ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಗುಡಿಮರನಹಳ್ಳಿ ಗ್ರಾಮದ ಬಳಿ, ಮಾಜಿ ಸಚಿವ HM Revanna ಪುತ್ರ ಶಶಾಂಕ್ನ ಕಾರು ಅಪಘಾತಕ್ಕೆ ಕಾರಣವಾಗಿದ್ದು, 27 ವರ್ಷದ ಬೈಕ್ ಸವಾರ ರಾಜೇಶ್ ಸಾವಿಗೀಡಾಗಿದ್ದಾರೆ.

ಮಾಜಿ ಸಚಿವ HM Revanna ಪುತ್ರ ಶಶಾಂಕ್ಗೆ ಸೇರಿದ ಕಾರು ಬೆಂಗಳೂರಿನ ಮಾಗಡಿ, ಗುಡಿಮರನಹಳ್ಳಿ ಸಮೀಪ ಅಪಘಾತಗೊಂಡು, 27 ವರ್ಷದ ಬೈಕ್ ಸವಾರ ರಾಜೇಶ್ ಸಾವಿಗೆ ಒಳಗಾದರು.
ಮೃತ ಯುವಕ ಮಾಗಡಿ ತಾಲ್ಲೂಕಿನ ಬೆಳಗುಂಬ ಗ್ರಾಮದ ನಿವಾಸಿ. ಅಪಘಾತಕ್ಕೆ ಸಂಬಂಧಿಸಿದ ಕಾರು KA 51 MQ 0555, ಶಶಾಂಕ್ ಮಾಲೀಕತ್ವದಲ್ಲಿದೆ. ಕಾರು ಮಾಗಡಿಯಿಂದ ಬೆಂಗಳೂರು ಕಡೆಗೆ ಸಾಗುತ್ತಿತ್ತು. ಪ್ರಕರಣ ಕುದುರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನು ಓದಿ : ಕಾಂಗ್ರೆಸ್ ಕುರ್ಚಿ ಕಿಚ್ಚಿಗೆ ಮತ್ತೆ ತುಪ್ಪ ಸುರಿದ CM ಪುತ್ರ ಯತೀಂದ್ರ
ಈ ಕುರಿತು ಸಚಿವ ಹೆಚ್ಎಂ ರೇವಣ್ಣ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, “ನನ್ನ ಮಗನ ಕಾರು ಅಪಘಾತವಾಗಿದ್ದು, ಕಾರು ಓಡಿಸುತ್ತಿದ್ದವನು ನನ್ನ ಮಗನಲ್ಲ, ಡ್ರೈವರ್. ಓವರ್ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಮೃತ ಯುವಕನ ಕುಟುಂಬಸ್ಥರೊಂದಿಗೆ ನಾನು ಸಂಪರ್ಕದಲ್ಲಿ ಇದ್ದೇನೆ” ಎಂದು ಹೇಳಿದ್ದಾರೆ.
ಇದನ್ನು ನೋಡಿ : ಜೈಲಿನಲ್ಲಿ ದರ್ಶನ್ಗೆ ಸಿಕ್ತು ಟಿವಿ ಆದರೆ ಬೇಕಾಗಿದ್ದು ಸಿಗಲಿಲ್ಲ




