DK Shivakumar ಆಪ್ತ ಶಾಸಕರು ಮತ್ತು ಸಚಿವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ಡಿನ್ನರ್ ಮೀಟಿಂಗ್ನಲ್ಲಿ ಏನೇನು ಚರ್ಚೆಯಾಯ್ತು? ಶಾಸಕರು, ಸಚಿವರು ಡಿಕೆಶಿಗೆ ಏನಂದ್ರು ಎಂಬ ಮಾಹಿತಿ ಇಲ್ಲಿದೆ.

DK Shivakumar : ಬೆಳಗಾವಿಯ ಸುವರ್ಣ ಸೌಧನಲ್ಲಿ ನಡೆಯುತ್ತಿರುವ ವಿಧಾನಸಭೆ ಚಳಿಗಾಲದ ಮಧ್ಯೆಯೂ, ಆಡಳಿತಾರೂಢ ಕಾಂಗ್ರೆಸ್ನಲ್ಲಿ ಡಿನ್ನರ್ ರಾಜಕೀಯ ಜೋರಾಗಿದೆ.
ಸಿಎಂ ಸಿದ್ದರಾಮಯ್ಯನವರು ನಡೆಸಿದ ಸಭೆಯ ನಂತರ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಗುರುವಾರ ರಾತ್ರಿ ವಿಶೇಷ ಡಿನ್ನರ್ ಮೀಟಿಂಗ್ ಆಯೋಜಿಸಿದ್ದರು.
ಬೆಳಗಾವಿ ಹೊರವಲಯದ ದೊಡ್ಡಣ್ಣವರ್ ಫಾರ್ಮ್ಹೌಸ್ನಲ್ಲಿ ನಡೆದ ಈ ಸಭೆಗೆ ಐವರು ಸಚಿವರು ಮತ್ತು 30ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು. ಮುಖ್ಯರು ಎಂ.ಸಿ. ಸುಧಾಕರ್, ಮಂಕಾಳು ವೈದ್ಯ, ಕೆ.ಹೆಚ್. ಮುನಿಯಪ್ಪ, ಶರಣ ಪ್ರಕಾಶ್ ಪಾಟೀಲ್ ಸೇರಿದಂತೆ ಅನೇಕ ಶಾಸಕರು ಉಪಸ್ಥಿತರಿದ್ದರು.
ಈ ಡಿನ್ನರ್ ಮೀಟಿಂಗ್ನ್ನು ಡಿಸಿಎಂ ಆಪ್ತರು ಮತ್ತು ಖ್ಯಾತ ಮೈನಿಂಗ್ ಉದ್ಯಮಿ ದೊಡ್ಡಣ್ಣವರ್ ಆಯೋಜಿಸಿದ್ದು, ಅವರ ಆತಿಥ್ಯದಲ್ಲಿ ಸಭೆ ನಡೆಯಿತು. ಡಿಕೆ ಶಿವಕುಮಾರ್ ಅವರ ಸಹೋದರ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಸಭೆಯ ಸಂಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಬುಧವಾರ ರಾತ್ರಿ ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ನಡೆದ ಭೋಜನ ಕೂಟಕ್ಕೆ ಸಿಎಂ ಸಿದ್ದರಾಮಯ್ಯನವರ ಆಪ್ತ ವಲಯದ ಶಾಸಕರು ಮತ್ತು ಸಚಿವರು ಭಾಗವಹಿಸಿದ್ದರು. ಆದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಅವರ ಬಣದ ಯಾರೂ ಹಾಜರಿರಲಿಲ್ಲ. ಇದರಿಂದ ಪ್ರತ್ಯೇಕ ಡಿನ್ನರ್ ಮೀಟಿಂಗ್ ಕುರಿತ ಕುತೂಹಲ ಹೆಚ್ಚಾಗಿದೆ.
ಇದನ್ನು ಓದಿ : ಮೆಟ್ರೋ ಗುಲಾಬಿ ಮಾರ್ಗದ ರೈಲು ಅನಾವರಣ – ಯಾವ್ಯಾವ ಮಾರ್ಗಕ್ಕೆ?
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ನಲ್ಲಿ ಯಾರೆಲ್ಲ ಭಾಗಿ?
