ಪಬ್ ಮತ್ತು Bar ಗಳಲ್ಲಿ ಅಪ್ರಾಪ್ತರ ಪ್ರವೇಶ ಮತ್ತು ಮದ್ಯಪಾನ ತಡೆಗೆ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಪ್ರಿಯಾಂಕ್ ಖರ್ಗೆ ಸೂಚನೆ.

ರಾಜ್ಯದ ಎಲ್ಲಾ ಪಬ್ಗಳು, ಬ್ರೂವರೀಸ್, Bar , ಕ್ಲಬ್ಗಳು, ಲಾಂಜ್, ರೆಸ್ಟೋರೆಂಟ್ ಮತ್ತು ಮದ್ಯ ಮಾರಾಟ ಮಾಡುವ ಸಂಸ್ಥೆಗಳಿಗೆ ಅಪ್ರಾಪ್ತ ವಯಸ್ಕರ ಪ್ರವೇಶ ಮತ್ತು ಅಪ್ರಾಪ್ತ ವಯಸ್ಕರ ಮದ್ಯಪಾನವನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ನೋಟಿಸ್ ನೀಡುವಂತೆ ನಗರ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ್ದಾರೆ. ರಾಜ್ಯದ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಪ್ರಿಯಾಂಕ್ ಖರ್ಗೆ, ಅಪ್ರಾಪ್ತರ ಮದ್ಯ ಸೇವನೆ ಚಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.

ಅಪ್ರಾಪ್ತರ ಮದ್ಯ ಸೇವನೆ ಚಟಕ್ಕೆ ಬ್ರೇಕ್.!
ಬೆಂಗಳೂರಿನಲ್ಲಿ 4,093 ವಿದ್ಯಾರ್ಥಿಗಳನ್ನು ಒಳಗೊಂಡ ಇತ್ತೀಚಿನ ಅಧ್ಯಯನವು ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ಪ್ರತಿ ಮೂವರು ಹದಿಹರೆಯದವರಲ್ಲಿ ಒಬ್ಬರು ಮದ್ಯ ಅಥವಾ ತಂಬಾಕು ಸೇವನೆಯಿಂದಾಗಿ ಆರೋಗ್ಯ ಸಮಸ್ಯೆಗಳ ಅಪಾಯದಲ್ಲಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ 33% ಜನರು ಮದ್ಯಪಾನಕ್ಕೆ ದಾಸರಾಗಿದ್ದಾರೆ. ಸುಮಾರು 18% ಜನರು ತಂಬಾಕು ವ್ಯಸನಕ್ಕೆ ಒಳಗಾಗಿದ್ದಾರೆ.ಮದ್ಯಪಾನವನ್ನು ಪ್ರಾರಂಭಿಸುವ ಸರಾಸರಿ ವಯಸ್ಸು 17 ವರ್ಷ ಎಂದು ವರದಿಯಾಗಿದೆ. ಕೆಲವು ಪ್ರಕರಣಗಳಲ್ಲಿ 8 ವರ್ಷಕ್ಕೇ ಮಕ್ಕಳು ಮದ್ಯಪಾನ ಆರಂಭಿಸಿರುವುದೂ ದಾಖಲಾಗಿದೆ.
ಇದನ್ನು ಓದಿ : ಬಾರ್ನಲ್ಲಿ ಸಿಗರೇಟ್ ವಿಚಾರಕ್ಕೆ ಗಲಾಟೆ- ಚಾಕುವಿನಿಂದ ಇರಿದು ಯುವಕನ ಮೇಲೆ ಹಲ್ಲೆ..!

ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಪ್ರಿಯಾಂಕ್ ಖರ್ಗೆ ಸೂಚನೆ
ಈ ವರದಿಯ ಬಗ್ಗೆ ಕಳವಳ ವ್ಯಕ್ತಪಡಿಸಿರೋ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮದ್ಯ ಮಾರಾಟ ಮಾಡುವ ಎಲ್ಲಾ ಸಂಸ್ಥೆಗಳು ಗ್ರಾಹಕರ ಪ್ರವೇಶ ಮತ್ತು ಮದ್ಯ ಪೂರೈಕೆಯ ಮೊದಲು ಕಟ್ಟುನಿಟ್ಟಾದ ವಯಸ್ಸಿನ ಪರಿಶೀಲನಾ ನಿಯಮಗಳನ್ನು ಜಾರಿಗೆ ತರಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಈ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಇನ್ಮುಂದೆ ಅಪ್ರಾಪ್ತ ವಯಸ್ಕರಿಗೆ Bar , ಪಬ್, ಕ್ಲಬ್ ಪ್ರವೇಶ ಬಂದ್.!
ಇನ್ಮುಂದೆ ಮಾನ್ಯವಾದ ಗುರುತಿನ ಚೀಟಿ ಇಲ್ಲದಿದ್ದರೆ, ಬಾರ್,ಪಬ್,ಕ್ಲಬ್ ಗಳಿಗೆ ಪ್ರವೇಶವಿಲ್ಲ ಎಂದಿದ್ದು,, ಸರ್ಕಾರ ನೀಡಿದ ವಯಸ್ಸಿನ ಪುರಾವೆ ಕಡ್ಡಾಯವಾಗಿದೆ.
ಅಪ್ರಾಪ್ತ ವಯಸ್ಕರಿಗೆ ಸೇವೆ ಸಲ್ಲಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಮಾಲೀಕರು, ವ್ಯವಸ್ಥಾಪಕರು ಮತ್ತು ಪರವಾನಗಿ ಹೊಂದಿರುವವರೇ ಹೊಣೆಗಾರರು ಎನ್ನಲಾಗಿದ್ದು, ಪ್ರವೇಶ ದ್ವಾರದಲ್ಲಿರುವ ಸಿಸಿಟಿವಿ ಕಾರ್ಯನಿರ್ವಹಿಸಬೇಕು ಮತ್ತು ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು ಎಂದು ಆದೇಶಿಸಲಾಗಿದೆ.

ಬಲಿಯಾಗ್ತಿರೋ ಯುವಸಮೂಹದ ರಕ್ಷಣೆ
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಈ ಖಡಕ್ ಆದೇಶ ಕಟ್ಟುನಿಟ್ಟಾಗಿ ಅನುಷ್ಟಾನವಾದಲ್ಲಿ ಮದ್ಯವ್ಯಸನದ ಗೀಳಿಗೆ ಬಲಿಯಾಗ್ತಿರೋ ಯುವಸಮೂಹದ ರಕ್ಷಣೆ ಮಾಡಿದಂತಾಗುತ್ತದೆ.
ಇದನ್ನು ನೋಡಿ : ಗಬ್ಬೆದ್ದು ನಾರುತ್ತಿದೆ ನಾಗವಲ್ಲಿ ಪಂಚಾಯ್ತಿ – ವಿಧಾನಸಭೆಯಲ್ಲಿ ಚರ್ಚೆಯಾದ್ರೂ ಕ್ರಮ ಇಲ್ಲ




