಾಜಕೀಯ ತಾಕತ್ತು ಇದೆ.  ಸಿಎಂ  ಸಿದ್ದರಾಮಯ್ಯ ಹೇಳಿದ್ದಾರೆ ಡಿಸಿ ಹಾಗು ತಹಸೀಲ್ದಾರ್‌ ನನ್ನ ಕೈಯಲ್ಲಿದ್ದಾರೆ ಎಂದು ಅವಾಜ್‌ ಹಾಕಿ ರೈತರನ್ನು ಬೆದರಿಸುತ್ತಾ, ಏಕಾಏಕಿ  ಕಾಲಿಗೆ ಶೂಟ್‌ ಮಾಡಿದ್ದಾನೆ. ಗಾಯಗೊಂಡ ರವಿಕುಮಾರ್‌ನನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇತ್ತ ಉದ್ಯಮಿಯ ದರ್ಪ ಖಂಡಿಸಿ ಮಂಚೇನಹಳ್ಳಿ ಗ್ರಾಮಸ್ಥರು ಪೊಲೀಸ್‌ ಠಾಣೆ ಎದುರು ಕೂಡಲೇ ಉದ್ಯಮಿ ಸಕಲೇಶ್‌ನನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆಯಿಂದ ಪೊಲೀಸ್‌ ಠಾಣೆ ಎದುರು ಕೆಲ ಕಾಲ ಬಿಗುವಿನ ವಾತಾವರಣ ಏರ್ಪಟ್ಟಿತ್ತು.  

ಇನ್ನು ರಸ್ತೆ ನಿರ್ಮಾಣಕ್ಕೆ ಬಂದ ಉದ್ಯಮಿ ಸಕಲೇಶ್‌ ತಲೆಗೆ ರೈತರು ಕಲ್ಲಿನಿಂದ ಹೊಡೆದ್ರು ಅನ್ನೋ ಕಾರಣಕ್ಕಾಗಿ, ರೈತರ ಮೇಲೆ ಕೋಪಗೊಂಡ ಸಕಲೇಶ್‌ ಆತ್ಮರಕ್ಷಣೆಗಾಗಿ, ತನಗೆ ಕಲ್ಲಿನಿಂದ ಹೊಡೆದವರು ಯಾರು ಎಂದು ಗನ್‌ ಹಿಡಿದು ಎಲ್ಲರನ್ನು ಪ್ರಶ್ನಿಸುತ್ತಾ ಫೈರಿಂಗ್‌ ಮಾಡಿದ್ದಾನೆ ಅನ್ನೋದು ಈ ದೃಶ್ಯದಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ.

ಒಟ್ಟಾರೆ ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಕ್ವಾರಿಗಳು ಹಾವಳಿ ಹೆಚ್ಚಾಗ್ತಾ ಇದ್ದು, ಅಕ್ರಮ ಟಿಪ್ಪರ್‌, ಲಾರಿಗಳ ಓಡಾಟದಿಂದ  ಪ್ರತಿನಿತ್ಯ  ಜನರಿಗೆ ತೊಂದರೆ ಆಗ್ತಿದೆ ,,ಇದಕ್ಕೆ ಗಣಿ ಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್‌ ಇಲಾಖೆಯ ಕುಮ್ಮಕ್ಕು ಇದ್ಯಾ ಎಂಬ ಅನುಮಾನ ಮೂಡಿದೆ. ಮುಂದಿನ ದಿನಗಳಲ್ಲಿ ಪೊಲೀಸರು, ಅಧಿಕಾರಿಗಳು  ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸ್ತಾರೋ.. ಇಲ್ವೋ ಎಂದು ಕಾದುನೋಡಬೇಕಿದೆ.

Author:

...
Keerthana J

Copy Editor

prajashakthi tv

share
No Reviews