Davanagere : ಜನಸಂದಣಿ ಇರುವ ಪ್ರದೇಶದಲ್ಲಿ ಲಾಂಗ್ ಹಾಗೂ ಮಚ್ಚು ಹಿಡಿದು ಭೀತಿ ಮೂಡಿಸಿದ್ದ ಇಬ್ಬರು ಪುಂಡರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದು, ಬಂಧನದ ನಂತರ ದೊಡ್ಡ ಪ್ರಮಾಣದ ಗಾಂಜಾ ಪತ್ತೆಯಾಗಿದೆ.

Davanagere : ಬಂಧಿತ ಆರೋಪಿಗಳನ್ನು ರಾಕೇಶ್ (ರಾಕಿ) ಮತ್ತು ಸಾಹಿಲ್ ಎಂದು ಗುರುತಿಸಲಾಗಿದೆ. ತನಿಖೆ ವೇಳೆ ಇಬ್ಬರೂ ಗಾಂಜಾ ಪೆಡ್ಲರ್ಗಳು ಎಂಬುದು ಬೆಳಕಿಗೆ ಬಂದಿದೆ.
ಕಳೆದ ಮೂರು ದಿನಗಳ ಹಿಂದೆ ದಾವಣಗೆರೆಯ ನಿಟ್ಟುವಳ್ಳಿ ಶ್ರೀರಾಮ ಬಡಾವಣೆಯಲ್ಲಿ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಯುವಕರ ಮೇಲೆ ಹಲ್ಲೆ ನಡೆಸಲು ಆರೋಪಿಗಳು ಆಟೋದಲ್ಲಿ ಲಾಂಗ್ ಮತ್ತು ಮಚ್ಚು ಹಿಡಿದು ಸ್ಥಳಕ್ಕೆ ಬಂದಿದ್ದರು.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಪುಂಡಾಟ
ಆರೋಪಿಗಳ ಈ ಭೀತಿದಾಯಕ ವರ್ತನೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ದೃಶ್ಯಾಧಾರಗಳ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನು ಓದಿ : ಹೀಲಿಯಂ Gas Cylinder Explosion – ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ
ರೂಂನಲ್ಲಿ ಪತ್ತೆಯಾದ ಗಾಂಜಾ
ಬಂಧನದ ಬಳಿಕ ಕೃತ್ಯಕ್ಕೆ ಬಳಸಿದ ಲಾಂಗ್ ವಶಕ್ಕೆ ಪಡೆಯಲು ಆರೋಪಿಗಳ ರೂಂಗೆ ತೆರಳಿದಾಗ, ಅಲ್ಲಿ 1 ಕೆಜಿಗೂ ಹೆಚ್ಚು ಗಾಂಜಾ ಪತ್ತೆಯಾಗಿದೆ. ಪೊಲೀಸರು ಸುಮಾರು 60 ಸಾವಿರ ರೂ. ಮೌಲ್ಯದ ಗಾಂಜಾ, ಜೊತೆಗೆ 2 ಮಚ್ಚುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇದನ್ನು ನೋಡಿ : DEVARAYANA DURGAದಲ್ಲಿ ಕೋತಿಗಳ ಮಾರಣಹೋಮ..?




