Political News : ಕಾಂಗ್ರೆಸ್ ಕುರ್ಚಿ ಕಿತ್ತಾಟ ಮತ್ತೆ ಜೋರಾಯಿತು , ಸಿಎಂ ಪುತ್ರ ಯತೀಂದ್ರ ಹೇಳಿಕೆ ರಾಜಕೀಯ ತಾಪಮಾನ ಏರಿಸಿದೆ..

Political News : CM – DCM ಸಮಾಲೋಚನೆಯ ನಡುವೆಯೇ ಯತೀಂದ್ರ ಬಾಂಬ್
ಕರ್ನಾಟಕ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಕಿತ್ತಾಟ ಮತ್ತೆ ತೀವ್ರಗೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಹೈಕಮಾಂಡ್ ಸ್ಪಷ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ಮತ್ತೆ ಪುನರುಚ್ಚರಿಸಿದ್ದಾರೆ.ಆದರೆ, ಬೆಳಗಾವಿಯಲ್ಲಿ ನಡೆದ ಡಿನ್ನರ್ ಮೀಟಿಂಗ್ಗಳು ಪಕ್ಷದ ಒಳರಾಜಕೀಯಕ್ಕೆ ಇನ್ನಷ್ಟು ಕುತೂಹಲ ಮೂಡಿಸಿವೆ.
ಹೈಕಮಾಂಡ್ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ- ಯತೀಂದ್ರ
ಯತೀಂದ್ರ ಅವರ ಪ್ರಕಾರ, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ , ಅಧಿಕಾರ ಹಂಚಿಕೆ ವಿಚಾರವೇ ಇಲ್ಲ , ಹೈಕಮಾಂಡ್ ಸ್ಪಷ್ಟವಾಗಿ ಸಿದ್ದರಾಮಯ್ಯ ಪರ ನಿಲುವು ತೆಗೆದುಕೊಂಡಿದೆ..ಕೆಲವು ದಿನಗಳ ಹಿಂದೆ ಮಾತನಾಡಿದಾಗಲೂ ಯತೀಂದ್ರ ಇದೇ ವಿಷಯವನ್ನು ಉಲ್ಲೇಖಿಸಿದ್ದರು. ಡಿಕೆ ಶಿವಕುಮಾರ್ ಸಿಎಂ ಆಕಾಂಕ್ಷಿ ಆದರೆ ಹೈಕಮಾಂಡ್ ನಿರ್ಧಾರ ಸ್ಪಷ್ಟ ಎಂದು ಹೇಳಿದ್ದಾರೆ.ಈ ಹೇಳಿಕೆಗಳೇ ಈಗ ಕಾಂಗ್ರೆಸ್ ವಲಯದಲ್ಲಿ ಮತ್ತೆ ರಾಜಕೀಯ ಕಂಪನ ಉಂಟುಮಾಡಿವೆ.

ಯತೀಂದ್ರ ಹೇಳಿಕೆಗೆ DK ಶಿವಕುಮಾರ್ ಪ್ರತಿಕ್ರಿಯೆ
ಡಿಸಿಎಂ ಡಿಕೆ ಶಿವಕುಮಾರ್, ಯತೀಂದ್ರ ಹೇಳಿಕೆಯ ಕುರಿತು ಕೇಳಿದಾಗ,ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ಕೊಡುತ್ತಾರೆ.ಎಂದು ಹೇಳಿ ಚೆಂಡನ್ನು ಸಿಎಂ ಅಂಗಳಕ್ಕೆ ಎಸೆದಿದ್ದಾರೆ.
