Gruhalakshmi , ಗೃಹಜ್ಯೋತಿ ಗ್ಯಾರಂಟಿ ಯೋಜನೆಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುವುದು ಕಡ್ಡಾಯ

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿದೆ. ಯೋಜನೆಗಳ ದುರುಪಯೋಗ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಫಲಾನುಭವಿಗಳು ಹೊಸದಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯಗೊಳಿಸಿದೆ.
ಯಾವಾಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ?
ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, Gruhalakshmi ಯೋಜನೆಗೆ ಹೊಸ ಅರ್ಜಿ ನಮೂನೆ ಸಿದ್ಧಪಡಿಸಿ ಹಣಕಾಸು ಇಲಾಖೆ ಹಾಗೂ ಇ-ಗೌರ್ನೆನ್ಸ್ ಇಲಾಖೆಗೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಅನುಮೋದನೆ ನೀಡಿದ ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. 2023ರ ಗೃಹಲಕ್ಷ್ಮಿ ಯೋಜನೆ ಅರ್ಜಿಯನ್ನೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 2023ರ ಅರ್ಜಿಯಲ್ಲಿ ಇದ್ದ ಪ್ರಶ್ನೆಗಳ ಜೊತೆಗೆ ಹೊಸ ಪ್ರಶ್ನೆಗಳು ಆ್ಯಡ್ ಆಗಲಿವೆ.
ಇದನ್ನು ಓದಿ : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಅಲರ್ಟ್ – ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ

ಹೊಸ ಅರ್ಜಿಯಲ್ಲಿ ಏನೆಲ್ಲ ಪ್ರಶ್ನೆಗಳು?
• ಮನೆ ಯಜಮಾನಿಯ ಹೆಸರು, ಆಧಾರ್ ಸಂಖ್ಯೆ
• ಬ್ಯಾಂಕ್ ಖಾತೆ ವಿವರ
• ಕುಟುಂಬ ಸದಸ್ಯರ ಮಾಹಿತಿ
• ಜಾತಿ ವಿವರ
• ಪತಿ ಹೆಸರು ಹಾಗೂ ಆಧಾರ್ ಸಂಖ್ಯೆ
• ಆಧಾರ್ ದಾಖಲಾತಿ
• ಐಟಿ/ಜಿಎಸ್ಟಿ ಪಾವತಿ ಮಾಹಿತಿ
• ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಮಾಹಿತಿ
Gruhalakshmi ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ
ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಸಂಗ್ರಹ ಜವಾಬ್ದಾರಿಯನ್ನು ಗ್ಯಾರಂಟಿ ಅನುಷ್ಠಾನ ಸಮಿತಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮನೆ ಮನೆಗೆ ತೆರಳಿ ಅರ್ಜಿಗಳನ್ನು ಸಂಗ್ರಹಿಸಿ ಸೇವಾ ಕೇಂದ್ರಗಳ ಮೂಲಕ ಸಲ್ಲಿಕೆ ಮಾಡಿಸಬಹುದಾಗಿದೆ.

ಖಾತೆ ಹಂಚಿಕೆ ಆದ ಬಳಿಕ ಅರ್ಜಿ ಸಲ್ಲಿಕೆಗೆ ಅವಕಾಶ
ಹಳೆಯ ಅರ್ಜಿಯನ್ನೇ ಹಣಕಾಸು ಇಲಾಖೆಗೆ ಸಲ್ಲಿಕೆ ಮಾಡಲಾಗಿದೆ. ಹಣಕಾಸು ಇಲಾಖೆ ಈ ಅರ್ಜಿಯಲ್ಲಿ ಮತ್ತಷ್ಟು ಪ್ರಶ್ನೆಗಳನ್ನ ಸೇರಿಸುವ ಸಾಧ್ಯತೆ ಇದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೂತನ ಸಚಿವರು ಬಂದ ಬಳಿಕ ಅರ್ಜಿ ಸಲ್ಲಿಕೆಗೆ ಅವಕಾಶ ಇರಲಿದೆ. ಖಾತೆ ಹಂಚಿಕೆ ಆದ ಬಳಿಕ ಅರ್ಜಿ ಸಲ್ಲಿಕೆಗೆ ಅವಕಾಶ ಕೊಡಲಿದ್ದಾರೆ.
ಇದನ್ನು ನೋಡಿ : ಹೇಮೆ ಕಾಮಗಾರಿಗೆ ತಿಪಟೂರಿನ ರೈತರು ಬಿಡಲ್ಲ ನಾವು ಗುಂಡಿಗೆ ಎದೆಯೊಡ್ಡಲು ಸಿದ್ಧ ಎಂದು ಎಚ್ಚರಿಕೆ





