Bidar : ಜೀವಂತ ಮೀನು ನುಂಗಲು ಮುಗಿಬಿದ್ದ ಜನ – ಏನಿದರ ಪ್ರಯೋಜನ?

ಜೀವಂತ ಮೀನುಗಳನ್ನು ನುಂಗಲು ಚಿಕ್ಕ ವಯಸ್ಸಿನವರಿಂದ ದೊಡ್ಡವರವರೆಗೂ ಜನರು ಮುಗಿಬಿದ್ದಿರೋ ಅಪರೂಪದ ಸಂಪ್ರದಾಯ Bidar ನಲ್ಲಿ ಮುಂದುವರೆದಿದೆ.
ಜೀವಂತ ಮೀನುಗಳನ್ನು ನುಂಗಲು ಮುಗಿಬಿದ್ದ ಜನ
ಜೂನ್ 8ರದು ಮಿರಗ ಮಳೆ ಆರಂಭವಾಗಿದ್ದು, ಮಳೆ ಆರಂಭವಾದ ಮೊದಲ ದಿನ ಮಾತ್ರ ಆರ್ಯುವೇದ ಔಷಧಿಯನ್ನ ಜೀವಂತ ಮೀನಿನ ಬಾಯಿಯೊಳಗೆ ಹಾಕಿ ಅದನ್ನ ಜೀವಂತವಾಗಿ ನುಂಗಿದರೆ ಕೆಮ್ಮು, ಧಮ್ಮು, ಕಾಮಾಲೆ, ಅಸ್ತಮಾ ಖಾಯಿಲೆಗಳು ವಾಸಿಯಾಗುತ್ತದೆ ಎಂಬ ನಂಬಿಕೆ ಜೀವಂತವಾಗಿದೆ. ಶತಮಾನದಿಂದ ಬಂದಿರುವ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದು, ನಿನ್ನೆ ಜೀವಂತ ಮೀನುಗಳನ್ನು ನುಂಗಲು ಜನರು ಮುಗಿಬಿದ್ದರು.. ಅಪರೂಪದ ಈ ಸಂಗತಿಗೆ ಸಾಕ್ಷಿಯಾಗಿದ್ದು ಬೀದರ್ನಲ್ಲಿ.

ಶತಮಾನಗಳಿಂದಲೂ ವಿಚಿತ್ರ ಸಂಪ್ರದಾಯ ಮುಂದುವರಿಕೆ
ಬೀದರ್ ನಗರದ ಓಲ್ಡ್ ಸಿಡಿ ಹಾಗೂ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಣಣದಲ್ಲಿ ಜೀವಂತ ಮೀನುಗಳನ್ನು ನುಂಗುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದಾರೆ. ಹುಮ್ನಾಬಾದ್ ಪಟ್ಟಣದ ಶರಣಪ್ಪ ಜಗದಾಳೆ ಕುಟುಂಬದವರು ಆರ್ಯುವೇದಿಕ ಔಷಧಿಯನ್ನ ಜೀವಂತ ಮೀನುಗಳ ಬಾಯಿಯಲ್ಲಿ ಹಾಕಿ ಅಸ್ತಮಾ, ಕಾಮಾಲೆಯಂತ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಮೀನು ನುಂಗಿಸಿ ಕಾಯಿಲೆಯನ್ನ ಕಡಿಮೆ ಮಾಡಿಸುವ ಕೆಲಸವನ್ನ ಮಾಡುತ್ತಿದ್ದಾರೆ. ವರ್ಷದಲ್ಲಿ ಒಂದು ಸಲ ಮಾತ್ರ ಇವರು ಜನರಿಗೆ ಮೀನಿನಲ್ಲಿ ಆರ್ಯುವೇದಿಕ ಔಷದಿಯನ್ನ ಮೀನಿನ ಬಾಯಿಯಲ್ಲಿ ಹಾಕಿ ಜೀವಂತ ಮೀನುಗಳನ್ನ ನುಂಗಿಸುತ್ತಾರೆ.
ಇದನ್ನು ಓದಿ : ಆಧಾರ್ ಕಾರ್ಡ್ನಲ್ಲಿ ನಿಮ್ಮ ಹಳೆಯ ಫೋಟೋ ಬದಲಾಯಿಸುವುದು ಹೇಗೆ?

ಹೊರ ರಾಜ್ಯದಿಂದಲೂ ಮೀನು ನುಂಗಲು ಬರ್ತಿರೋ ಜನರು
ಇನ್ನು ಈ ಸಂಪ್ರದಾಯದ ಔಷಧಿಯನ್ನು ಪಡೆಯಲು ರಾಜ್ಯದ ಮೂಲೆ ಮೂಲೆಯಿಂದ ಜನರು ಮಾತ್ರವಲ್ಲದೇ ಹೈದರಾಬಾದ್, ತೆಲಂಗಾಣ, ಮಹರಾಷ್ಟ್ರದಿಂದಲೂ ಜನರು ಬರ್ತಾ ಇರೋದು ವಿಶೇಷವಾಗಿದೆ.

ಇದನ್ನು ನೋಡಿ : ಬದುಕಿದ್ದ ಮಹಿಳೆಯನ್ನು ಗುಣಿಗೆ ತಳ್ಳಿ ಕ್ರೌರ್ಯ – ಜಮೀನು ವಿಚಾರಕ್ಕೆ ದಾಯಾದಿಗಳಿಂದ ಕಲಹ