ಇಕ್ಬಾಲ್ ಹುಸೇನ್ ಗುದ್ದು- ಯತೀಂದ್ರಗೆ ತಿರುಗೇಟು
ಡಿಕೆ ಶಿವಕುಮಾರ್ ಪರ ಶಾಸಕರಾದ ಇಕ್ಬಾಲ್ ಹುಸೇನ್, ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ,ಯಾರೂ ವರಿಷ್ಠ ಸ್ಥಾನ ತುಂಬಲು ಅವಕಾಶವಿಲ್ಲ”
ಎಂದು ಟಾಂಗ್ ನೀಡಿದ್ದಾರೆ. ಭೈರತಿ ಸುರೇಶ್ ಕೂಡಾ , “ಯತೀಂದ್ರ ಏನು ಹೇಳಿದ್ದಾರೆ ಅವರನ್ನು ಕೇಳಿ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಡಿನ್ನರ್ ರಾಜಕೀಯ -ಅಹಿಂದ ನಾಯಕರು ಸಿಎಂ ಪರ
ವಿವಾದ ತೀವ್ರವಾಗುತ್ತಿರುವಾಗಲೇ ಬೆಳಗಾವಿಯಲ್ಲಿ ನಡೆದ ಡಿನ್ನರ್ ಸಭೆಗಳು ಹೊಸ ತಿರುವು ತಂದಿವೆ.ಸಿದ್ದರಾಮಯ್ಯ ಬೆಂಬಲಕ್ಕೆ ಅಹಿಂದ ನಾಯಕರುಮಾಜಿ ಶಾಸಕ ಫಿರೋಜ್ ಸೇಠ್ ಮನೆಯಲ್ಲಿ ನಡೆದ ಸಭೆಗೆ:
- ಸಿಎಂ ಸಿದ್ದರಾಮಯ್ಯ
- ಸ್ಪೀಕರ್ ಯು.ಟಿ. ಖಾದರ್
- ಸಚಿವರು ಜಮೀರ್, ಸತೀಶ್ ಜಾರಕಿಹೊಳಿ, ಮಹದೇವಪ್ಪ
- ಅನೇಕ ಶಾಸಕರು
ಹಾಜರಾದರು.
ಸಭೆಯಲ್ಲಿ ಅಹಿಂದ ನಾಯಕರು ,ನೀವೇ ನಮ್ಮ ನಾಯಕ. ಅಲ್ಪಸಂಖ್ಯಾತರು ನಿಮಗೆ ಮತ ನೀಡಿದ್ದಾರೆ. ನಾವು ನಿಮ್ಮೊಂದಿಗಿದ್ದೇವೆ.”ಎಂದು ಸಿಎಂಗೆ ಅಭಯ ನೀಡಿರುವುದು ಮೂಲಗಳ ಮಾಹಿತಿ.
ಡಿಕೆ ಶಿವಕುಮಾರ್ ಬಣ ಗೈರು: ಸಂದೇಶ ಸ್ಪಷ್ಟವೇ?
ಈ ಪ್ರಮುಖ ಡಿನ್ನರ್ ಮೀಟಿಂಗ್ಗೆ , ಡಿಕೆ ಶಿವಕುಮಾರ್ ಗೈರು ಅವರ ಆಪ್ತರೂ ಹಾಜರಾಗಿರಲಿಲ್ಲ .ಇದರಿಂದ ಕಾಂಗ್ರೆಸ್ ಒಳಗೆ ಎರಡು ಗುಂಪುಗಳ ಅಸ್ತಿತ್ವ ಮತ್ತೆ ಸ್ಪಷ್ಟವಾಗಿದೆ.
ಎಸ್ಟಿ ನಾಯಕರ ಡಿನ್ನರ್ ಮೀಟಿಂಗ್ ಕೂಡ ಕುತೂಹಲ
ಇದರ ಜೊತೆಗೆ ಮತ್ತೊಂದು ಹೋಟೆಲ್ನಲ್ಲಿ ಎಸ್ಟಿ ನಾಯಕರ ಸಭೆ ಪ್ರತ್ಯೇಕವಾಗಿ ನಡೆದಿದೆ.
ಈ ಸಭೆಗೆ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರಿಂದ, ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.




