BBK 12: ಅಶ್ವಿನಿ-ಜಾನ್ವಿ ಸೇರಿಕೊಂಡು ರಕ್ಷಿತಾ ಶೆಟ್ಟಿಯನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತು ಕಳೆದ ಎರಡು ಮೂರಿ ದಿನಗಳಿಂದ ಕೇಳಿ ಬರುತ್ತಿತ್ತು. ಇದಕ್ಕೆ ಬಲವಾದ ಸಾಕ್ಷಿ ಇಂದು ಸಿಕ್ಕಿದೆ.

BBK 12: ಅಶ್ವಿನಿ ಮತ್ತು ಜಾನ್ವಿ ವಿರುದ್ಧ ಸಿಡಿದ ಬಿಗ್ ಬಾಸ್ ಪ್ರಿಯರು
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಪ್ರಾರಂಭವಾಗಿ ಈಗ ಮೂರು ವಾರಗಳತ್ತ ಪಯಣಿಸುತ್ತಿದೆ. ಪ್ರತಿ ವಾರ ಹೊಸ ವಿವಾದ, ಹೊಸ ಟಾಸ್ಕ್, ಹೊಸ ಎಮೋಶನ್ಗಳು ಮನೆಮಾಡುತ್ತಿವೆ.
ಆದರೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಲ್ಲಿರುವುದು — ಅಶ್ವಿನಿ ಗೌಡ ಮತ್ತು ಜಾನ್ವಿ ವಿರುದ್ಧದ ವೀಕ್ಷಕರ ಆಕ್ರೋಶ.
ಕಳೆದ ಎರಡು ಮೂರು ದಿನಗಳಿಂದಲೇ “ಅಶ್ವಿನಿ ಮತ್ತು ಜಾನ್ವಿ ಸೇರಿಕೊಂಡು ರಕ್ಷಿತಾ ಶೆಟ್ಟಿಯನ್ನು ತುಳಿಯುತ್ತಿದ್ದಾರೆ” ಎಂಬ ಮಾತು ಕೇಳಿ ಬರುತ್ತಿತ್ತು. ಇಂದಿನ ಪ್ರೋಮೋ ಇದಕ್ಕೆ ಬಲವಾದ ಸಾಕ್ಷಿಯಾಗಿದೆ.
ಅಲ್ಲಿ ಇಬ್ಬರೂ ರಕ್ಷಿತಾ ಮೇಲೆ ಅನಗತ್ಯವಾಗಿ ರೇಗಾಡಿದ ದೃಶ್ಯಗಳು ಪ್ರಸಾರವಾಗಿದ್ದು, ವೀಕ್ಷಕರು ಕಿಡಿ ಕಾರುತ್ತಿದ್ದಾರೆ.
“ಜಾಸ್ತಿ ಮಾತಾಡಬೇಡ, ಮುಚ್ಕೊಂಡ್ ಮಲಕೋ.. ಹೋಗಿ ನಿನ್ನ ಡ್ರಾಮಾನೆಲ್ಲಾ ಬಾತ್ರೂಮ್ನಲ್ಲಿ ಮಾಡು.. ಈಡಿಯೆಟ್!”
— ಈ ರೀತಿಯ ಮಾತುಗಳಿಂದ ಅಶ್ವಿನಿ ಮತ್ತು ಜಾನ್ವಿಯ ವರ್ತನೆಗೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
MUST READ : BBK 12 TRP : ಬಿಗ್ ಬಾಸ್ ಟಿಆರ್ಪಿ ಔಟ್
ವೀಕ್ಷಕರ ಆಕ್ರೋಶ
ಸೋಶಿಯಲ್ ಮೀಡಿಯಾದಲ್ಲಿ ಹಲವರು ಅಶ್ವಿನಿ ಮತ್ತು ಜಾನ್ವಿಗೆ “ಛೀಮಾರಿ” ಹಾಕುತ್ತಿದ್ದಾರೆ.ಜನರ ಅಭಿಪ್ರಾಯದ ಪ್ರಕಾರ, ಜಾನ್ವಿ ಈಗ ಅಶ್ವಿನಿಯ “ಚಮಚ” ಆಗಿದ್ದು, ಆಕೆ ಹೇಳಿದರೆ ತಲೆ ಆಡಿಸುತ್ತಿದ್ದಾರೆ ಎನ್ನಲಾಗಿದೆ.
