ಕಲಬುರಗಿ : ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ ಪ್ರಕರಣ

ಎಟಿಎಂ ಒಡೆದು ಹಣ ಕಳ್ಳತನ ಮಾಡಿರುವುದು.
ಎಟಿಎಂ ಒಡೆದು ಹಣ ಕಳ್ಳತನ ಮಾಡಿರುವುದು.
ಕಲಬುರ್ಗಿ

ಕಲಬುರಗಿ : 

ರಾಜ್ಯದಲ್ಲಿ ಮತ್ತೋಂದು ಎಟಿಎಂ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಕರ್ನಾಟಕದ ನಾನಾ ಭಾಗಗಳಲ್ಲಿ ಸಣ್ಣ ಪುಟ್ಟ ಕಳ್ಳತನ ಪ್ರಕರಣಗಳು ಪ್ರತಿನಿತ್ಯ ನಡೆಯುತ್ತಲೇ ಇವೆ.  ಹೌದು ಮಂಗಳೂರು, ಬೀದರ್ ಬ್ಯಾಂಕಿನ ಹಣ ದರೋಡೆ ಬೆನ್ನಲ್ಲೇ ಇದೀಗ ಎಸ್ ಬಿಎಂ ಬ್ಯಾಂಕ್‌ ನ ಎಟಿಎಂನಲ್ಲಿ ಭದ್ರತಾ ಸಿಬ್ಬಂದಿ ಇಲ್ಲದನ್ನು ಗಮನಿಸಿ ಗ್ಯಾಸ್‌ ಕಟ್ಟರ್‌ ನಿಂದ ಎಟಿಎಂ ಒಡೆದು 18 ಲಕ್ಷ ರೂಪಾಯಿಯನ್ನು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗ್ಯಾಸ್‌ ಕಟ್ಟರ್‌ ಬಳಸಿ ಎಟಿಎಂ ಯಂತ್ರ ಒಡೆದು 18 ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾರೆ. ಗುರುತು ಸಿಗಬಾರದೆಂದು ಕಳ್ಳರು ಸಿಸಿಕ್ಯಾಮರಾಗೆ ಬ್ಲ್ಯಾಕ್‌ ಸ್ಪ್ರೇ ಮಾಡಿ ನಂತರ ದರೋಡೆಕೋರರು ಹಣವನ್ನು ದೋಚಿದ್ದಾರೆ. ಇನ್ನು ಕಲಬುರಗಿ ಗ್ರಾಮೀಣ ಪೋಲಿಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Author:

share
No Reviews