Bigg Boss Kannada Season 12 (BBK 12) ನಲ್ಲಿ ಈ ವಾರ ನಡೆದ ಘಟನೆಗಳು ಪ್ರೇಕ್ಷಕರ ಗಮನ ಸೆಳೆದಿವೆ. ಮನೆಯೊಳಗೆ ನಡೆದ “ದೆವ್ವದ ಮ್ಯಾಟರ್” ಇದೀಗ ಕಿಚ್ಚ ಸುದೀಪ್ ಅವರ ಕೋಪಕ್ಕೆ ಕಾರಣವಾಗಿದೆ.

BBK 12: ಕೆರಳಿ ಕೆಂಡವಾದ ಕಿಚ್ಚ ಸುದೀಪ್ ದೆವ್ವದ ಮ್ಯಾಟರ್’ನಿಂದ ರಕ್ಷಿತಾ ಶೆಟ್ಟಿ ಅತಂತ್ರ
ತಮ್ಮಪಾಡಿಗಿದ್ದ ರಕ್ಷಿತಾ ಶೆಟ್ಟಿ ಅವರನ್ನು ಅಶ್ವಿನಿ ಮತ್ತು ಜಾನ್ವಿ ದೆವ್ವದ ವಿಷಯಕ್ಕೆ ಎಳೆದು ಅಸಹಾಯಕ ಸ್ಥಿತಿಗೆ ತಳ್ಳಿದ್ದಾರೆ.
ಇಬ್ಬರು ಸ್ಪರ್ಧಿಗಳ ವರ್ತನೆಯಿಂದ ರಕ್ಷಿತಾ ಮನೆಯಲ್ಲಿ ಅವಮಾನ ಅನುಭವಿಸಿದ್ದಾರೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.
ಮನೆಯೊಳಗೆ ಗೆಜ್ಜೆ ಶಬ್ದ ಮಾಡಿ, ಅದನ್ನು ರಕ್ಷಿತಾ ಮೇಲೆ ಆರೋಪಿಸಿದ ಅಶ್ವಿನಿ-ಜಾನ್ವಿ, ರಕ್ಷಿತಾ ‘ನಾಗವಳ್ಳಿ ರೀತಿ’ ಆಡ್ತಾರೆ ಎಂದು ಹೇಳಿ ಸುಳ್ಳು ಆರೋಪ ಮಾಡಿದ್ದಾರೆ. ಇದರ ಪರಿಣಾಮವಾಗಿ ರಕ್ಷಿತಾಗೆ ಪದೇ ಪದೇ ಕಿರುಕುಳ ನೀಡಲಾಗಿದೆ.
BBK 12: ಕೆರಳಿ ಕೆಂಡವಾದ ಕಿಚ್ಚ ಸುದೀಪ್ ಅಪಮಾನಕಾರಿ ಪದಗಳು ಮತ್ತು ನಿಂದನೆಗಳು
ರಕ್ಷಿತಾ ಮೇಲೆ ಕೇವಲ ಆರೋಪ ಮಾತ್ರವಲ್ಲ, ಅಶ್ವಿನಿ ಮತ್ತು ಜಾನ್ವಿ ಇಬ್ಬರೂ “ಈಡಿಯೆಟ್”, “ಮುಚ್ಕೊಂಡು ಮಲ್ಕೋ” ಎಂಬ ನಿಂದನ ಪದಗಳನ್ನು ಉಪಯೋಗಿಸಿದ್ದಾರೆ. ವಾರಪೂರ್ತಿ ಈ ವಿಚಾರವೇ ಮನೆಯೊಳಗೆ ಚರ್ಚೆಯ ಕೇಂದ್ರಬಿಂದುವಾಯಿತು.
