Dina Bhavishya : ಇಂದು ಕಾಲಾಷ್ಟಮಿ, ಈ ರಾಶಿಗೆ ಕಾಲಭೈರವನ ದೈವಿಕ ಆಶೀರ್ವಾದ!

ಜುಲೈ 7, 2026ರ ಮಂಗಳವಾರದ ಇಂದಿನ ರಾಶಿ ಭವಿಷ್ಯಕ್ಕೆ ಸ್ವಾಗತ. ಇಂದು ಚಂದ್ರನು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಕರ್ಕ ರಾಶಿಯಲ್ಲಿರುವ ಗುರುನೊಂದಿಗೆ ನವ-ಪಂಚಮ ಯೋಗ ಹಾಗೂ ರಾಶಿ ಪರಿವರ್ತನ ಯೋಗ ರೂಪುಗೊಂಡಿದೆ. ಈ ಶುಭ ಯೋಗಗಳು ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ? ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದಿರಬೇಕು? ನೋಡೋಣ ಇಂದಿನ ದ್ವಾದಶ ರಾಶಿ ಭವಿಷ್ಯ.
ಮೇಷ
ಇಂದು ಉತ್ಸಾಹ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಸ್ನೇಹಿತರ ಭೇಟಿ ಹಾಗೂ ಪ್ರವಾಸದ ಅವಕಾಶ ಸಿಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಸಾಧ್ಯತೆ ಇದೆ. ಹೊಸ ಯೋಜನೆಗಳನ್ನು ಆರಂಭಿಸುವುದನ್ನು ಸದ್ಯಕ್ಕೆ ಮುಂದೂಡುವುದು ಉತ್ತಮ.
ವೃಷಭ
ಕುಟುಂಬದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಹೊಸ ವಸ್ತು ಖರೀದಿಸುವ ಯೋಗವಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಂಬಂಧಗಳು ಬಲಗೊಳ್ಳಲಿವೆ. ಕೋಪ ಮತ್ತು ಅನಗತ್ಯ ಖರ್ಚಿನ ಮೇಲೆ ನಿಯಂತ್ರಣ ಇರಲಿ.
ಮಿಥುನ
ಆರ್ಥಿಕ ಲಾಭದ ದಿನ. ಹೊಸ ಅವಕಾಶಗಳು ದೊರೆಯಲಿದ್ದು, ಉದ್ಯೋಗದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹೊಸ ಯೋಜನೆಗಳಿಗೆ ಉತ್ತಮ ಸಮಯ. ಸೋಮಾರಿತನ ಬಿಟ್ಟು ಕಾರ್ಯನಿರ್ವಹಿಸಿದರೆ ಯಶಸ್ಸು ಖಚಿತ.
ಕಟಕ
ವೃತ್ತಿ ಹಾಗೂ ಕುಟುಂಬದಲ್ಲಿ ಉತ್ತಮ ಬೆಳವಣಿಗೆ ಕಂಡುಬರಲಿದೆ. ಆದರೆ ಹಠಾತ್ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ.
ಸಿಂಹ
ಉದ್ಯೋಗದಲ್ಲಿ ಬಡ್ತಿ ಅಥವಾ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಲಾಭವಾಗಲಿದೆ. ನಾಯಕತ್ವದ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಇದನ್ನು ಓದಿ : Dina Bhavishya|ಇಂದು ಈ ರಾಶಿಗೆ ಸಕಲೈಶ್ವರ್ಯ ಪ್ರಾಪ್ತಿ!
ಕನ್ಯಾ
ಮಿಶ್ರ ಫಲದ ದಿನ. ಖರ್ಚುಗಳು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಉತ್ತಮ ಸಮಯ ಕಳೆಯುವಿರಿ. ಹೊಸ ಪರಿಚಯ ಹಾಗೂ ಪ್ರಯಾಣದ ವೇಳೆ ಎಚ್ಚರಿಕೆ ಅಗತ್ಯ.
ತುಲಾ
ಕೋಪ ಮತ್ತು ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಉದ್ಯೋಗದಲ್ಲಿ ಪರಿಶ್ರಮಕ್ಕೆ ಫಲ ಸಿಗಲಿದೆ. ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಮನಸ್ಸಿಗೆ ನೆಮ್ಮದಿ ನೀಡಲಿದೆ.
ವೃಶ್ಚಿಕ
ಹಣಕಾಸಿನ ವಿಷಯಗಳಲ್ಲಿ ಉತ್ತಮ ಬೆಳವಣಿಗೆ. ಉದ್ಯೋಗದಲ್ಲಿ ಪದೋನ್ನತಿಯ ಸಾಧ್ಯತೆ ಇದೆ. ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವಿರಿ. ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದಾಗಲಿದೆ.
ಧನು
ವ್ಯವಹಾರದಲ್ಲಿ ಲಾಭ ಹಾಗೂ ಹೊಸ ಆದಾಯದ ಅವಕಾಶಗಳು ದೊರೆಯಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಪ್ರಯಾಣ ಲಾಭದಾಯಕವಾಗಲಿದೆ. ಆದರೆ ಅನಿರೀಕ್ಷಿತ ಖರ್ಚುಗಳ ಬಗ್ಗೆ ಎಚ್ಚರಿಕೆ ಇರಲಿ.
ಮಕರ
ಕಾನೂನು ಸಂಬಂಧಿತ ವಿಷಯಗಳಲ್ಲಿ ಅನುಕೂಲಕರ ಬೆಳವಣಿಗೆ. ಹೊಸ ಹೂಡಿಕೆಗಳಿಗೆ ಉತ್ತಮ ಸಮಯ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.
ಕುಂಭ
ಆತ್ಮವಿಶ್ವಾಸ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಲಾಭ ಹಾಗೂ ಪಾಲುದಾರಿಕೆ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದೆ.
ಮೀನ
ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಉದ್ಯೋಗದಲ್ಲಿ ಹಿರಿಯರಿಂದ ಮೆಚ್ಚುಗೆ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಮುಂದುವರಿಯಲಿದೆ. ಅನಗತ್ಯ ಖರ್ಚುಗಳನ್ನು ತಪ್ಪಿಸಿ, ಮಾತಿನಲ್ಲಿ ಸಂಯಮ ಇರಲಿ.
ಇಂದಿನ ಅದೃಷ್ಟದ ರಾಶಿಗಳು:
ಮಿಥುನ, ಸಿಂಹ, ಧನು, ಕುಂಭ
ಎಚ್ಚರಿಕೆಯಿಂದಿರಬೇಕಾದ ರಾಶಿಗಳು:
ತುಲಾ, ಕನ್ಯಾ, ಕಟಕ
ಇದನ್ನು ನೋಡಿ : SIR ಅರ್ಜಿ ತುಂಬುವುದು ಹೇಗೆ ಗೊತ್ತಾ..? – ಈ ಸಿಂಪಲ್ ಸ್ಟೆಪ್ಸ್ ಫಾಲೋ ಮಾಡಿ ಸಾಕು..!




