ಕಾವೇರಿ ವಿವಾದ ಹಿನ್ನೆಲೆ, ನಾಳೆ Karnataka Bandh : ರಾಜ್ಯದಲ್ಲಿ ಬಸ್, ಶಾಲೆ, ಸೇರಿದಂತೆ ಏನಿರುತ್ತೆ? ಏನಿರಲ್ಲ? ಇಲ್ಲಿದೆ ವಿವರ

ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಆಗಸ್ಟ್ 13ರಂದು ಕರೆ ನೀಡಿರುವ Karnataka Bandh ಗೆ ಪ್ರಮುಖ ಸಾರಿಗೆ, ರೈತ ಹಾಗೂ ಕನ್ನಡಪರ ಸಂಘಟನೆಗಳು ಬೆಂಬಲ ನೀಡದ ಹಿನ್ನೆಲೆಯಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಇದೆ.
ಕರವೇ ನಾರಾಯಣ ಗೌಡ ಬಣ, ಪ್ರವೀಣ್ ಶೆಟ್ಟಿ ಬಣ ಹಾಗೂ ಶಿವರಾಮೇಗೌಡ ಬಣಗಳು ಬಂದ್ನಿಂದ ದೂರ ಉಳಿದಿವೆ. ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಡಾ. ರಾಜ್ಕುಮಾರ್ ಅಭಿಮಾನಿ ಸಂಘವೂ ಬಂದ್ಗೆ ಬೆಂಬಲ ನೀಡದಿರಲು ನಿರ್ಧರಿಸಿವೆ.

ಸಾರಿಗೆ ಸೇವೆ ಎಂದಿನಂತೆ
ಬಂದ್ಗೆ ಸಾರಿಗೆ ಸಂಘಟನೆಗಳು ಬೆಂಬಲ ನೀಡದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಹಾಗೂ ರೈಲು ಸೇವೆಗಳು ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಖಾಸಗಿ ಸಾರಿಗೆ ಒಕ್ಕೂಟಗಳು, ಆಟೋ ರಿಕ್ಷಾ ಸಂಘಟನೆಗಳು ಹಾಗೂ ಓಲಾ-ಉಬರ್ ಟ್ಯಾಕ್ಸಿ ಚಾಲಕರೂ ಬಂದ್ಗೆ ಬೆಂಬಲ ನೀಡಿಲ್ಲ.
ಇದನ್ನು ಓದಿ : Karnataka Bandh ಆದರೆ ಯಾವೆಲ್ಲ ಸೇವೆ ಲಭ್ಯವಿರುತ್ತೆ?

ಶಾಲಾ-ಕಾಲೇಜುಗಳಿಗೂ ರಜೆ ಇಲ್ಲ
ಖಾಸಗಿ ಶಾಲೆಗಳ ಸಂಘಟನೆಗಳಾದ ರುಪ್ಸಾ (RUPSA) ಮತ್ತು ಕ್ಯಾಮ್ಸ್ (KAMS) ಬಂದ್ಗೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಯಾವುದೇ ಅಧಿಕೃತ ರಜೆ ಘೋಷಣೆಯಾಗಿಲ್ಲ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಬ್ಯಾಂಕ್ಗಳು ಮತ್ತು ಕೈಗಾರಿಕೆಗಳು ಸಹ ಎಂದಿನಂತೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಅಗತ್ಯ ಸೇವೆಗಳಿಗೆ ವ್ಯತ್ಯಯ ಇಲ್ಲ
ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಮೆಡಿಕಲ್ ಶಾಪ್ಗಳು ಹಾಗೂ ಆಂಬ್ಯುಲೆನ್ಸ್ ಸೇವೆಗಳು ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.
ದಿನಸಿ ಅಂಗಡಿಗಳು, ಹಾಲು ಮಾರಾಟ, ತರಕಾರಿ ಮಾರುಕಟ್ಟೆಗಳು, ಬೇಕರಿಗಳು ಹಾಗೂ ಇತರೆ ಅಗತ್ಯ ಸೇವೆಗಳಿಗೂ ಬಂದ್ನಿಂದ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗುವ ಸಾಧ್ಯತೆ ಕಡಿಮೆ.

ನಾಳೆಯ Karnataka Bandh ಸಂಪೂರ್ಣ ‘ಫ್ಲಾಪ್’?
ಮಾಲ್ಗಳು, ಚಿತ್ರಮಂದಿರಗಳು, ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಸೇರಿದಂತೆ ವಾಣಿಜ್ಯ ಚಟುವಟಿಕೆಗಳೂ ಸಹ ಸಾಮಾನ್ಯವಾಗಿ ನಡೆಯುವ ನಿರೀಕ್ಷೆಯಿದೆ.
ಪ್ರಮುಖ ಸಂಘಟನೆಗಳು ಬಂದ್ಗೆ ಬೆಂಬಲ ನೀಡದ ಹಿನ್ನೆಲೆಯಲ್ಲಿ ನಾಳೆಯ ಬಂದ್ ಸಂಪೂರ್ಣ ‘ಫ್ಲಾಪ್’ ಆಗುವುದು ಖಚಿತವಾಗಿದ್ದು, ರಾಜ್ಯಾದ್ಯಂತ ಶಾಲಾ-ಕಾಲೇಜುಗಳು, ಸಾರಿಗೆ ಸೇರಿದಂತೆ ಎಲ್ಲಾ ಅಗತ್ಯ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.
ಇದನ್ನು ನೋಡಿ : ತುಮಕೂರಿನಲ್ಲಿ ಚಾಕು ಇರಿದು ಬರ್ಬರ ಹ* – ಕೆಲವೇ ಗಂಟೆಗಳಲ್ಲಿ ಆರೋಪಿಗಳು ಅಂದರ್