“ರಕ್ಷಿತಾ ಶೆಟ್ಟಿಗೆ ಅನ್ಯಾಯ ಆಗುತ್ತಿದೆ. ಅಶ್ವಿನಿ ತಾನೇ ಸರ್ವಾಧಿಕಾರಿ ಎನ್ನುವಂತೆ ವರ್ತಿಸುತ್ತಿದ್ದಾರೆ” — ವೀಕ್ಷಕರ ಅಭಿಪ್ರಾಯ.
ಹಿಂದಿನ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಸುಧಿ ಕಾಕ್ರೋಚ್ ಅವರು ಅಶ್ವಿನಿಗೆ “ಈಯಮ್ಮ” ಎಂದು ಹೇಳಿದಾಗ ಆಕೆ ಆಕ್ರೋಶಗೊಂಡಿದ್ದರು. “ನನಗೆ ಹೆಸರಿದೆ, ಈಯಮ್ಮ ಎಂದು ಕರೆಯಬೇಡಿ” ಎಂದು ಕಿಚ್ಚ ಸುದೀಪ್ ಎದುರೇ ಹೇಳಿದ್ದರು.
ಆದರೆ ಇದೇ ಅಶ್ವಿನಿ, ಮನೆಯಲ್ಲಿರುವ ಇತರ ಸ್ಪರ್ಧಿಗಳಿಗೆ “ಕಾರ್ಟೂನ್”, “ಡುಮ್ಮಿ”, “ಫ್ರೀ ಪ್ರಾಡಕ್ಟ್” ಎಂದು ಕರೆಯುತ್ತಿದ್ದರು ಎಂಬುದೂ ವೀಕ್ಷಕರ ಗಮನಕ್ಕೆ ಬಂದಿದೆ.ಇದರಿಂದ ಜನರು ಕೇಳುತ್ತಿರುವ ಪ್ರಶ್ನೆ
“ತಾವು ಇತರರನ್ನು ಹೀಗೆ ಕರೆಯಬಹುದು ಆದರೆ ಯಾರಾದರೂ ನಿಮಗೆ ಅಡ್ಡ ಹೆಸರಲ್ಲಿ ಕರೆಯಿದರೆ ಅದಕ್ಕೆ ಕೋಪ ಏಕೆ?”
ಜನರ ಬೇಡಿಕೆ: ಸುದೀಪ್ ತರಾಟೆ ತೆಗೆದುಕೊಳ್ಳಲಿ
ವೀಕ್ಷಕರ ಅಭಿಪ್ರಾಯದ ಪ್ರಕಾರ, ಈ ವಾರದ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಅಶ್ವಿನಿ ಗೌಡ ಮತ್ತು ಜಾನ್ವಿಗೆ ಸ್ಪಷ್ಟ ಎಚ್ಚರಿಕೆ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ.
ಜನರಿಗೆ ಈಗ ಕುತೂಹಲ —ಸುದೀಪ್ ಈ ವಿವಾದದ ಬಗ್ಗೆ ಏನು ಹೇಳುತ್ತಾರೆ? ಅಶ್ವಿನಿ ಮತ್ತು ಜಾನ್ವಿಗೆ ಕ್ಲಾಸ್ ಇದ್ಯ ಎಂದು ಕಾದುನೋಡಬೇಕಿದೆ.
MUST WATCH : CAUGHT ON CAMERA | ಸರ್ಕಾರಿ ಕಚೇರಿಯಲ್ಲೇ ಎಣ್ಣೆ ಗಮತ್ತು- ನೀರಿಗೆ ಎಣ್ಣೆ ಮಿಕ್ಸ್ ಮಾಡಿ ಪಾರ್ಟಿ ಮಾಡಿದ್ರು




