6 ವಿಕೆಟ್ ಕಿತ್ತು ಹಲವು ದಾಖಲೆ ಬರೆದ ಸ್ಪಿನ್ನರ್ Manav Sutar.

ಚಂಡೀಗಢನ ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ–ಅಫ್ಘಾನಿಸ್ತಾನ ಏಕೈಕ ಟೆಸ್ಟ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಮಾನವ್ ಸುತಾರ್ ಗಮನಾರ್ಹ ಸಾಧನೆ ಮಾಡಿದ್ದಾರೆ.
ಅತ್ಯುತ್ತಮ ಬೌಲಿಂಗ್ ಪ್ರದರ್ಶನ
ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ Manav Sutar ಮೊದಲ ಇನ್ನಿಂಗ್ಸ್ನಲ್ಲಿ 6 ವಿಕೆಟ್ಗಳನ್ನು ಕಬಳಿಸಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ.
ಈ ಮೂಲಕ ಅವರು ಭಾರತ ಪರ ಟೆಸ್ಟ್ ಚೊಚ್ಚಲ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ.

ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಕನಸಿನ ಆರಂಭ
ಪಂದ್ಯದ ಆರಂಭದಲ್ಲೇ ತಮ್ಮ ಮೊದಲ ಓವರ್ನಲ್ಲೇ ವಿಕೆಟ್ ಪಡೆದು ಟೆಸ್ಟ್ ವೃತ್ತಿಜೀವನಕ್ಕೆ ಕನಸಿನ ಆರಂಭ ನೀಡಿದ ಸುತಾರ್, ನಿರಂತರವಾಗಿ ನಿಖರ ಲೈನ್ ಮತ್ತು ಲೆಂಗ್ತ್ ಮೂಲಕ ಅಫ್ಘಾನಿಸ್ತಾನದ ಬ್ಯಾಟಿಂಗ್ ಲೈನ್ಅಪ್ಗೆ ಒತ್ತಡ ತಂದರು.
ರಹಮತ್ ಶಾ ಅವರನ್ನು ಕ್ಲೀನ್ಬೋಲ್ಡ್ ಮಾಡಿ ತಮ್ಮ ಐದು ವಿಕೆಟ್ ಪೂರೈಸಿದ ಅವರು, ಬಳಿಕ ಸಲೀಮ್ ಸಫಿಯನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ಆರನೇ ವಿಕೆಟ್ ಪಡೆದರು.
ಇದನ್ನು ಓದಿ : ಟೆಸ್ಟ್ ಕ್ರಿಕೆಟ್ನಲ್ಲಿ ನೂತನ ದಾಖಲೆಯ ಸನಿಹದಲ್ಲಿ ಪಂತ್!
ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಕಿತ್ತ ಭಾರತೀಯ ಬೌಲರ್
ಈ ಪ್ರದರ್ಶನದ ಮೂಲಕ ಅವರು ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದ ಭಾರತೀಯ ಬೌಲರ್ಗಳ ವಿಶಿಷ್ಟ ಪಟ್ಟಿಗೆ ಸೇರಿದ್ದಾರೆ.
ಈ ಪಟ್ಟಿಯಲ್ಲಿ ಮೊಹಮ್ಮದ್ ನಿಸಾರ್, ವಾಮನ್ ಕುಮಾರ್, ಅಬಿದ್ ಅಲಿ, ದಿಲೀಪ್ ದೋಷಿ, ನರೇಂದ್ರ ಹಿರ್ವಾನಿ ಮತ್ತು ಅಮಿತ್ ಮಿಶ್ರಾ ಅವರಂತಹ ದಿಗ್ಗಜರು ಇದ್ದಾರೆ.

ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಎರಡನೇ ಭಾರತೀಯ ಆಟಗಾರ – Manav Suta
6 ವಿಕೆಟ್ ಕೀಳುವ ಮೂಲಕ ಭಾರತದ ಪರ ಚೊಚ್ಚಲ ಟೆಸ್ಟ್ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಎರಡನೇ ಭಾರತೀಯ ಆಟಗಾರ ಎನಿಸಿದರು.
1988ರಲ್ಲಿ ಚೆನ್ನೈನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧ ನರೇಂದ್ರ ಹಿರ್ವಾನಿ 8/61 ವಿಕೆಟ್ ಕಿತ್ತದ್ದು ದಾಖಲೆ. ಸುತಾರ್ ಅವರು ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಐದು ವಿಕೆಟ್ ಪಡೆದ 10ನೇ ಭಾರತೀಯ ಬೌಲರ್ ಮತ್ತು ಏಳನೇ ಸ್ಪಿನ್ನರ್ ಎನಿಸಿಕೊಂಡರು.

ಇದನ್ನು ನೋಡಿ : ತುಮಕೂರಿನ ಹಳೆ ಜಿಲ್ಲಾಸ್ಪತ್ರೆ ಕಟ್ಟಡ ನೆನಪು ಮಾತ್ರ – ಹಳೆಯ ಜಾಗದಲ್ಲಿ ನಿರ್ಮಾಣ ಆಗಲಿದೆ ಹೊಸ ಕಟ್ಟಡ




