ನಮ್ಮ ಮೆಟ್ರೋ ಗುಡ್ ನ್ಯೂಸ್, Metro Pink Line ನ ಮೊದಲ ರೈಲು ಅನಾವರಣ.

ಬೆಂಗಳೂರಿನ ನಾಗರಿಕರಿಗೆ BMRCL ಸಿಹಿಸುದ್ದಿ ನೀಡಿದೆ. ನಗರದ ಗುಲಾಬಿ ಮಾರ್ಗ (Metro Pink Line) ಕ್ಕಾಗಿ ತಯಾರಿಸಲಾದ ಚಾಲಕರಹಿತ ಮೆಟ್ರೋ ರೈಲಿನ ಪ್ರೋಟೋಟೈಪ್ ಇಂದು ಅಧಿಕೃತವಾಗಿ ಅನಾವರಣಗೊಂಡಿದೆ.
BEML ರೈಲು ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ವ್ಯ ವಸ್ಥಾಪಕ ನಿರ್ದೇಶಕ ಜೆ. ರವಿಶಂಕರ್, BEML ಅಧ್ಯಕ್ಷ–ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇನ್ನು ಈ ಸಂದರ್ಭದಲ್ಲಿ ಹೊಸ ಮಾದರಿಯ ರೈಲನ್ನು ಔಪಚಾರಿಕವಾಗಿ ಅನಾವರಣಗೊಳಿಸಲಾಯಿತು. ಅನಾವರಣದ ನಂತರ, ರೈಲು ಯಶಸ್ವಿ ಪರೀಕ್ಷಾರ್ಥ ಓಟವನ್ನು BEML ಸಂಕೀರ್ಣದಲ್ಲೇ ನೆರವೇರಿಸಲಾಯಿತು.
ಯಾವಾಗ ಪಿಂಕ್ ಲೈನ್ ಕಾರ್ಯಾರಂಭ?
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸುಮಾರು 21.25 ಕಿಮೀ ಉದ್ದದ Metro Pink Line ಮುಂದಿನ ಎರಡು ವರ್ಷಗಳಲ್ಲಿ ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ. ಈ ಮಾರ್ಗಕ್ಕಾಗಿ ಪ್ರಥಮ ಹಂತದಲ್ಲಿ ಕನಿಷ್ಠ ಐದು ಚಾಲಕರಹಿತ ರೈಲುಗಳನ್ನು ಸಂಚಾರಕ್ಕೆ ಬಿಡುವ ಯೋಜನೆ ನಡೆಯುತ್ತಿದೆ.
ಹೊಸ ಪ್ರೋಟೋಟೈಪ್ ರೈಲು ಡಿಸೆಂಬರ್ 15ರ ಬಳಿಕ ಕೊತ್ತನೂರು ಡಿಪೋಗೆ ಸಾಗಿಸಲಾಗಿದ್ದು, ವಿವಿಧ ತಾಂತ್ರಿಕ ಪರೀಕ್ಷೆಗಳು ಮತ್ತು ಟ್ರಯಲ್ ರನ್ಗಳನ್ನ ಎದುರಿಸಲಿವೆ.
ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಳ್ಳಿದ ಬಳಿಕ ಪಿಂಕ್ ಲೈನ್ ಪ್ರಯಾಣಿಕರ ಸೇವೆಗೆ ಸಿದ್ಧವಾಗಲಿದೆ.

ಯಾವ್ಯಾವ ಮಾರ್ಗಕ್ಕೆ?
ಸುರಂಗ (13.76 ಕಿ.ಮೀ), ಎತ್ತರಿಸಿದ (7.5 ಕಿ.ಮೀ) ಮಾರ್ಗ ಸೇರಿ 21.25 ಕಿಮೀ ಉದ್ದದ ಗುಲಾಗಿ ಮಾರ್ಗಕ್ಕಾಗಿ 20 ರೈಲುಸೆಟ್ಗಳನ್ನು ಪೂರೈಸುವ ಹೊಣೆಯನ್ನು BMRCL ಹೊತ್ತಿದೆ. 2026ರ ಮೇ ವೇಳೆಗೆ ಎತ್ತರಿಸಿದ ಹಂತ ಹಾಗೂ ಡಿಸೆಂಬರ್ನಲ್ಲಿ ಸುರಂಗ ಮಾರ್ಗದಲ್ಲಿ ರೈಲು ವಾಣಿಜ್ಯ ಸೇವೆಯನ್ನು ಆರಂಭಿಸಲು ಬೆಂಗಳೂರು Metro ರೈಲು ನಿಗಮವು ಪ್ರಯತ್ನಿಸುತ್ತಿದೆ.
2026ರಲ್ಲಿ ಈ ಮಾರ್ಗದಲ್ಲಿ ರೈಲು ವಾಣಿಜ್ಯ ಸೇವೆ ಆರಂಭಿಸಲು ಕನಿಷ್ಠ 6-8 ರೈಲುಗಳು ಬೇಕಾಗುತ್ತವೆ. ಮುಂದಿನ ಐದು ತಿಂಗಳಲ್ಲಿ 8 ರೈಲುಗಳನ್ನು ಪೂರೈಸಲು ಬಿಇಎಂಎಲ್ ಪ್ರಯತ್ನಿಸುತ್ತಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಇದನ್ನು ನೋಡಿ : ಕೆರೆಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ ಬೆಚ್ಚಿಬಿದ್ದ ದೇವರಾಯಪಟ್ಟಣದ ಜನರು




