ನಿಷೇಧಿತ ತಂಬಾಕು ಉತ್ಪನ್ನಗಳ ದಾಸ್ತಾನಿನ ಮೇಲೆ Anekal ಪೊಲೀಸರಿಂದ ದಾಳಿ.

Anekal ಬಸ್ ನಿಲ್ದಾಣದ ಪಕ್ಕದಲ್ಲಿರುವ ಕೇರಳ ಮೂಲದ ಹೈ ಲೈಟ್ ಸೂಪರ್ ಮಾರ್ಕೆಟ್ ನಲ್ಲಿ, ನಿಷೇಧಿತ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆ
ಇನ್ನು ದಾಳಿಯ ವೇಳೆ ವಿವಿಧ ಫ್ಲೇವರ್ಗಳ ಸಿಗರೇಟ್ ಪ್ಯಾಕೆಟ್ಗಳು, ಹುಕ್ಕಾ ಸಾಮಗ್ರಿಗಳು ಹಾಗೂ ನಿಷೇಧಿತ ತಂಬಾಕು ಉತ್ಪನ್ನಗಳು ಪತ್ತೆಯಾಗಿವೆ. ಪೊಲೀಸರು ಒಟ್ಟು 171 ನಿಷೇಧಿತ ತಂಬಾಕು ಪದಾರ್ಥಗಳು, 22 ಹುಕ್ಕಾ ಜಾಡಿಗಳು ಹಾಗೂ 7 ಬಾಕ್ಸ್ ಪೊಲೋ ಚಾರ್ಕೋಲ್ ಬಾಕ್ಸ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹40 ಸಾವಿರ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ : ವಾಹನಗಳ ಸ್ಮಗ್ಲಿಂಗ್ ಆರೋಪ | ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ರೇಡ್

Anekal – ನಾಲ್ವರ ಬಂಧನ
ಈ ಪ್ರಕರಣ ಸಂಬಂಧ ರಹೀಶ್, ಸೆಜು, ಯೋಗಿಶ್ ಹಾಗೂ ಕಿಶೋರ್ ಕುಮಾರ್ ಎಂಬ ನಾಲ್ವರನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ನೋಡಿ : CM ಪಟ್ಟದಾಟ ಕೊನೆಗೂ ಅಂತ್ಯ- ರಾಜೀನಾಮೆ ನೀಡುವ ವೇಳೆSIDDU ಕಣ್ಣಲ್ಲಿ ಕಂಬನಿ