ಮನೆಯೊಳಗಿನ ಇತರ ಸದಸ್ಯರೂ ಈ ವರ್ತನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲೂ ಪ್ರೇಕ್ಷಕರು ಅಶ್ವಿನಿ ಮತ್ತು ಜಾನ್ವಿಯ ವರ್ತನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
MUST READ : BBK 12 ಅಶ್ವಿನಿ-ಜಾನ್ವಿ ವಿರುದ್ಧ ಸಿಡಿದ ವೀಕ್ಷಕರು
ಸುದೀಪ್ ಕೋಪಗೊಂಡ ಕ್ಷಣ: ಪ್ರೋಮೋ ವೈರಲ್
ಇದೀಗ ಬಿಡುಗಡೆಯಾದ ವೀಕೆಂಡ್ ಪ್ರೋಮೋದಲ್ಲಿ ಕಿಚ್ಚ ಸುದೀಪ್ ಅವರ ಕೋಪ ಸ್ಪಷ್ಟವಾಗಿ ಕಾಣುತ್ತದೆ. ಅವರು ಗಂಭೀರವಾಗಿ ಹೇಳಿದ್ದು ಹೀಗಿದೆ:
“ನಾವು ಕೊಟ್ಟಿರೋ ಮಾತನ್ನು ತಪ್ಪಲ್ಲ, ತಪ್ಪಾಗಿ ಆಡಿರೋ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ. ಒಳ್ಳೆಯ ಕೆಲಸ ಮಾಡಿದಾಗ ಕೈ ತಟ್ಟಿ ಚಪ್ಪಾಳೆ ಕೊಡ್ತೀವಿ. ಆದರೆ ಬಾಯಿಗೆ ಬಂದಂತೆ ಮಾತನಾಡಿದವರಿಗೆ ಚೂರು ತಲೆ ಮೇಲೆ ತಟ್ಟಿ ಬುದ್ಧಿ ಹೇಳಬೇಕಾಗುತ್ತದೆ.”
ಈ ಮಾತುಗಳಿಂದ ಸುದೀಪ್ ಅಶ್ವಿನಿ ಮತ್ತು ಜಾನ್ವಿ ವಿರುದ್ಧ ನೇರವಾಗಿ ತಾಕೀತು ಮಾಡಿದಂತೆ ಕಾಣುತ್ತದೆ. ಪ್ರೇಕ್ಷಕರು ಈಗ ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಅವರ ಕ್ಲಾಸ್ಗಾಗಿ ಕಾದಿದ್ದಾರೆ.
ಕನ್ನಡಿಗರ ಕಣ್ಣು BBK 12 ಮೇಲೆ
ಈ ಘಟನೆಗಳಿಂದ Bigg Boss Kannada 12 ಮನೆಯಲ್ಲಿ ತೀವ್ರ ವಾತಾವರಣ ನಿರ್ಮಾಣವಾಗಿದೆ. ರಕ್ಷಿತಾ ಶೆಟ್ಟಿಗೆ ಬೆಂಬಲ ವ್ಯಕ್ತಪಡಿಸುತ್ತಿರುವ ನೆಟ್ಟಿಗರು ಅಶ್ವಿನಿ-ಜಾನ್ವಿಯ ವಿರುದ್ಧ ಟ್ರೋಲ್ಗಳ ಮಳೆ ಸುರಿಸುತ್ತಿದ್ದಾರೆ.
ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಈ ವಿಷಯವನ್ನು ಹೇಗೆ ಹಸ್ತಕ್ಷೇಪಿಸುತ್ತಾರೆ ಎಂಬುದರ ಮೇಲೆ ಈಗ ಸಂಪೂರ್ಣ ಕರ್ನಾಟಕದ ಕಣ್ಣು ನೆಟ್ಟಿದೆ.
MUST WATCH : CAUGHT ON CAMERA | ಸರ್ಕಾರಿ ಕಚೇರಿಯಲ್ಲೇ ಎಣ್ಣೆ ಗಮತ್ತು- ನೀರಿಗೆ ಎಣ್ಣೆ ಮಿಕ್ಸ್ ಮಾಡಿ ಪಾರ್ಟಿ ಮಾಡಿದ್ರು




