ಗ್ರಾಹಕರಿಗೆ `RBI’ ಬಿಗ್ ರಿಲೀಫ್: ಜುಲೈನಿಂದ ಕ್ರೆಡಿಟ್ ಸ್ಕೋರ್, ಸಾಲದ ನಿಯಮಗಳಲ್ಲಿ ಮಹತ್ವದ ಬದಲಾವಣೆ!

ದೇಶದ ಬ್ಯಾಂಕ್ ಖಾತೆದಾರರು ಮತ್ತು ಸಾಲಗಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಸಿಹಿಸುದ್ದಿ ನೀಡಿದೆ. ಸಾಲದ ಮುಂಗಡ ಪಾವತಿ, ಕ್ರೆಡಿಟ್ ಸ್ಕೋರ್ ಅಪ್ಡೇಟ್, ನಾಮಿನೇಷನ್ ಹಾಗೂ ಚಿನ್ನದ ಸಾಲಗಳಿಗೆ ಸಂಬಂಧಿಸಿದಂತೆ ಹಲವು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಕೆಲವು ನಿಯಮಗಳು ಈಗಾಗಲೇ ಜಾರಿಯಾಗಿದ್ದು, ಇನ್ನೂ ಕೆಲವು ಈ ವರ್ಷದ ಜುಲೈ ತಿಂಗಳಿಂದ ಜಾರಿಗೆ ಬರಲಿವೆ.

ಫೋರ್ಕ್ಲೋಸರ್ ಚಾರ್ಜ್ ರದ್ದು
ಫ್ಲೋಟಿಂಗ್ ಬಡ್ಡಿದರದ ಗೃಹ ಸಾಲ, ವೈಯಕ್ತಿಕ ಸಾಲ, ಶಿಕ್ಷಣ ಹಾಗೂ ವಾಹನ ಸಾಲ ಪಡೆದ ಗ್ರಾಹಕರಿಗೆ ಆರ್ಬಿಐ ದೊಡ್ಡ ನಿರಾಳತೆ ನೀಡಿದೆ. ಜನವರಿ 1ರಿಂದ ಮಂಜೂರಾದ ಅಥವಾ ನವೀಕರಿಸಲಾದ ಸಾಲಗಳನ್ನು ಇನ್ನು ಮುಂದೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಅವಧಿಗೂ ಮುನ್ನ ಪಾವತಿಸಬಹುದು.
ಇದಕ್ಕೂ ಮೊದಲು ಸಾಲವನ್ನು ಬೇಗ ಮುಕ್ತಾಯಗೊಳಿಸಲು ಬ್ಯಾಂಕುಗಳು ಫೋರ್ಕ್ಲೋಸರ್ಚಾರ್ಜ್ವಸೂಲಿ ಮಾಡುತ್ತಿದ್ದವು.
ಆದರೆ ಹೊಸ ನಿಯಮದಿಂದ ಗ್ರಾಹಕರು ತಮ್ಮ ಬಳಿ ಹಣ ಲಭ್ಯವಾದಾಗ ಸಾಲವನ್ನು ಬೇಗ ತೀರಿಸಿ ಬಡ್ಡಿ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ವಾರಕ್ಕೊಮ್ಮೆ ಕ್ರೆಡಿಟ್ ಸ್ಕೋರ್ ಅಪ್ಡೇಟ್!
ಕ್ರೆಡಿಟ್ ಸ್ಕೋರ್ ವ್ಯವಸ್ಥೆಯಲ್ಲೂ ಆರ್ಬಿಐ ಮಹತ್ವದ ಬದಲಾವಣೆ ತಂದಿದೆ. ಪ್ರಸ್ತುತ ತಿಂಗಳಿಗೊಮ್ಮೆ ಮಾತ್ರ ಅಪ್ಡೇಟ್ ಆಗುತ್ತಿದ್ದ ಕ್ರೆಡಿಟ್ ಸ್ಕೋರ್, ಜುಲೈ 1ರಿಂದ ವಾರಕೊಮ್ಮೆ ಅಪ್ಡೇಟ್ ಆಗುತ್ತದೆ.
ಇದರಿಂದ EMIಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವವರ ಕ್ರೆಡಿಟ್ ಸ್ಕೋರ್ ವೇಗವಾಗಿ ಉತ್ತಮವಾಗಲಿದೆ.
ಆದರೆ ಸಾಲ ಮರುಪಾವತಿಯಲ್ಲಿ ವಿಳಂಬವಾದರೆ ಅದರ ನೆಗೆಟಿವ್ ಪರಿಣಾಮ ಕೂಡ ತಕ್ಷಣವೇ ಸ್ಕೋರ್ ಮೇಲೆ ಬೀಳಲಿದೆ ಎನ್ನಲಾಗಿದೆ.

