
ARASIKERE NEWS : ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ದೊಡ್ಡಮೇಟಿಕುರ್ಕೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು 4 ಕೋಟಿ 5 ಲಕ್ಷ ವೆಚ್ಚದಲ್ಲಿ ರಸ್ತೆ ಅಗಲೀಕರಣ, ವಿಭಜಕ ಹಾಗೂ ಹೈಮಾಸ್ಕ್ ಲೈಟ್ ಕಾಮಗಾರಿಗೆ ಶಾಸಕ ಕೆ.ಎಂ ಶಿವಲಿಂಗೇಗೌ ಡ ಗುದ್ದಲಿ ಪೂಜೆ ನೇರವೇರಿಸಿದ್ರು.
ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಶಾಸಕ ಶಿವಲಿಂಗೇಗೌಡ ಅವರು ಮಾತನಾಡಿ ನಾನು ವೋಟಿಗೋಸ್ಕರ ರಾಜಕೀಯ ಮಾಡಲ್ಲ, ನಾಲ್ಕು ಬಾರಿ ಅರಸೀಕೆರೆ ಶಾಸಕನಾಗಿ ಗೆದ್ದಿದ್ದೇನೆ, ಯಾರೂ ಏನೂ ಹೇಳಿದ್ರು ನಾ ನು ಆ ವಿಷಯಕ್ಕೆ ಕೇರ್ ಮಾಡಲ್ಲ. ನನಗೆ ವೋಟ್ ಹಾಕಿದೋರಿಗೂ, ಹಾಕದವರಿಗೂ ಹಾಗೂ ಅರಸೀಕೆರೆ ಕ್ಷೇತ್ರದ ಎಲ್ಲಾ ಜನರಿಗೆ ಸೌಲಭ್ಯ ಸಿಗುವ ರೀತಿ ನಾನು ಕೆಲಸ ಮಾಡ್ತೇನೆ ಎಂದ್ರು.
ಇನ್ನು ಈ ವೇಳೆ ಗುತ್ತಿಗೆದಾರ ಬಸವರಾಜು, ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿ ಯರ್ ಮಲ್ಲೇಶ್, ಮುಖಂಡರಾದ ಮೇಟಿಕುರ್ಕೆ ಸುರೇಶ್, ರಾಂಪುರ ಸುರೇಶ್, ಮೈಲಾರಪ್ಪ ಸೇರಿದಂ ತೆ ಗ್ರಾಮ ಪಂಚಾಯತಿ ಅಧ್ಯಕ್ಷ ರು, ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ರು.





need more