Bengaluru News : 15 ವರ್ಷದ ಬಾಲಕಿಯನ್ನು ಜನ್ಮದಿನದ ಕೇಕ್ ಕತ್ತರಿಸುವುದಾಗಿ ಪುಸಲಾಯಿಸಿ ರಾಶಿ ಲೇಔಟ್ಗೆ ಕರೆದೊಯ್ದು ಅತ್ಯಾಚಾರ (Physical Abuse) ಎಸಗಿದ್ದಾನೆ.

ಬೆಂಗಳೂರು ನಗರದಲ್ಲಿ 15 ವರ್ಷದ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿಗೆ ಸೇರಿದ ಯತೀಶ್ (27) ಎಂಬಾತನೇ ಈ ಕೃತ್ಯ ಎಸಗಿರುವ ಆರೋಪಿ ಎಂದು ಪೊಲೀಸರು ಗುರುತಿಸಿದ್ದಾರೆ. ಆತ ಸ್ಥಳೀಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ.
ಇದನ್ನು ಓದಿ : Vijayapura : ಲಿವಿನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯಿಂದಲೇ ಪ್ರಿಯಕರನ ಹತ್ಯೆ
15 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಮಾಹಿತಿಯ ಪ್ರಕಾರ, ವಿದ್ಯಾರ್ಥಿನಿಯ ಹುಟ್ಟುಹಬ್ಬದ ದಿನದ ಕೇಕ್ ಕತ್ತರಿಸುವುದಾಗಿ ಪುಸಲಾಯಿಸಿ ರಾಶಿ ಲೇಔಟ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ ಬಳಿಕ ಕಾಮುಕ ಎಸ್ಕೇಪ್ ಆಗಿದ್ದಾನೆ.
ಆರೋಪಿಯ ಬಂಧನ
ಘಟನೆ ಬಗ್ಗೆ ವಿದ್ಯಾರ್ಥಿನಿ ತನ್ನ ಪೋಷಕರಿಗೆ ಮಾಹಿತಿ ನೀಡುತ್ತಿದ್ದಂತೆ, ಅವರು ತಕ್ಷಣವೇ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೈಗೊಂಡ ಕಾರ್ಯಾಚರಣೆಯಲ್ಲಿ ಯತೀಶ್ ಅನ್ನು ಬಂಧಿಸಿದ್ದು, ನಂತರ ಜೈಲುಗೆ ರವಾನಿಸಿದ್ದಾರೆ. ಈ ಬಗ್ಗೆ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರೆಸಿದ್ದಾರೆ.
ಇದನ್ನು ನೋಡಿ : Sheikh Hasina: ಮರಣದಂಡನೆ ತೀರ್ಪಿನ ಬಗ್ಗೆ ಶೇಖ್ ಹಸೀನಾ ಫಸ್ಟ್ ರಿಯಾಕ್ಷನ್ ಏನು?




