
Tumakuru ದಸರಾಗೆ ಇಂದಿನಿಂದ ಅದ್ದೂರಿ ಚಾಲನೆ – ನಗಾರಿ ಬಾರಿಸಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಂ
ತುಮಕೂರು ನಗರದಲ್ಲಿ ನಾಡಹಬ್ಬ ದಸರಾ ಸಂಭ್ರಮ ಮನೆ ಮಾಡಿದೆ. ಮೈಸೂರಿಗೆ ತೆರಳಲು ಸಾಧ್ಯವಾಗದ ಜಿಲ್ಲೆಯ ಜನರಿಗಾಗಿ ಜಿಲ್ಲಾಡಳಿತದ ವತಿಯಿಂದ ತುಮಕೂರಿನಲ್ಲೇ ಅದ್ಧೂರಿ ದಸರಾ ಉತ್ಸವವನ್ನು ಆಚರಣೆ ಮಾಡಲಾಗ್ತಿದೆ.
ಇನ್ನು ಇಂದಿನಿಂದ ಸುಮಾರು 11 ದಿನಗಳ ಕಾಲ ಅದ್ಧೂರಿ ದಸರಾ ಮಹೋತ್ಸವ ನಡೆಸಲಾಗುತ್ತಿದ್ದು, ದಸರಾ ಮಹೋತ್ಸವಕ್ಕೆ ನಗಾರಿ ಬಾರಿಸುವ ಮೂಲಕ ಡಿಸಿಎಂ ಪರಮೇಶ್ವರ್ ಉದ್ಘಾಟನೆ ಮಾಡಿದ್ರು.

ನಗಾರಿ ಬಾರಿಸಿ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಡಿಸಿಎಂ
ತುಮಕೂರು ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ದಸರಾ ಮಹೋತ್ಸವಕ್ಕೆ ಪರಮೇಶ್ವರ್ ಅವರು ನಂದಿ ಧ್ವಜ ಪೂಜೆ ನೆರವೇರಿಸುವ ಮೂಲಕ ತುಮಕೂರು ದಸರಾವನ್ನು ಉದ್ಘಾಟನೆ ಮಾಡಿದ್ರು. ಬಳಿಕ ನಗಾರಿ ಬಾರಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಿಸಿಎಂ ಪರಮೇಶ್ವರ್ ಪತ್ನಿ ಕನ್ನಿಕಾ ಪರಮೇಶ್ವರ್, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಸಕ ಜ್ಯೋತಿಗಣೇಶ್ ಸೇರಿ ವಿವಿಧ ಮಠಗಳ ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
READ THIS : ತುಮಕೂರು ದಸರಾಗೆ ಅದ್ಧೂರಿ ಚಾಲನೆ – ಧ್ವಜಾರೋಹಣ ನೆರವೇರಿಸಿದ ಪರಂ

ಹೆಲಿರೈಡ್ ಮಾಡಿದ ಮಠಾಧೀಶರು
ಇನ್ನು ತುಮಕೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು ಹೆಲಿರೈಡ್ ಕಾರ್ಯಕ್ರಮ.
ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕಾರದ ಮಠದ ಶ್ರೀ ವೀರಬಸವ ಸ್ವಾಮೀಜಿ ಹಾಗೂ ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಹೆಲಿಕಾಫ್ಟರ್ ರೈಡ್ ಮಾಡಿದ್ರು.

DCM ಪರಂ ಏನ್ ಹೇಳಿದ್ರು?
ಇನ್ನು ಡಿಸಿಎಂ ಜಿ. ಪರಮೇಶ್ವರ್ ಮಾತನಾಡಿ, ಮೈಸೂರು ದಸರಾ ನಾಡಿನ ಐತಿಹಾಸಿಕ ಪರಂಪರೆಯ ಪ್ರತೀಕ. ಹಿಂದಿನಿಂದಲೂ ಮಹಾರಾಜರು ನಡೆಸಿಕೊಂಡು ಬಂದಿರುವ ಈ ಪರಂಪರೆಯನ್ನು ಸರ್ಕಾರ ಮುಂದುವರಿಸಿಕೊಂಡು ಬಂದಿದೆ. ಮೈಸೂರಿಗೆ ತೆರಳಲು ಎಲ್ಲರಿಗೂ ಸಾಧ್ಯವಾಗದ ಕಾರಣ ಕಳೆದ ಎರಡು ವರ್ಷಗಳಿಂದ ತುಮಕೂರಿನಲ್ಲಿಯೂ ದಸರಾ ಆಚರಿಸಲಾಗುತ್ತಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದೇ ಇದರ ಉದ್ದೇಶ. ಬರಗಾಲ ದೂರವಾಗಿ ನಾಡಿನಲ್ಲಿ ಸುಭಿಕ್ಷೆ ನೆಲೆಸಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. 11 ದಿನಗಳ ಕಾಲ ನಡೆಯಲಿರುವ ದಸರಾ ಉತ್ಸವದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.

11 ದಿನಗಳ ಕಾಲ ತುಮಕೂರಲ್ಲಿ ದಸರಾ ಸಂಭ್ರಮ
ಒಟ್ಟಿನಲ್ಲಿ ತುಮಕೂರು ದಸರಾ ಮಹೋತ್ಸವ ಕಳೆದ ಬಾರಿಗಿಂತ ಈ ಬಾರಿ ಮತ್ತಷ್ಟು ವಿಶೇಷವಾಗಿದ್ದು, ತುಮಕೂರಿಗರಿಗಾಗಿ ಹೆಲಿಕಾಫ್ಟರ್ ರೈಡ್, ಫಲ ಪುಷ್ಪ ಪ್ರದರ್ಶನ, ಅಂಬಾರಿ ಬಸ್ ವ್ಯವಸ್ಥೆ ಮಾಡಲಾಗಿದೆ.
ಮುಂದಿನ 11 ದಿನಗಳ ಕಾಲ ತುಮಕೂರು ನಗರದಲ್ಲಿ ನಾಡಹಬ್ಬದ ಸಂಭ್ರಮ ಮನೆ ಮಾಡಲಿದೆ.

MUST WATCH : ಕ್ಯಾಬಿನೆಟ್ನ 10 ಸಚಿವರಿಗೆ CD TENSION – ಸಿಎಂ ಡಿಕೆಶಿಗೆ R ASHOK ಸವಾಲ್




