ಕ್ರಿಕೆಟ್ :
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ರು. ಬದ್ದ ವೈರಿಗಳಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಎಲ್ರ ಲ್ಲೂ ಇತ್ತು. ಆರ್‌ಸಿಬಿ ಗೆ ಇದು ಪ್ಲೇ ಆಪ್ ಗೆ ಎಂಟ್ರಿ ಕೋಡೋ ಮ್ಯಾಚ್ ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯ ಗೆಲ್ಲಬೇಕು.
ಆರ್‌ಸಿಬಿ ಸೋಲಿಸಬೇಕು ಅನ್ನೋ ಫೈಟ್. ಆದ್ರೆ ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಮತ್ತೊಮ್ಮೆ ಜಯಬೇರಿ ಸಾದಿಸಿತು. ಕೇವಲ 2 ರನ್‌ಗಳಿಂದ ರಜತ್ ಪಾಟೀದಾರ್ ಪಡೆ ಗೆಲುವು ಸಾದಿಸಿತು. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ 20 ಓವರ್ ಗಳಲ್ಲಿ 5 ವಿಕೆಟ್‌ಗೆ 214 ರನ್ ಸಿಡಿಸಿ ಬಿಗ್ ಟಾರ್ಗೇಟ್ ನೀಡಿತ್ತು.
ಈ ಗುರಿಯನ್ನು ಬೆನ್ನತ್ತಿದ್ದ ಚೆನೈ 20 ಓವರ್ ಗಳಲ್ಲಿ 5 ವಿಕೆಟ್ 211 ರನ್ ಗಳಿಸಿ ಸೋಲನ್ನ ಅನುಭವಿಸಿತು. ಈ ರಣರೋಚಕ ಪಂದ್ಯದಲ್ಲಿ ಗೆದ್ದ ಆರ್‌ಸಿಬಿ ತಂಡವು ಸ್ಟೇಡಿನಲ್ಲಿ ಫುಲ್ ಎಂಜಾಯ್ ಮಾಡಿತು.