ಒಂದೇ ಖಾತೆಗೆ ನಾಲ್ವರು ನಾಮಿನಿಗಳು!
ಬ್ಯಾಂಕ್ ಖಾತೆ, ಫಿಕ್ಸೆಡ್ ಡಿಪಾಸಿಟ್(FD) ಹಾಗೂ ಲಾಕರ್ಗಳಿಗೆ ಸಂಬಂಧಿಸಿದ ನಾಮಿನೇಷನ್ ಪ್ರಕ್ರಿಯೆಯನ್ನೂ ಸರಳಗೊಳಿಸಲಾಗಿದೆ.
ಇನ್ನು ಮುಂದೆ ಗ್ರಾಹಕರು ಒಂದೇ ಖಾತೆಗೆ ಗರಿಷ್ಠ ನಾಲ್ಕು ಜನರನ್ನು ನಾಮಿನಿಗಳಾಗಿ ಸೇರಿಸಬಹುದು. ಇದರಿಂದ ಖಾತೆದಾರರ ಮರಣದ ಸಂದರ್ಭದಲ್ಲಿ ಹಣ ಅಥವಾ ಆಸ್ತಿಯನ್ನು ವಾರಸುದಾರರಿಗೆ ವರ್ಗಾಯಿಸುವ ಪ್ರಕ್ರಿಯೆ ಸುಲಭವಾಗಲಿದೆ.
READ THIS : 1 ವರ್ಷದಲ್ಲಿ ಮುಗಿಯುತ್ತಾ Darshan ಕೇಸ್? ಸೆಷನ್ಸ್ ಕೋರ್ಟಲ್ಲಿ ವಿಚಾರಣೆ

ಚಿನ್ನದ ಸಾಲದ ಅವಧಿ ವಿಸ್ತರಣೆ
ಚಿನ್ನದ ಒಡವೆಗಳ ಮೇಲೆ ಸಾಲ ಪಡೆಯುವ ಆಭರಣ ವ್ಯಾಪಾರಿಗಳಿಗೂ ಆರ್ಬಿಐ ಸಮಾಧಾನಕರ ಸುದ್ದಿ ನೀಡಿದೆ. ಚಿನ್ನದ ಭದ್ರತೆಯ ಮೇಲೆ ಪಡೆಯುವ ಸಾಲದ ಮರುಪಾವತಿ ಅವಧಿಯನ್ನು ಪ್ರಸ್ತುತ ಇರುವ 180 ದಿನಗಳಿಂದ 270 ದಿನಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ನಗದು ನಿರ್ವಹಣೆ ಮಾಡಿಕೊಳ್ಳಲು ಹೆಚ್ಚಿನ ಸಮಯ ಸಿಗಲಿದೆ.
ಒಟ್ಟಾರೆಯಾಗಿ ಆರ್ಬಿಐ ತರುತ್ತಿರುವ ಈ ಹೊಸ ನಿಯಮಗಳು ಗ್ರಾಹಕರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವುದರ ಜೊತೆಗೆ ಬ್ಯಾಂಕಿಂಗ್ ಪ್ರಕ್ರಿಯೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲಿವೆ.

MUST WATCH : ಇಂದಿನಿಂದ ರಾಜ್ಯಾದ್ಯಂತ ಭಾರೀ RAIN – ಯಾವ ಯಾವ ಜಿಲ್ಲೆಗಳಿಗೆ ALLERT..!




