Job Alert : ಕರ್ನಾಟಕ ಅರಣ್ಯ ಇಲಾಖೆಯಲ್ಲಿ 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ನೇಮಕಾತಿ; 10th ಪಾಸಾಗಿದ್ರೆ ಸಾಕು!

Job Alert : ಕರ್ನಾಟಕ ಅರಣ್ಯ ಇಲಾಖೆಯು 2026ನೇ ಸಾಲಿನ ಅರಣ್ಯ ವೀಕ್ಷಕ (Forest Watcher) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 750 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ SSLC ಉತ್ತೀರ್ಣ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭಿಸಿದೆ.
ಈ ನೇಮಕಾತಿಯ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು SSLC ಅಂಕಗಳ ಆಧಾರದ ಮೇಲೆ ಮೆರಿಟ್ ಮೂಲಕ ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಹತೆ ಏನು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ICSE, CBSE ಅಥವಾ NIOS ಮೂಲಕ 10ನೇ ತರಗತಿ ಪಾಸಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ.
ಇದನ್ನು ಓದಿ : Charmadi Ghat ಅರಣ್ಯ ಪ್ರದೇಶದಲ್ಲಿ ಬೆಂಕಿ- ಸಸ್ಯ ಸಂಪತ್ತು ನಾಶ..!

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಅರಣ್ಯ ವೀಕ್ಷಕ ಹುದ್ದೆಗೆ ಆಯ್ಕೆ ಪ್ರಕ್ರಿಯೆಯು ಮೂರು ಪ್ರಮುಖ ಹಂತಗಳನ್ನು ಒಳಗೊಂಡಿದೆ.
1. SSLC ಮೆರಿಟ್ ಆಧಾರಿತ ಶಾರ್ಟ್ಲಿಸ್ಟ್
SSLC ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:20 ಅನುಪಾತದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಗೆ (PST) ಆಯ್ಕೆ ಮಾಡಲಾಗುತ್ತದೆ.
2. ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ
ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳಿಗೆ:
- ದೈಹಿಕ ಸಾಮರ್ಥ್ಯ ಪರೀಕ್ಷೆ (PST)
- ದೈಹಿಕ ಸಹಿಷ್ಣುತೆ ಪರೀಕ್ಷೆ (PET)
- ವೈದ್ಯಕೀಯ ಪರೀಕ್ಷೆ
ನಡೆಸಲಾಗುತ್ತದೆ.
3. ಅಂತಿಮ ಆಯ್ಕೆ
ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ SSLC ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಬಳಿಕ ನೇಮಕಾತಿ ಆದೇಶ ನೀಡಲಾಗುತ್ತದೆ.
ದೈಹಿಕ ಮಾನದಂಡಗಳು
ಪುರುಷ ಅಭ್ಯರ್ಥಿಗಳಿಗೆ:
- ಕನಿಷ್ಠ ಎತ್ತರ: 163 ಸೆಂ.ಮೀ.
- ಎದೆ ಸುತ್ತಳತೆ: 79 ಸೆಂ.ಮೀ.
- ಎದೆ ಹಿಗ್ಗುವಿಕೆ: ಕನಿಷ್ಠ 5 ಸೆಂ.ಮೀ.
ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ:
- ಎತ್ತರ: 152 ಸೆಂ.ಮೀ.
- ಎದೆ ಸುತ್ತಳತೆ: 74 ಸೆಂ.ಮೀ.
- ಹಿಗ್ಗುವಿಕೆ: 5 ಸೆಂ.ಮೀ.
ಮಹಿಳಾ ಅಭ್ಯರ್ಥಿಗಳಿಗೆ:
- ಕನಿಷ್ಠ ಎತ್ತರ: 150 ಸೆಂ.ಮೀ.
- ಕನಿಷ್ಠ ತೂಕ: 40 ಕೆ.ಜಿ.
ಬುಡಕಟ್ಟು ಮಹಿಳಾ ಅಭ್ಯರ್ಥಿಗಳಿಗೆ:
- ಎತ್ತರ: 145 ಸೆಂ.ಮೀ.
- ಕನಿಷ್ಠ ತೂಕ: 38 ಕೆ.ಜಿ.

ವೈದ್ಯಕೀಯ ಅರ್ಹತೆ
ಅಭ್ಯರ್ಥಿಗಳಿಗೆ ಉತ್ತಮ ಆರೋಗ್ಯ ಅಗತ್ಯವಿದ್ದು, ದೃಷ್ಟಿ ಸಾಮರ್ಥ್ಯ (6/6 ಅಥವಾ 6/9), ಶ್ರವಣ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ಅಭ್ಯರ್ಥಿಗಳಲ್ಲಿ ತಾಗು ಮಂಡಿ, ಬಾಗಿದ ಕಾಲುಗಳು, ಚಪ್ಪಟೆ ಪಾದ, ನರ ಊತ, ಮಾತನಾಡಲು ಅಥವಾ ಕೇಳಲು ತೊಂದರೆ ಸೇರಿದಂತೆ ನೇಮಕಾತಿಗೆ ಅನರ್ಹಗೊಳಿಸುವ ದೈಹಿಕ ಸಮಸ್ಯೆಗಳು ಇರಬಾರದು.
ಜಿಲ್ಲಾವಾರು ಹುದ್ದೆಗಳ ವಿವರ
ಒಟ್ಟು 750 ಹುದ್ದೆಗಳಲ್ಲಿ:
- 700 ಹುದ್ದೆಗಳು – ನಾನ್-ಹೈದರಾಬಾದ್ ಕರ್ನಾಟಕ ವೃಂದ
- 50 ಹುದ್ದೆಗಳು – ಹೈದರಾಬಾದ್ ಕರ್ನಾಟಕ ವೃಂದ
ವಿವಿಧ ವೃತ್ತಗಳ ಹುದ್ದೆಗಳ ವಿವರ:
- ಬೆಂಗಳೂರು – 70
- ಬಳ್ಳಾರಿ – 46
- ಚಾಮರಾಜನಗರ – 169
- ಚಿಕ್ಕಮಗಳೂರು – 56
- ಧಾರವಾಡ – 12
- ಹಾಸನ – 30
- ಕೆನರಾ – 60
- ಕೊಡಗು – 32
- ಕಲಬುರ್ಗಿ – 4
- ಮಂಗಳೂರು – 54
- ಮೈಸೂರು – 170
- ಶಿವಮೊಗ್ಗ – 38
ಅರ್ಜಿ ಸಲ್ಲಿಕೆ ದಿನಾಂಕ
ಅರಣ್ಯ ವೀಕ್ಷಕ ಹುದ್ದೆಗೆ ಆನ್ಲೈನ್ ಅರ್ಜಿ ಸಲ್ಲಿಕೆ ಆಗಸ್ಟ್ 1, 2026ರಿಂದ ಆರಂಭವಾಗಲಿದ್ದು, ಆಗಸ್ಟ್ 31, 2026ರಂದು ಮುಕ್ತಾಯವಾಗಲಿದೆ. ಅರ್ಹ ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದ ಮುಂದಿನ ಮಾಹಿತಿಗಾಗಿ ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸುವಂತೆ ಇಲಾಖೆ ಸೂಚಿಸಿದೆ.

ಇದನ್ನು ನೋಡಿ : ನಗರಸಭೆ ವಾರ್ಡ್ನಲ್ಲೇ ಅವ್ಯವಸ್ಥೆ- ಮೂಲಭೂತ ಸೌಕರ್ಯಕ್ಕಾಗಿ ಜನರ ಹೋರಾಟ




