ಪ್ರಧಾನಿ ನರೇಂದ್ರ Modi ಅವರ ಬೆಂಗಳೂರು ಭೇಟಿಯ ವೇಳೆ ಭದ್ರತಾ ಲೋಪ ಎಸಗಿದ ಆರೋಪದ ಹಿನ್ನೆಲೆ, ಪೊಲೀಸ್ ಇಲಾಖೆಯು ಆರು ಮಂದಿ ಸಿಬ್ಬಂದಿಗಳನ್ನು ಸೇವೆಯಿಂದ ಅಮಾನತುಗೊಳಿಸಿದೆ.

ಇದೇ ಮೇ 10 ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಮೋದಿ ಸಂಚರಿಸುವ ಮಾರ್ಗದಲ್ಲಿ ಸ್ಫೋಟಕ ಪತ್ತೆ ಪ್ರಕರಣ ಸಂಬಂಧ, ಕರ್ತವ್ಯಲೋಪದಡಿಯಲ್ಲಿ ಆರು ಮಂದಿ ಪೊಲೀಸ್ ಸಿಬ್ಬಂದಿಯ ತಲೆದಂಡವಾಗಿದೆ. ಓರ್ವ ಪಿಎಸ್ಐ ಸೇರಿ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಬೆಂಗಳೂರು ದಕ್ಷಿಣ ಎಸ್ಪಿ ಶ್ರೀನಿವಾಸ್ ಗೌಡ ಆದೇಶ ಹೊರಡಿಸಿದ್ದಾರೆ.ರೆ̤

ಕರ್ತವ್ಯಲೋಪ ಹಿನ್ನೆಲೆ 6 ಮಂದಿ ಪೊಲೀಸ್ ಸಿಬ್ಬಂದಿ ತಲೆದಂಡ
ಮೇ 10ರಂದು ಬೆಂಗಳೂರಿಗೆ ಬಂದಿದ್ದ ಪ್ರಧಾನಿ Narendra Modi ಆರ್ಟ್ ಆಫ್ ಲಿವಿಂಗ್ಗೆ ತೆರಳುವ ಮಾರ್ಗ ಸಮೀಪವೇ ಸ್ಫೋಟಕ ಪತ್ತೆಯಾಗಿತ್ತು.
ಬೆಂಗಳೂರು ದಕ್ಷಿಣ ತಾಲೂಕಿನ ವಡೇರಹಳ್ಳಿ ಗೇಟ್ ಸಮೀಪ ಅನುಮಾನಾಸ್ಪದ ಬಾಕ್ಸ್ ಒಂದು ಪತ್ತೆಯಾಗಿತ್ತು. ಭದ್ರತೆಗೆ ನಿಯೋಜನೆಗೊಂಡಿದ್ದ ಪೇದೆಯೊಬ್ಬರು ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಈ ಬಾಕ್ಸ್ ಅನ್ನು ಗಮನಿಸಿದ್ದರು.

READ THIS : ಸಿಬಿಲ್ ಸ್ಕೋರ್ ಟೆನ್ಷನ್ ಬಿಡಿ – ಗ್ರಾಹಕರಿಗೆ RBI ಬಿಗ್ ರಿಲೀಫ್!
ಇತ್ತ ಇದೇ ವೇಳೆ ಹುಸಿ ಬಾಂಬ್ ಸ್ಫೋಟಿಸುವುದಾಗಿ ಶಂಕಿತನೋರ್ವ ಕರೆ ಮಾಡಿದ್ದು, ಆತನನ್ನು ಕೂಡ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ರು. ಅಲ್ದೇ ಸ್ಫೋಟಕ ಪತ್ತೆಯಾದ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ, ಶ್ವಾನದಳ, ಬಾಂಬ್ಸ್ಕ್ಯಾಡ್ ಸೇರಿ ಹಲವು ಮಂದಿ ಅಧಿಕಾರಿಗಳ ತಂಡ ತೀವ್ರವಾಗಿ ಪರಿಶೀಲನೆ ನಡೆಸಿದ್ರು. ಇದೀಗ ಸ್ಫೋಟಕ ಪತ್ತೆಯಾದ ಪ್ರಕರಣ ಸಂಬಂಧಕ್ಕೆ ಮಹತ್ವದ ಆದೇಶ ನೀಡಿದ್ದು, ಆರು ಮಂದಿ ಪೊಲೀಸ್ ಸಿಬ್ಬಂದಿಯ ತಲೆದಂಡವಾಗಿದೆ.

Modi ಸಾಗುವ ಮಾರ್ಗದಲ್ಲಿ ಸ್ಫೋಟಕ ಇಟ್ಟುವರು ಯಾರು?
ಒಟ್ನಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಸ್ಫೋಟಕ ಪತ್ತೆಯಾಗಿದ್ದು, ತೀವ್ರ ಸಂಚಲನವನ್ನು ಸೃಷ್ಟಿಮಾಡಿದೆ.
ಇನ್ನು ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಸ್ಫೋಟಕ ಇಟ್ಟುವರು ಯಾರು ಅನ್ನೋದು ಬಯಲಾಗಲಿದೆ.

MUST WATCH : ಮಳೆಗಾಗಿ MLA RANGANATH ದೇವರ ಮೊರೆ – YADIYURU SIDDALINGESHWARAನಿಗೆ ವಿಶೇಷ ಪೂಜೆ




