ಸ್ಯಾಂಡಲ್ವುಡ್ ನಟ Daali ಧನಂಜಯ್ ಮತ್ತು ಡಾ. ಧನ್ಯತಾ ದಂಪತಿಗೆ ಗಂಡು ಮಗು ಜನಿಸಿದೆ…

ಸ್ಯಾಂಡಲ್ವುಡ್ ನಟ Daali Dhananjaya ಮತ್ತು Dr. Dhanyatha ದಂಪತಿಗೆ ಗಂಡು ಮಗು ಜನಿಸಿದೆ. ಈ ಸಂತಸದ ಸುದ್ದಿಯನ್ನು ನಟ ಡಾಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
MUST READ : ಗ್ಯಾಸ್ ಬೆಲೆ ಏರಿಕೆ ಕುರಿತು DK Shivakumar ಆಕ್ರೋಶ..!!

ಖುಷಿ ಹಂಚಿಕೊಂಡ ದಂಪತಿ
ಇತ್ತೀಚೆಗೆ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಬೇಬಿ ಬಂಪ್ ಫೋಟೋಶೂಟ್ ಮಾಡಿ “Our universe is expanding” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಅವರು 2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಮತ್ತು ಆರತಕ್ಷತೆ ಕಾರ್ಯಕ್ರಮಗಳಲ್ಲಿ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸಿ ಶುಭ ಹಾರೈಸಿದ್ದರು.
MUST WATCH : ಕಲ್ಯಾಣಿಯಲ್ಲಿ ಮೀನುಗಳ ಮಾರಣಹೋಮ – ಕಲುಷಿತ ನೀರಿಂದ ಮೀನುಗಳು ಸಾವನ್ನಪ್ಪಿದ್ವಾ.? | CHIKKABALLAPURA NEWS |




