ಗೃಹಜ್ಯೋತಿ ಫಲಾನುಭವಿಗಳೇ ಗಮನಿಸಿ – July ತಿಂಗಳ ಸರಾಸರಿ ವಿದ್ಯುತ್ ಬಿಲ್ ಪಾವತಿಗೆ ಬೆಸ್ಕಾಂ ಮನವಿ

ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಮನೆ-ಮನೆ ಮಾಹಿತಿ ಪರಿಶೀಲನೆಗಾಗಿ ಮೀಟರ್ ರೀಡರ್ಗಳನ್ನು ನಿಯೋಜಿಸಿರುವ ಹಿನ್ನೆಲೆಯಲ್ಲಿ July ತಿಂಗಳಲ್ಲಿ ಗೃಹ ಬಳಕೆದಾರರಿಗೆ ಸರಾಸರಿ ವಿದ್ಯುತ್ ಬಿಲ್ ನೀಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ಗ್ರಾಹಕರು ನಿಗದಿತ 15 ದಿನಗಳ ಅವಧಿಯೊಳಗೆ ಬಿಲ್ ಮೊತ್ತವನ್ನು ಪಾವತಿಸುವಂತೆ ಮನವಿ ಮಾಡಿದೆ.
ಇಮೇಲ್ ಮೂಲಕ ಬಿಲ್ ಮೊತ್ತ
ಬೆಸ್ಕಾಂ ನೀಡಿರುವ ಮಾಹಿತಿಯ ಪ್ರಕಾರ, ಜುಲೈ ತಿಂಗಳಲ್ಲಿ ಗ್ರಾಹಕರಿಗೆ ಭೌತಿಕ ಬಿಲ್ ವಿತರಿಸದೆ, ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಲ್ ಸಿದ್ಧಪಡಿಸಲಾಗಿದೆ.
ಬಿಲ್ ಮೊತ್ತದ ವಿವರವನ್ನು ಎಸ್ಎಂಎಸ್ ಹಾಗೂ ಇ-ಮೇಲ್ ಮೂಲಕ ಗ್ರಾಹಕರಿಗೆ ಕಳುಹಿಸಲಾಗಿದೆ.
ಮೀಟರ್ ರೀಡರ್ಗಳು ಮನೆಗಳಿಗೆ ಬಾರದಿರುವ ಬಗ್ಗೆ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಈಗಾಗಲೇ ಸರಾಸರಿ ಬಿಲ್ ನೀಡಲಾಗಿರುವುದರಿಂದ, ಗ್ರಾಹಕರು ತಮ್ಮ ಪಾವತಿ ವ್ಯವಸ್ಥೆಗಳ ಮೂಲಕ ಬಿಲ್ ಮೊತ್ತವನ್ನು ಪರಿಶೀಲಿಸಿ ಪಾವತಿಸಬಹುದಾಗಿದೆ.
ಇದನ್ನು ಓದಿ : ನಿಮ್ಮ ಊರಿನಲ್ಲೇ 2000 ಗೃಹಲಕ್ಷ್ಮಿ ಹಣಕ್ಕೆ ಹೊಸ ಅರ್ಜಿ ಸಲ್ಲಿಸಬಹುದು!

15 ದಿನ ಕಾಲಾವಕಾಶ
ಜುಲೈ ತಿಂಗಳ ಬಿಲ್ ಪಾವತಿಸಲು ಉಪ ವಿಭಾಗದ ನಗದು ಕೌಂಟರ್ಗಳು, ಬೆಸ್ಕಾಂ ವೆಬ್ಸೈಟ್, ಬೆಸ್ಕಾಂ ಮಿತ್ರ ಆ್ಯಪ್ ಹಾಗೂ ವಿವಿಧ ತೃತೀಯ ಪಕ್ಷದ (ಥರ್ಡ್ ಪಾರ್ಟಿ) ಪಾವತಿ ಆ್ಯಪ್ಗಳನ್ನು ಬಳಸಿಕೊಳ್ಳಬಹುದು.
ಬಿಲ್ ನೀಡಿದ ದಿನದಿಂದ 15 ದಿನಗಳೊಳಗೆ ಪಾವತಿ ಮಾಡುವಂತೆ ಬೆಸ್ಕಾಂ ಮನವಿ ಮಾಡಿದೆ.
ಆದರೆ, ಎಚ್ಟಿ ಗ್ರಾಹಕರು, 40 ಎಚ್ಪಿ ಹಾಗೂ ಅದಕ್ಕಿಂತ ಹೆಚ್ಚಿನ ಮಂಜೂರಾದ ಲೋಡ್ ಹೊಂದಿರುವ ಎಲ್ಟಿ ಗ್ರಾಹಕರು, ಸೋಲಾರ್ ರೂಫ್ಟಾಪ್ (SRTPV) ಬಳಕೆದಾರರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆಯೇ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ವಿದ್ಯುತ್ ಬಳಕೆಯ ಆಧಾರದಮೇಲೆ ಬಿಲ್
ಆಗಸ್ಟ್ ತಿಂಗಳಿನಿಂದ ಯಥಾಪ್ರಕಾರ ನಿಯಮಿತ ಮೀಟರ್ ರೀಡಿಂಗ್ ಮತ್ತು ನೈಜ ವಿದ್ಯುತ್ ಬಳಕೆಯ ಆಧಾರದಮೇಲೆ ಬಿಲ್ ನೀಡಲಾಗುವುದು ಎಂದು ಬೆಸ್ಕಾಂ ತಿಳಿಸಿದೆ.

ಇದನ್ನು ನೋಡಿ : ಪ್ರಶಾಂತವಾಗಿದ್ದ ತುಮಕೂರಿನಲ್ಲಿ ರಕ್ತದೋಕುಳಿ ಹರಿಸಿದ ದುಷ್ಕರ್ಮಿಗಳು