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ಗೆ ಐವರು ಸಚಿವರು ಹಾಗೂ 30ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು. ಪ್ರಮುಖರು: ಕೆ.ಎಚ್. ಮುನಿಯಪ್ಪ, ಶರಣ ಪ್ರಕಾಶ್ ಪಾಟೀಲ್, ಎಂ.ಸಿ. ಸುಧಾಕರ್, ಮಂಕಾಳು ವೈದ್ಯ, ಎನ್.ಟಿ. ಶ್ರೀನಿವಾಸ್, ಡಾ. ಎಚ್.ಡಿ. ರಂಗನಾಥ್, ಇಕ್ಬಾಲ್ ಹುಸೇನ್, ಎನ್.ಎ. ಹ್ಯಾರಿಸ್, ಟಿ.ಡಿ. ರಾಜೇಗೌಡ, ಎ.ಸಿ. ಶ್ರೀನಿವಾಸ್, ಕೆ.ಎನ್. ನಂಜೇಗೌಡ, ಆನೇಕಲ್ ಶಿವಣ್ಣ, ಕೊತ್ತನೂರು ಮಂಜುನಾಥ್, ಅಪ್ಪಾಜಿ ನಾಡಗೌಡ, ಗಣೇಶ್ ಹುಕ್ಕೇರಿ, ಸಿ.ಪಿ. ಯೋಗೇಶ್ವರ್, ಭೀಮಸೇನ್ ಚಿಮ್ಮನಕಟ್ಟಿ, ಬಾಬಾ ಸಾಹೇಬ್ ಪಾಟೀಲ್, ಶ್ರೀನಿವಾಸ ಮಾನೆ, ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ. ಜೊತೆಗೆ ಬಿಜೆಪಿ ಉಚ್ಚಾಟಿತ ಶಾಸಕರಾದ ಎಸ್.ಟಿ. ಸೋಮಶೇಖರ್ ಭಾಗವಹಿಸಿದ್ದರು. ಇನ್ನೊಬ್ಬ ಮಾಜಿ ಸದಸ್ಯ ಶಿವರಾಮ್ ಹೆಬ್ಬಾರ್ ಮೊದಲೇ ಬಂದು ವಾಪಸ್ ಆಗಿದ್ದರು.
ಡಿಕೆಶಿ ಡಿನ್ನರ್ ಮೀಟಿಂಗ್ನಲ್ಲಿ ಚರ್ಚೆಯಾಗಿದ್ದೇನು?
ಡಿಕೆ ಶಿವಕುಮಾರ್ ಆಯೋಜಿಸಿದ್ದ ಡಿನ್ನರ್ ಮೀಟಿಂಗ್ನಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಪ್ರಮುಖ ಚರ್ಚೆಯ ವಿಷಯವಾಗಿತ್ತು.
ಕೆಲ ಶಾಸಕರು “ಯತೀಂದ್ರಗೆ ನೋಟಿಸ್ ಕೊಡಬೇಕು” ಎಂದು ಡಿಕೆಶಿಗೆ ಒತ್ತಡ ಹಾಕಿದರೆ, ಡಿಕೆಶಿ “ಎಲ್ಲಕ್ಕೂ ಸರಿಯಾದ ಉತ್ತರ ಕೊಡುತ್ತೇನೆ, ಸ್ವಲ್ಪ ಕಾಯಿರಿ” ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆಗೆ, ಮುಂದಿನ ವಾರ ಡಿಕೆಶಿಯನ್ನು ದೆಹಲಿಗೆ ಕರೆಯುವ ಸಾಧ್ಯತೆ, ಹಾಗೇ ಸಿಎಂ ಬದಲಾವಣೆ ವಿಚಾರವೂ ಸಭೆಯಲ್ಲಿ ಚರ್ಚೆಯಾಗಿದೆ. ಕೆಲವು ಶಾಸಕರು ಡಿಕೆಶಿಗೆ “ನಿಮಗೆ ಮುಖ್ಯಮಂತ್ರಿ ಸ್ಥಾನ ಕೊಡಲೇಬೇಕು, ನಾವು ಹೈಕಮಾಂಡ್ಗೆ ಮನವಿ ಮಾಡ್ತೀವಿ” ಎಂದಿದ್ದಾರೆ ಎನ್ನಲಾಗಿದೆ.
ಇದನ್ನು ನೋಡಿ : ಮಾಜಿ ಸಚಿವ ಹೆಚ್ ಎಂ ರೇವಣ್ಣ ಪುತ್ರನಿಂದ ಹಿಟ್ & ರನ್ – ಸವಾರ ಸಾವು




